ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಃ ಸಮಾಜದ ಸಂಭ್ರಮ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ:

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಶನಿವಾರ ಹಡಪದ ಸಮಾಜ ಬಾಂಧವರು ಜಮಾಯಿಸಿ ಬಸವೇಶ್ವರ ಪ್ರತಿಮೆಗೆ, ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ, ಹೂಮಾಲೆ ಹಾಕಿ, ಪಟಾಕ್ಷಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.

ಈ ಸಂದರ್ಭದಲ್ಲಿ ಹಡಪದ ಸಮಾಜದ ಹಿರಿಯ ಮುಖಂಡ ಗುರುಲಿಂಗಪ್ಪ ಹಡಪದ ಮಾತನಾಡಿ, ಹಡಪದ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶ ಹೊರಡಿಸುವ ಮೂಲಕ ನಮ್ಮ ಸಮಾಜಕ್ಕೆ ನ್ಯಾಯ ಕಲ್ಪಿಸಿದ ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಮಾಜ ಬಾಂಧವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಹಡಪದ ಅಭಿವೃದ್ಧಿ ನಿಗಮಕ್ಕೆ ರೂ.100 ಕೋಟಿ ಅನುದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಈ ಮೂಲಕ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುವಂತೆ ಕೈಜೋಡಿಸಬೇಕು. ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕರೂ ಆಗಿರುವ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪಟ್ಟಣದಲ್ಲಿ ನಮ್ಮ ಸಮಾಜದ ಸಮುದಾಯ ಭವನಕ್ಕೆ ರೂ.25 ಲಕ್ಷ ಅನುದಾನ ನೀಡಿದ್ದಾರೆ. ಹಡಪದ ಅಪ್ಪಣ್ಣ ಜನ್ಮಸ್ಥಳ ಮಸಬಿನಾಳ ಗ್ರಾಮದ ಅಭಿವೃದ್ಧಿಗೆ ರೂ.50 ಲಕ್ಷ ಅನುದಾನವನ್ನು ಸಚಿವರು ನೀಡಿದ್ದಾರೆ. ಸಚಿವರು ಮುಂಬರುವ ದಿನಗಳಲ್ಲಿ ಸಮುದಾಯ ಭವನಕ್ಕೆ ಹೆಚ್ಚುವರಿಯಾಗಿ ರೂ. 25 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸುವ ಮೂಲಕ ಸಮಾಜ ಬಾಂಧವರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವದು ಸ್ವಾಗತಾರ್ಹ. ಈ ಸಮಾಜ ಬಾಂಧವರು ಕಾಯಕ ಜೀವಿಗಳಾಗಿದ್ದಾರೆ. ಇವರ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾ ಇರುತ್ತದೆ. ಸಚಿವ ಶಿವಾನಂದ ಪಾಟೀಲರು ಹಡಪದ ಸಮುದಾಯ ಭವನಕ್ಕೆ, ಹಡಪದ ಅಪ್ಪಣ್ಣ ಜನಿಸಿದ ಮಸಬಿನಾಳ ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ಸಮಾಜ ಬಾಂಧವರು ಸರ್ಕಾರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ರಾಷ್ಟ್ರೀಯ ಬಸವಸೈನ್ಯ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ ಮಾತನಾಡಿದರು.

ಸಂಭ್ರಮಾಚರಣೆಯಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಜಟ್ಟಿಂಗರಾಯ ಮಾಲಗಾರ, ಮತಾಬ ಬಮ್ಮನಳ್ಳಿ, ಹಡಪದ ಸಮಾಜ ತಾಲೂಕಾಧ್ಯಕ್ಷ ಮಹಾಂತೇಶ ಹಡಪದ, ಪ್ರಲ್ಹಾದ ಹಡಪದ, ಸುಭಾಸ ಹಡಪದ, ಅಶೋಕ ಬಾಗೇವಾಡಿ, ಮಲ್ಲಿಕಾರ್ಜುನ ಹಡಪದ, ಕಲ್ಲಪ್ಪ ಹಡಪದ, ಚಂದ್ರಾಮ ಹಡಪದ, ಶಿವಪ್ಪ ತುಂಬಗಿ, ಮಹೇಶ ನಾಗೂರ, ಶರಣು ಹಡಪದ, ಗದಿಗೆಪ್ಪ ಹಡಪದ, ಶಾಂತು ಚಿಕ್ಕೂರ, ರಾಜು ಹಡಪದ, ಬಸವರಾಜ ಕೋರವಾರ, ಸಂಗಮೇಶ ಹಡಪದ, ಬಸವರಾಜ ಮುತ್ತಗಿ, ಈರಣ್ಣ ಹಡಪದ, ಮುತ್ತು ಹಡಪದ, ಮನ್ನಾಬ ಶಾಬಾದಿ, ಸಂಗಮೇಶ ಜಾಲಗೇರಿ ಇತರರು ಇದ್ದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *