ಹಂದಿಗುಂದದಲ್ಲಿ ಲಿಂಗಾಯತ ಮಹಿಳಾ ಸಮಾವೇಶ, ಸಾವಿರ ಕಂಠ ವಚನ ಪಾರಾಯಣ

ಮಹಿಳಾ ಸಮಾವೇಶ ಪತ್ರಿಕೆ ಬಿಡುಗಡೆ ಮಾಡಿದ ಶಿವಾನಂದ ಸ್ವಾಮೀಜಿ

ಪಾಲಬಾವಿ:

ಹಂದಿಗುಂದ ಗ್ರಾಮದ ಆರಾಧ್ಯದೇವರಾದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ 50ನೇ ಜಾತ್ರಾ ಮಹೋತ್ಸವ ಹಾಗೂ ವಚನ ರಥೋತ್ಸವ ಕಾರ್ಯಕ್ರಮವು ಜನೇವರಿ 30 ಹಾಗೂ 31ರಂದು ಜರುಗುತ್ತಿದೆ.

31ರಂದು ಬೆಳಗಾವಿ ಜಿಲ್ಲಾ ಕದಳಿ ವೇದಿಕೆಯ ಸಹಯೋಗದಲ್ಲಿ ಲಿಂಗಾಯತ ಮಹಿಳಾ ಸಮಾವೇಶ ಹಾಗೂ ಸಾವಿರ ಕಂಠ ವಚನ ಪಾರಾಯಣ ಕಾರ್ಯಕ್ರಮವು ಜರುಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶರಣ ಸದ್ಭಕ್ತರು, ಶರಣ ತಾಯಂದಿರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಗುರುವಾರ ಹಂದಿಗುಂದದ ಸಿದ್ದೇಶ್ವರ ವಿರಕ್ತಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳು ಡಾ. ವಿಜಯಶ್ರೀ ಕೋರಿಶೆಟ್ಟಿ ಅವರು ಆಯ್ಕೆಯಾಗಿದ್ದು, ಪ್ರೊ ಶಾಲಿನಿತಾಯಿ ದೊಡ್ಡಮನಿ ಅವರಿಗೆ “ಕದಳಿಶ್ರೀ” ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಸಿದ್ದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು, ಜಿಲ್ಲಾ ಕದಳಿ ವೇದಿಕೆಯು ಸಮಾಜದಲ್ಲಿಯ ಎಲೆಮರೆಕಾಯಿಯಂತಿರುವ ಸಾಧಕ ಮಹಿಳೆಯರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹೆಮ್ಮೆಯ ವಿಷಯವಾಗಿದೆ. ಹಂದಿಗುಂದ ಗ್ರಾಮದಲ್ಲಿ ಲಿಂಗಾಯತ ಮಹಿಳಾ ಸಮಾವೇಶವು ನಡೆಯುತ್ತಿರುವುದು ತುಂಬಾ ಸಂತೋಷವೆನಿಸುತ್ತಿದೆ. ಕಾರ್ಯಕ್ರಮದಲ್ಲಿ ಎಲ್ಲಾ ತಾಯಂದಿರು, ಶರಣ ಸದ್ಭಕ್ತರು ಭಾಗವಹಿಸಬೇಕು. ಮಹಿಳಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಗುಡಸಿ, ಕದಳಿ ವೇದಿಕೆಯ ತಾಲೂಕ ಅಧ್ಯಕ್ಷೆ ಅನುಸೂಯಾ ಮುಳವಾಡ ಮಾತನಾಡಿದರು.

ವೇದಿಕೆ ಮೇಲೆ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ನಿವೃತ್ತ ಯೋಧ ಬಸವರಾಜ ಬಡಿಗೇರ, ಕದಳಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌರಮ್ಮ ಕರ್ಕಿ, ಚಿಕ್ಕೋಡಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ. ಚಂದ್ರಶೇಖರ ಗುಡಸಿ, ಶೇಖರ ಮುಳವಾಡ, ಕದಳಿ ವೇದಿಕೆಯ ತಾಲೂಕ ಅಧ್ಯಕ್ಷೆ ಅನುಸೂಯಾ ಮುಳವಾಡ, ತಾಲೂಕು ಕಾರ್ಯದರ್ಶಿ ಆಶಾ ನಾವಿ, ಸುರೇಖಾ ಗುಡಸಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೀತಾ ಡೋಣೂರ, ಶಕುಂತಲಾ ಚಿಲ್ಲಾಳಶೆಟ್ಟಿ, ಶಿಕ್ಷಕಿ ಜಯಶ್ರೀ ಪತ್ತಾರ, ರೇಣುಕಾ ಪರಮಶೆಟ್ಟಿ, ಶಾರವ್ವ ಚಿಲ್ಲಾಳಶೆಟ್ಟಿ, ನಿವೃತ್ತ ಸೈನಿಕ ಬಸವರಾಜ ಬಡಿಗೇರ, ಮಹೇಶ ಸಬರದ, ಮಹಾಲಿಂಗ ಗುಂಜಟ್ಟಿ, ಹಂದಿಗುಂದ ಗ್ರಾಮದ ಅಕ್ಕನ ಬಳಗದ ಹಿರಿಯರು ಮಹಾದೇವಿ ತೇರದಾಳ, ಸುನಂದಾ ಶೆಲ್ಲಿಕೇರಿ, ರುಕ್ಮಿಣಿ ಬೆಳವಣಕಿ, ಗ್ರಾಪಂ ಸದಸ್ಯೆ ದ್ರಾಕ್ಷಾಯಿಣಿ ಅಂದಾನಿ, ಸಾವಿತ್ರಿ ನಾವಿ, ಭಾರತಿ ಮಿರ್ಜಿ, ಲಲಿತಾ ಭಜಂತ್ರಿ, ಮಹಾನಂದಾ ಚೌಗಲಾ, ದ್ರಾಕ್ಷಾಯಿಣಿ ನಾವಿ, ಬಾಗವ್ವ ಬಂದಿ, ಮಹಾದೇವಿ ಮಠಪತಿ, ಶಾರವ್ವ ಚಿನಗುಂಡಿ, ರಾಜಶ್ರೀ ಪಾಟೀಲ, ಗೀತಾ ಸುಳ್ಳಣ್ಣವರ, ಸುಶೀಲಾ ಕ್ಯಾಸ್ತಿ ಇದ್ದರು.

ನಿವೃತ್ತ ಉಪನ್ಯಾಸಕ ಡಾ. ಚಂದ್ರಶೇಖರ ಗುಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ನಿವೃತ್ತ ಯೋಧ ಬಸವರಾಜ ಬಡಿಗೇರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *

ಶಿವಾಜಿ ಮೇತ್ರಿ, ಪಾಲಬಾವಿ, ರಾಯಬಾಗ