‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ: ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಮಠಾಧೀಶರನ್ನು ಕೊಟ್ಟರು ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ನಡೆದ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ 157ನೇ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸುಂದರ ಸಮಾಜ ಕಟ್ಟುವುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಶಿವಯೋಗ ಮಂದಿರ ಸ್ಥಾಪಿಸಿ, ಅಲ್ಲಿ ಮಠಾಧೀಶರಾಗ ಬಯಸುವವರಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ತರಬೇತಿ ನೀಡಿದ್ದರು. ಈಗ ಪ್ರತಿ ಊರಲ್ಲೂ ಮಠಾಧೀಶರನ್ನು ಕಾಣುತ್ತಿರುವುದರ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮಾಜ ಸಂಘಟನೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿಸಿದ್ದರು. ಗದುಗಿನ ಪುಣ್ಯಾಶ್ರಮವನ್ನು ಎತ್ತರಕ್ಕೆ ಬೆಳೆಸಿದ್ದರು. ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಜನರಲ್ಲಿ ಆಧ್ಯಾತ್ಮದ ಒಲವು ಬೆಳೆಸಿದ್ದರು. ಬಡವರು, ದೀನ- ದಲಿತರ ಬಗ್ಗೆ ಅವರಿಗೆ ಬಹಳ ಕಾಳಜಿ ಇತ್ತು. ಸಮಾಜಕ್ಕೆ ಅವರ ಕೊಡುಗೆ ವರ್ಣನಾತೀತ ಎಂದರು.

ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ಉಮಾಕಾಂತ ಪ್ರಭಾ, ರಮೇಶ ಪ್ರಭಾ, ಧನರಾಜ ಪಾಟೀಲ, ಬಸಯ್ಯ ಸ್ವಾಮಿ, ರಾಜಕುಮಾರ ಪಾಟೀಲ, ಅನಿಲ್ ಬಾಳೂರೆ, ಕಾಶೀನಾಥ ಧರ್ಮಣ್ಣ, ರಾಜು ಕುಂಬಾರ, ಶೇಷಪ್ಪ ಧರ್ಮಣ್ಣ, ರಾಜು ಪ್ರಭಾ, ಅಮರ ಪ್ರಭಾ ಮತ್ತಿತರರು ಇದ್ದರು.

Share This Article
Leave a comment

Leave a Reply

Your email address will not be published. Required fields are marked *