ಹಾವೇರಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
24Posts
Auto Updates

ಬಸವ ಸಂಸ್ಕೃತಿ ಅಭಿಯಾನ – 14ನೇ ದಿನ ಲೈವ್ ಬ್ಲಾಗ್

Contents
ಮಂಗಲಸಮಾರೋಪದ ಜವಾಬ್ದಾರಿಆಶೀರ್ವಚನಉಪನ್ಯಾಸ: ಡಾ ಶಂಭು ಬಳಿಗಾರಸಾರ್ವಜನಿಕ ಸಮಾವೇಶ ಆರಂಭಹಾವೇರಿ ಸಾಮರಸ್ಯ ನಡಿಗೆಯಲ್ಲಿ ಸಾವಿರಾರು ಬಸವ ಭಕ್ತರುಸಾಮರಸ್ಯ ನಡಿಗೆಸಂವಾದ ಮುಕ್ತಾಯಮಠಗಳಲ್ಲಿ ಗದ್ದಿಗೆ ಪೂಜೆ ಯಾಕೆ?ವಿದ್ಯಾರ್ಥಿ: ಶರಣ ಅಂದ್ರೆ ಯಾರು ಶರಣನಾಗಲು ಏನು ಮಾಡಬೇಕು?ಫೋಟೋಗಳಲ್ಲಿ ಸಂವಾದಪ್ರಶ್ನೆ: ಸಣ್ಣ ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರಗಳು ಶುರುವಾಗಬೇಕು.ಪ್ರಶ್ನೆ: ಮೂರ್ತಿ ಪೂಜೆಯ ಬಗ್ಗೆ ಬಸವಾದಿ ಶರಣರು ಹೇಳಿದ್ದೇನು?ಪಾಪ, ಪುಣ್ಯ ಅಂದರೆ ಏನು?ಪ್ರಶ್ನೆ: ದೀಕ್ಷೆ ತೆಗೆದುಕೊಳ್ಳಲು, ಕೊಡಲು ಅರ್ಹತೆಗಳೇನು?ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪ ಯಾಕೆ ಸ್ಥಳಾಂತವಾಗಲಿಲ್ಲ?ಪ್ರಶ್ನೆ: ಬಸವ ಧರ್ಮಕ್ಕೆ ಇಷ್ಟಲಿಂಗ ಕಡ್ಡಾಯವೇ?ಪ್ರಶ್ನೆ: ಪೂಜೆ ಮಾಡಿದರೆ ಏನಾಗುತ್ತದೆ?ಪ್ರಶ್ನೆ: ಭಕ್ತಿ ಎಂದರೇನು?ಪ್ರಶ್ನೆ: ಬಸವ ಧರ್ಮಕ್ಕೆ ಇಷ್ಟಲಿಂಗ ಕಡ್ಡಾಯವೇ?ಸಂವಾದಷಟಸ್ಥಲ ಧ್ವಜಾರೋಹಣಇಂದಿನ ಕಾರ್ಯಕ್ರಮಸಂವಾದ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ
2 months agoSeptember 14, 2025 8:02 pm

ಮಂಗಲ

ಗಂಗಾ ಮಾತಾಜಿಯಿಂದ ಮಂಗಲ ನುಡಿ. ಜಯಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಳಗೊಂಡಿತು.

2 months agoSeptember 14, 2025 8:04 pm

ಸಮಾರೋಪದ ಜವಾಬ್ದಾರಿ

ಅಕ್ಟೋಬರ್ 5 ಬೆಂಗಳೂರಿನಲ್ಲಿ ನಡೆಯುವ ಅಭಿಯಾನದ ಸಮಾರೋಪಕ್ಕೆ ಹಾವೇರಿಯಿಂದ ಜನರನ್ನು ಸಂಘಟಿಸುವ ಜವಾಬ್ದಾರಿ ಶಿವಯೋಗಿ ಮಾಮಲಶೆಟ್ಟಿ ಅವರಿಗೆ ನೀಡಿದ್ದಾರೆ.

2 months agoSeptember 14, 2025 7:02 pm

ಆಶೀರ್ವಚನ

ನಿಜಗುಣಾನಂದ ಶ್ರೀಗಳು, ಧಾರವಾಡದ ಮುರುಘಾ ಮಠದ ಧಾರವಾಡದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಭಾಲ್ಕಿ ಶ್ರೀಗಳು

2 months agoSeptember 14, 2025 6:39 pm

ಉಪನ್ಯಾಸ: ಡಾ ಶಂಭು ಬಳಿಗಾರ

ವಿಷಯ: ಜಾನಪದದಲ್ಲಿ ಶರಣರು

2 months agoSeptember 14, 2025 6:28 pm

ಸಾರ್ವಜನಿಕ ಸಮಾವೇಶ ಆರಂಭ

ಬಸವಕಲ್ಯಾಣ ಸದ್ಗುರು ಬಸವಪ್ರಭು ಸ್ವಾಮೀಜಿಯವರಿಂದ ಅನುಭಾವ.

2 months agoSeptember 14, 2025 5:38 pm

ಹಾವೇರಿ ಸಾಮರಸ್ಯ ನಡಿಗೆಯಲ್ಲಿ ಸಾವಿರಾರು ಬಸವ ಭಕ್ತರು

2 months agoSeptember 14, 2025 5:14 pm

ಸಾಮರಸ್ಯ ನಡಿಗೆ

ಹುಕ್ಕೇರಿ ಮಠದಿಂದ ಆರಂಭವಾದ ಸಾಮರಸ್ಯ ನಡಿಗೆ, ಗಾಂಧೀ ರಸ್ತೆ ಮೂಲಕ ರಜನಿ ಸಭಾಂಗಣದವರೆಗೆ ಸಾಗುತ್ತಿದೆ.

2 months agoSeptember 14, 2025 1:10 pm

ಸಂವಾದ ಮುಕ್ತಾಯ

ಕಲ್ಯಾಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯ

2 months agoSeptember 14, 2025 12:51 pm

ಮಠಗಳಲ್ಲಿ ಗದ್ದಿಗೆ ಪೂಜೆ ಯಾಕೆ?

ಈ ರೀತಿ ಪೂಜೆ, ರುದ್ರಾಭಿಷೇಕಗಳಿಗೆ ಬಸವ ತತ್ವದಲ್ಲಿ ಅವಕಾಶವಿಲ್ಲ. 12ನೇ ಶತಮಾನದ ನಂತರ ಲಿಂಗಾಯತ ಧರ್ಮ ವೈದಕೀಕರಣಗೊಂಡಿದೆ. ಒಕ್ಕೊಟದ ಕಡೆಯಿಂದ ನಿಧಾನವಾಗಿ ಶುದ್ದೀಕರಣ ಮಾಡಬೇಕು.

ಗದ್ದಿಗೆಗಳು ಸ್ಮಾರಕಗಳು. ಅಲ್ಲಿ ಪುಷ್ಪ ಇಟ್ಟು, ವಚನ ಹೇಳಿ ಗೌರವಿಸಬೇಕು.

(ಉತ್ತರ ಭಾಲ್ಕಿ ಶ್ರೀ)

2 months agoSeptember 14, 2025 12:42 pm

ವಿದ್ಯಾರ್ಥಿ: ಶರಣ ಅಂದ್ರೆ ಯಾರು ಶರಣನಾಗಲು ಏನು ಮಾಡಬೇಕು?

ಅರಿವು ಆಚಾರ ಅನುಭಾವ ಒಂದಾದವ ಶರಣ. ಕಾಯಕಶೃದ್ಧೆ, ಸಮಾಜ ನನ್ನದು ಎಂದು ಭಾವಿಸಿ ಕಾರ್ಯಪ್ರವೃತ್ತನಾದವ ಶರಣನಾಗುತ್ತಾನೆ.

(ಉತ್ತರ ಸಾಣೇಹಳ್ಳಿ ಶ್ರೀ)

2 months agoSeptember 14, 2025 12:31 pm

ಫೋಟೋಗಳಲ್ಲಿ ಸಂವಾದ

2 months agoSeptember 14, 2025 12:17 pm

ಪ್ರಶ್ನೆ: ಸಣ್ಣ ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರಗಳು ಶುರುವಾಗಬೇಕು.

ಈ ಕೇಂದ್ರಗಳ ಅಗತ್ಯವಿದೆ, ಅಭಿಯಾನ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ. ವಚನಗಳು ಸಂಜೀವಿನಿಯಿದ್ದಂತೆ ಓದಿದರೆ ಸಂಸ್ಕಾರ ಬರುತ್ತದೆ. ಅನುಭವ ಮಂಟಪದಲ್ಲಿ ಮಕ್ಕಳಿಗೆ ಪಠ್ಯ ರೂಪಿಸಲಾಗಿದೆ, ಒಕ್ಕೊಟದಲ್ಲಿಯೂ ಚರ್ಚೆಯಾಗುತ್ತಿದೆ.

(ಉತ್ತರ ಭಾಲ್ಕಿ ಶ್ರೀ)

2 months agoSeptember 14, 2025 12:16 pm

ಪ್ರಶ್ನೆ: ಮೂರ್ತಿ ಪೂಜೆಯ ಬಗ್ಗೆ ಬಸವಾದಿ ಶರಣರು ಹೇಳಿದ್ದೇನು?

ಶರಣರು ಮೂರ್ತಿ ಪೂಜೆ ಖಂಡಿಸಿದರು. ಯಾವ ದೇವಾಲಯದಲ್ಲಿ ಸರ್ವರಿಗೂ ಪ್ರವೇಶವಿಲ್ಲವೋ ಅದನ್ನು ನಿರಾಕರಿಸಿ ಅಂಗದ ಮೇಲೆ ಲಿಂಗ ಪೂಜೆ ಮಾಡುವುದನ್ನು ಕಲಿಸಿದರು. ಕೊರೊನ ಸಮಯದಲ್ಲಿ ತಿರುಪತಿಯಲ್ಲಿ ಪೂಜೆ ಬಂದಾದರೂ ಇಷ್ಟಲಿಂಗ ಪೂಜೆ ನಿಲ್ಲಲಿಲ್ಲ.

(ಉತ್ತರ ಭಾಲ್ಕಿ ಶ್ರೀಗಳು)

2 months agoSeptember 14, 2025 12:15 pm

ಪಾಪ, ಪುಣ್ಯ ಅಂದರೆ ಏನು?

ಇವೆಲ್ಲ ಸತ್ತ ಮೇಲೆ ಬರುವಂತದಲ್ಲ. ಈ ಜೀವನದಲ್ಲಿಯೇ ಒಳ್ಳೆ ಕೆಲಸ ಮಾಡಿದರೆ ಪುಣ್ಯ, ಕೆಟ್ಟ ಕೆಲಸ ಮಾಡಿದರೆ ಪಾಪ.

(ಉತ್ತರ ಸಾಣೇಹಳ್ಳಿ ಶ್ರೀ)

2 months agoSeptember 14, 2025 12:13 pm

ಪ್ರಶ್ನೆ: ದೀಕ್ಷೆ ತೆಗೆದುಕೊಳ್ಳಲು, ಕೊಡಲು ಅರ್ಹತೆಗಳೇನು?

ದೀಕ್ಷೆ ತೆಗೆದುಕೊಳ್ಳಲು ಬಸವಣ್ಣನವರಲ್ಲಿ, ಇಷ್ಟ ಲಿಂಗದಲ್ಲಿ ನಂಬಿಕೆ ಇರಬೇಕು. ದುರ್ಗುಣ ತ್ಯಜಿಸಬೇಕು. ಗುರು ಜ್ಞಾನಿಯಾಗಿರಬೇಕು, ಆಚಾರ ವಿಚಾರಗಳ ಅರಿವಿರಬೇಕು. ಜಾತಿಭೇದವಿಲ್ಲದೆ ಯಾರು ಬೇಕಾದರೂ ದೀಕ್ಷೆ ತೆಗೆದುಕೊಳ್ಳಬಹುದು ಅಥವಾ ನೀಡಬಹುದು.

(ಉತ್ತರ ಭಾಲ್ಕಿ ಶ್ರೀ)

2 months agoSeptember 14, 2025 12:04 pm

ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪ ಯಾಕೆ ಸ್ಥಳಾಂತವಾಗಲಿಲ್ಲ?

ಕಲ್ಯಾಣದಲ್ಲಿ ಅನುಭವ ಮಂಟಪ 36 ವರ್ಷ ನಡೆಯಿತು. ಅದು ಕಟ್ಟಡವಲ್ಲ, ಸ್ಥಾವರವಲ್ಲ. ಅದಕ್ಕೆ ಸ್ಥಳಾಂತದ ಪ್ರಶ್ನೆಯೇ ಬರಲಿಲ್ಲ. ಈಗ ಸ್ಮಾರಕವಾಗಿ ಸರಕಾರ ಅನುಭವ ಮಂಟಪ ಕಟ್ಟುತ್ತಿದೆ.

(ಉತ್ತರ ಬಸವ ಪ್ರಭು ಶ್ರೀ)

2 months agoSeptember 14, 2025 11:59 am

ಪ್ರಶ್ನೆ: ಬಸವ ಧರ್ಮಕ್ಕೆ ಇಷ್ಟಲಿಂಗ ಕಡ್ಡಾಯವೇ?

ಕಾಯಕ, ದಾಸೋಹ, ಇಷ್ಟಲಿಂಗ ದೀಕ್ಷೆ ಬಸವ ಧರ್ಮಕ್ಕೆ ಕಡ್ಡಾಯ. ಕೆಲವರು ವೈಚಾರಿಕವಾಗಿ ಮಾತ್ರ ಧರ್ಮ ಪಾಲಿಸುತ್ತೇವೆ ಎನ್ನುತ್ತಾರೆ. ಅದು ತಪ್ಪು. ಸಿದ್ದಾಂತ, ಆಚಾರ, ವಿಚಾರ ಬೇಕು.

(ಉತ್ತರ ಸಾಣೇಹಳ್ಳಿ ಶ್ರೀ)

2 months agoSeptember 14, 2025 11:59 am

ಪ್ರಶ್ನೆ: ಪೂಜೆ ಮಾಡಿದರೆ ಏನಾಗುತ್ತದೆ?

ಮನಸ್ಸು, ಭಾವ ಸ್ವಚ್ಛವಾಗುತ್ತದೆ.

(ಭಾಲ್ಕಿ ಶ್ರೀ ಉತ್ತರ)

2 months agoSeptember 14, 2025 11:58 am

ಪ್ರಶ್ನೆ: ಭಕ್ತಿ ಎಂದರೇನು?

ಅಪಾರ ಚೈತನ್ಯ ನಮ್ಮಲಿದೆ, ಅದೇ ದೇವರು. ದೇವರ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡು ತನ್ನನ್ನು ತಾನೇ ಅರ್ಪಿಸಕೊಳ್ಳುವುದೇ ಭಕ್ತಿ.

(ಸಾಣೇಹಳ್ಳಿ ಶ್ರೀ ಉತ್ತರ)

2 months agoSeptember 14, 2025 11:51 am

ಪ್ರಶ್ನೆ: ಬಸವ ಧರ್ಮಕ್ಕೆ ಇಷ್ಟಲಿಂಗ ಕಡ್ಡಾಯವೇ?

ಕಾಯಕ, ದಾಸೋಹ, ಇಷ್ಟಲಿಂಗ ದೀಕ್ಷೆ ಬಸವ ಧರ್ಮಕ್ಕೆ ಕಡ್ಡಾಯ. ಕೆಲವರು ವೈಚಾರಿಕವಾಗಿ ಮಾತ್ರ ಧರ್ಮ ಪಾಲಿಸುತ್ತೇವೆ ಎನ್ನುತ್ತಾರೆ. ಅದು ತಪ್ಪು. ಸಿದ್ದಾಂತ, ಆಚಾರ, ವಿಚಾರ ಬೇಕು.

(ಉತ್ತರ ಸಾಣೇಹಳ್ಳಿ ಶ್ರೀ)

2 months agoSeptember 14, 2025 11:50 am

ಸಂವಾದ

ಶೇಗುಣಸಿ ಮಹಾಂತಪ್ರಭು ಶ್ರೀಗಳಿಂದ ಪ್ರಾಸ್ತಾವಿಕ ಮಾತು.

2 months agoSeptember 14, 2025 11:05 am

ಷಟಸ್ಥಲ ಧ್ವಜಾರೋಹಣ

ವರ್ತಕರ ಸಂಘದ ಅಧ್ಯಕ್ಷ ಗುರುಬಸಪ್ಪ (ಅಜಿತ್) ಜಿ. ಮಾಗಾವಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯರು, ಗಣ್ಯರು ಉಪಸ್ಥಿತರಿದ್ದರು.

2 months agoSeptember 14, 2025 10:27 am

ಇಂದಿನ ಕಾರ್ಯಕ್ರಮ

ಸಂವಾದ
ಮುಂಜಾನೆ 10:30ಕ್ಕೆ ದಾನೇಶ್ವರಿ ನಗರ, ರಜನಿ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ವಚನ ಸಂವಾದ.

ಮೆರವಣಿಗೆ
ಮಧ್ಯಾಹ್ನ 3:30 ಗಂಟೆಗೆ ಸಾಮರಸ್ಯ ನಡಿಗೆ-ಮೆರವಣಿಗೆ ಹುಕ್ಕೇರಿ ಮಠದಿಂದ ಗಾಂಧಿ ರಸ್ತೆ ಮೂಲಕ ರಜನಿ ಸಭಾಂಗಣದವರೆಗೆ.

ಸಾರ್ವಜನಿಕ ಸಮಾವೇಶ
ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾರಂಭ ರಜನಿ ಸಭಾಂಗಣದಲ್ಲಿ.

ನಾಟಕ
ರಾತ್ರಿ 9 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.

2 months agoSeptember 14, 2025 10:21 am

ಸಂವಾದ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ

Share This Article
Leave a comment

Leave a Reply

Your email address will not be published. Required fields are marked *