ಬೆಳಗಾವಿ:
ಸಮಾಜದಲ್ಲಿ ಸಾವಿರಾರು ಮಕ್ಕಳು ಹಸಿವಿನಿಂದ, ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಕುಡಿಯಲಾರದ ಹಾವಿಗೆ ಹಾಲೆರೆಯುವ ಬದಲು, ಬಡ ಮಕ್ಕಳಿಗೆ ನೀಡಿದಾಗ ಸಮಾಜ ಪರಿವರ್ತನೆ ಕಾಣಲಿದೆ ಎಂದು ಯುವನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಸಮೀಪದ ಕಣಬರಗಿಯ ಮಹೇಶ ಪೌಂಢೇಶನ್ ನಲ್ಲಿ ಮಾನವ ಬಂಧುತ್ವ ವೇದಿಕೆ, ಬಸವಪರ & ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘ ಹಾಗೂ ಮಹೇಶ ಪೌಂಢೇಶನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಬಸವ ಪಂಚಮಿ” ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
21ನೇ ಶತಮಾನದಲ್ಲಿದ್ದೇವೆ, ಕುಡಿಯದು ಹಾವಿಗೆ ಹಾಲೆರೆಯುವುದು ಸರಿಯೇ ಎಂದು ವಿದ್ಯಾವಂತರು ಯೋಚಿಸಬೇಕು. ಹಾಲನ್ನು ವ್ಯರ್ಥಮಾಡದೇ ಅವಶ್ಯಕತೆ ಇರುವ ಬಡಮಕ್ಕಳಿಗೆ ನೀಡಿದರೆ ಸಾರ್ಥಕವಾಗುತ್ತದೆ.
ಬುದ್ದ, ಬಸವ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಮಾಜವನ್ನು ಎಚ್ಚರಿಸಿದ ಮಹಾನ್ ಪುರುಷರು, ಸಮ ಸಮಾಜ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಆದ್ದರಿಂದ ಅವರು ಕನಸಿನ ಸಮ ಸಮಾಜ ನಿರ್ಮಾಣವಾಗಬೇಕಾದರೆ ಯುವಪೀಳಿಗೆ ಮಹಾನ್ ಪುರುಷರ ದಾರಿಯಲ್ಲಿ ಸಾಗಬೇಕು ಎಂದು ರಾಹುಲ್ ಹೇಳಿದರು.
ಈ ವೇಳೆ ಹುಣಸಿಕೋಳ ಮಠದ ಶ್ರೀ ಸಿದ್ಧಬಸವ ದೇವರು, ಮಹೇಶ ಪೌಂಢೇಶನ್ ಸಂಸ್ಥಾಪಕ ಮಹೇಶ ಜಾಧವ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಬಸವಪರ ಸಂಘಟನೆಯ ಶಂಕರ ಗುಡಸ, , ಸಂತೋಷ ಗುಡದ, ಪ್ರಶಾಂತ ಪೂಜಾರಿ, ಪ್ರಕಾಶ ಬೊಮ್ಮಣ್ಣವರ, ಅಂಕುಶ ಪಾಟೀಲ, ಸಂತೋಷ ಪಾಟೀಲ, ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘದ ಪದಾದಿಕಾರಿಗಳು, ಮಹೇಶ ಪೌಂಢೇಶನ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.