ಹಿಂದೂ ಸಂವಿಧಾನ ಜಾರಿಗೆ ತರುವ ಆಶಯ ರಾಷ್ಟ್ರದ್ರೋಹ: ಸೌಹಾರ್ದ ವೇದಿಕೆ

(ಹಿಂದುತ್ವ ಸಂಘಟನೆಗಳು ಹೊಸ ಸಂವಿಧಾನ ರಚಿಸುವ ಪ್ರಯತ್ನದಲ್ಲಿದ್ದಾರೆಂದು ಬಂದಿರುವ ಮಾಧ್ಯಮ ವರದಿಗಳಿಗೆ ಸೌಹಾರ್ದ ವೇದಿಕೆಯ ಪ್ರತಿಕ್ರಿಯೆ.)

ಕಲಬುರಗಿ

ಹಿಂದುತ್ವವಾದಿಗಳು ಹಿಂದೂ ರಾಷ್ಟ್ರಕ್ಕಾಗಿ ತಮ್ಮದೆ ಸಂವಿಧಾನವೊಂದು ರೂಪಿಸಿಕೊಂಡಿದ್ದು ಅದನ್ನು ಕುಂಭಮೇಳದಲ್ಲಿ ಫೆಬ್ರವರಿ ೩ ರಂದು ಸಾರ್ವಜನಿಕಗೊಳಿಸುತ್ತಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದು ಮನುಸ್ಮೃತಿ ಮತ್ತು ಚಾಣಕ್ಯನ ಅರ್ಥಶಾಸ್ತ್ರದಲ್ಲಿನ ಅಂಶಗಳನ್ನು ಸೇರಿಸಿಕೊಂಡು ೫೦೧ ಪುಟಗಳಲ್ಲಿ ಸಿದ್ಧಗೊಂಡಿದೆಯೆಂದು ವರದಿಯಾಗಿದೆ.

ಮುಂದಿನ ದಿನಗಳಲ್ಲಿ ಬಾಬಾ ಸಾಹೇಬರು ಸಿದ್ಧಪಡಿಸಿದ ಸಂವಿಧಾನವನ್ನು ರದ್ದುಪಡಿಸಿ ಹಿಂದೂ ಸಂವಿಧಾನವನ್ನು ಜಾರಿಗೆ ತರುವ ಆಶಯವನ್ನು ವ್ಯಕ್ತ ಪಡಿಸಲಾಗಿದೆ. ಹಿಂದೂತ್ವದ ಉಗ್ರವಾದಿಗಳು ಭಾರತದ ಬಹುತ್ವ ಬದುಕನ್ನು ಸರ್ವನಾಶ ಮಾಡಿ ಸರ್ವಾಧಿಕಾರಿತ್ವವನ್ನು ನೆಲೆಗೊಳಿಸುವ ಹಂತದಲ್ಲಿ ಉದ್ಧಟತನ ಮೆರೆಯುತ್ತಿದ್ದಾರೆ. ಇದು ಖಂಡನಾರ್ಹ ಅಷ್ಟೇ ಅಲ್ಲ. ದೇಶ ವಿರೋಧಿ ಚಟುವಟಿಕೆಯಾಗಿದ್ದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂಥದ್ದಾಗಿದೆ.

ಇಂಥ ರಾಷ್ಟ್ರದ್ರೋಹಿಗಳಿಂದ ಪ್ರಜಾಸತ್ತಾತ್ಮಕ ಜಾತ್ಯಾತೀತ ಧರ್ಮನಿರಪೇಕ್ಷ ಸಮಾಜವಾದಿ ಸಾರ್ವಭೌಮತೆ ಸಾರುತ್ತಿರುವ ನಮ್ಮ ಸಂವಿಧಾನವನ್ನು ನಿರ್ನಾಮಿಸುವ ಶಕ್ತಿ ಕೋಮುವಾದಿಗಳಿಗೆ ಇಲ್ಲ ಎಂಬುದನ್ನು ನಾವು ಅವರಿಗೆ ಮನಗಾಣಿಸಬೇಕಿದೆ.

ಕೋಮುವಾದಿಗಳ ಈ ಹೇಳಿಕೆಯು ಕ್ರಿಮಿನಲ್ ಅಫೆನ್ಸ್ ಮಾತ್ರವಲ್ಲ, ಭಾರತದ ಘನತೆಗೆ ಕುಂದುಂಟು ಮಾಡುವಂಥದ್ದಾಗಿದೆ. ನಮ್ಮ ಘನವೆತ್ತ ಸಂವಿಧಾನವನ್ನು ಅಪಮಾನಿಸುವ ಹಕ್ಕು ಯಾರಿಗೂ ಇಲ್ಲ. ಭಾರತಕ್ಕೆ ಇರುವುದು ಮತ್ತು ಇರಬೇಕಾದುದು ಒಂದೇ ಸಂವಿಧಾನ. ಅದು ಡಾ ಬಾಬಾಸಾಹೇಬರ ಮುಂದಾಳತ್ವದಲ್ಲಿ ನಿರ್ಮಾಣಗೊಂಡು ನಮಗೆ ನಾವೇ ಅರ್ಪಿಸಿಕೊಂಡಿರುವ ಜಗತ್ತಿನಲ್ಲಿಯೇ ಸರ್ವಶ್ರೇಷ್ಠವಾದುದು ಎಂಬ ಹೊಗಳಿಕೆಗೆ ಪಾತ್ರವಾಗಿರುವ ಹಾಲಿ ಸಂವಿಧಾನ.

ಇಂಥ ಸಂವಿಧಾನವನ್ನು ಅಪಮಾನಿಸುತ್ತಿರುವವರನ್ನು ನೋಡಿಯೂ ಸರಕಾರ ಕಣ್ಮುಚ್ಚಿ ಕುಳಿತರೆ ಅಂಥ ಸರಕಾರವನ್ನು ಜನತೆ ಧಿಕ್ಕರಿಸಬೇಕಾಗುತ್ತದೆ.

ಲಕ್ಷಾಂತರ ಜನರು ಬಲಿದಾನ ನೀಡಿ ಪಡೆದ ಸ್ವಾತಂತ್ರವನ್ನು ಮಣ್ಣು ಮುಕ್ಕಿಸಿ ಮತ್ತೆ ವಿದೇಶಿ ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಪರಭಾರೆ ಮಾಡುತ್ತಿರುವ ಕೋಮುವಾದಿಗಳನ್ನು ತಕ್ಷಣ ನಿಯಂತ್ರಿಸಬೇಕು. ಹಾಗೂ ಹೀಗೆ ಹೇಳಿಕೆ ನೀಡುತ್ತಿರುವ ವ್ಯಕ್ತಿ, ಸಂಘ, ಸಂಸ್ಥೆಗಳನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತೇವೆ.

-ಪ್ರೊ ಆರ್ ಕೆ ಹುಡುಗಿ, ಡಾ. ಕಾಶಿನಾಥ ಅಂಬಲಗಿ, ಡಾ. ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪೂರೆ, ನೀಲಾ ಕೆ, ದತ್ತಾತ್ರಯ ಇಕ್ಕಳಕಿ, ಮಾರುತಿ ಗೋಖಲೆ, ಕೋದಂಡರಾಮ, ಲವಿತ್ರ ವಸ್ತ್ರದ, ಪದ್ಮಿನಿ ಕಿರಣಗಿ, ಸುರೇಶ ಹಾದಿಮನಿ, ಮಹಾಂತೇಶ ಕಲಬುರಗಿ, ಧನರಾಜ್ ತಾಂಬೋಳೆ, ಶ್ರೀಶೈಲ ಘೂಳಿ

Share This Article
2 Comments
  • ಇಷ್ಟೇಲ್ಲಾ ಬಹಿರಂಗವಾಗಿ ಹೇಳಿಕೆ ನೀಡಿದರು ಬಿಜೆಪಿಯ ಕೆಕೆಳವರ್ಗದ ಯಾವೊಬ್ಬ ರಾಜಕಾರಣಿಯು ಹಿಂದೂ ಸಂವಿಧಾನ ರಚನೆಯ ಬಗ್ಗೆ ಮಾತನಾಡದಿರುವುದು ದುರಂತ. ಏಕೆಂದರೆ ಮುಂದೆ 70% ಕ್ಕೂ ಹೆಚ್ಚು ತಳವರ್ಗದವರನ್ನ ಹೊಂದಿರುವ ಭಾರತದಲ್ಲಿ ತಳವರ್ಗದವರ ಸ್ಥಿತಿ ಮತ್ತೆ 12 ನೇ ಶತಮಾನಕ್ಕೂ ಹಿಂದೆ ಇದ್ದ ಸ್ಥಿತಿಯಂತೆ ಬದುಕಬೇಕಾದಿತು ಎಂಬ ಅರಿವು ಪ್ರಜ್ಞಾವಂತ ನಾಗರೀಕರಲ್ಲಿ ಇರಬೇಕಾಗಿದೆ. ಆದ್ದರಿಂದ ಹಿಂದೂ ಸಂವಿಧಾನದ ವಿರುದ್ಧ ಎಲ್ಲರು ಎಚ್ಚೆತ್ತು ವಿರೋಧಿಸಬೇಕಿದೆ

  • ಒಬ್ಬ ಶೂದ್ರ ರಾಜಕಾರಣಿ ದ್ವನಿ ಎತ್ತಿಲ್ಲಾ ಇದರ ಅರ್ಥ ನಮಗೆ ಅಧಿಕಾರಬೇಕು.ಮುಂದೆ ಹಾಳಾಗಿ ಹೋಗಲಿ.ಕೇರದಲ್ಲಿ ತು ರಿಸಿಕೊಂಡರಾತು ಈ ಲೆಕ್ಕದವರು

Leave a Reply

Your email address will not be published. Required fields are marked *