ಹಿರೇಬಾಗೇವಾಡಿ
ಸ್ಥಳೀಯ ಗುರುಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ತಾಲೂಕಾ ಘಟಕ ಇವರ ಸಹಯೋಗದಲ್ಲಿ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಹಿರೇಬಾಗೇವಾಡಿಯಲ್ಲಿ ಶಾಲಾ ಮಟ್ಟದ ಬಸವಣ್ಣನವರ ವಚನ ಕಂಠ ಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು.
20ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಹುರುಪಿನಿಂದ ಭಾಗವಹಿಸಿದ್ದರು.
ಪ್ರಥಮ ಸ್ಥಾನ ಕುಮಾರಿ ಲಕ್ಷ್ಮಿ ಗಂಗಪ್ಪ ಹಟ್ಟಿಹೊಳಿ, ದ್ವಿತೀಯ ಸ್ಥಾನ ಕುಮಾರಿ ವರ್ಷ ವಿರೂಪಾಕ್ಷ ರೊಟ್ಟಿ ಮತ್ತು ತೃತೀಯ ಸ್ಥಾನವನ್ನು ಕುಮಾರಿ ಪೂಜಾ ಬಸವರಾಜ ಬಾವಿಮನಿ ಪಡೆದರು. ವಿಜೇತರಿಗೆ ಬಸವಣ್ಣನವರ ಫೋಟೋ, ವಚನ ಪುಸ್ತಕ ಹಾಗೂ ನೋಟ್ ಬುಕ್ ನೀಡಲಾಯಿತು.

ಸ್ಪರ್ಧೆಯನ್ನು ಏರ್ಪಡಿಸುವಲ್ಲಿ ಮುಖ್ಯೋಪಾಧ್ಯಾಯನಿ ಶ್ರೀಮತಿ ಶೈಲಾ ಕಡೆಮನಿ, ಗುರುಮಾತೆ ಶ್ರೀಮತಿ ಎಸ್.ಯು. ಪಾಶ್ಚಾಪುರ ಹಾಗೂ ಶಾಲೆಯ ಎಲ್ಲ ಗುರುಮಾತೆಯರು ಸಹಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಬಿ. ಜಿ. ವಾಲಿಇಟಗಿ ತಾಲೂಕ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭೆ ಇವರು ವಹಿಸಿ ಮಾತನಾಡಿದರು. ಪದಾಧಿಕಾರಿಗಳಾದ
ಬಾಬುಗೌಡ ಚಂ. ಪಾಟೀಲ ಮತ್ತು ಎನ್. ಎಫ್. ಉಪ್ಪಿನ ಮತ್ತಿತರರು ಉಪಸ್ಥಿತರಿದ್ದರು.