ಹೊಸಪೇಟೆಯಲ್ಲಿ 51 ದೇವದಾಸಿ ತಾಯಂದಿರಿಗೆ ಪುಣ್ಯಸ್ತ್ರೀ ಗೌರವ ಸಲ್ಲಿಕೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಡಾ‌. ಅಜಯಕುಮಾರ, ಸ್ವರೂಪ ತಾಂಡೂರ ಅವರಿಂದ ದೇವದಾಸಿ ತಾಯಂದಿರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ

ಹೊಸಪೇಟೆ

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ತಾಲೂಕುಗಳಿಂದ ಆಗಮಿಸಿದ್ದ 51 ಜನ ದೇವದಾಸಿ ಮಹಿಳೆಯರ ತಾಯ್ತನ ಹಾಗೂ ಶರಣರ ಸಂಸ್ಕೃತಿಯ ಪುಣ್ಯಸ್ತ್ರೀ ಗೌರವ ಸಲ್ಲಿಕೆಯ ಕಾರ್ಯಕ್ರಮ ಈಚೆಗೆ ಅಮರೇಶ್ವರ ನಿಲಯದಲ್ಲಿ ಜರುಗಿತು.

ಲಿಂಗೈಕ್ಯ ಡಾ. ಅಮರೇಶ್ವರ ಮತ್ತು ಲಿಂ. ಸುವರ್ಣಮ್ಮ ತಾಂಡೂರ ಅವರ 8ನೇ ಪುಣ್ಯಸ್ಮರಣೆಯ ಅಂಗವಾಗಿ, ಇಷ್ಟಲಿಂಗ ಅಧ್ಯಯನ ಕೇಂದ್ರ, ಅರಿವು ಆಚಾರ ಅನುಭಾವ ಟ್ರಸ್ಟ್ ಮತ್ತು ಸಖಿ ಸಂಸ್ಥೆ ಸಂಘಟನೆಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ದೇವದಾಸಿ ತಾಯಂದಿರಿಗೆ ಆಧ್ಯಾತ್ಮಿಕ ಸಬಲೀಕರಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದ ಭಾಗವಾಗಿ ಶರಣ ದಂಪತಿ ಡಾ‌. ಅಜಯಕುಮಾರ ಮತ್ತು ಸ್ವರೂಪ ತಾಂಡೂರ ಅವರುಗಳು ದೇವದಾಸಿ ತಾಯಂದಿರಿಗೆ ಸೀರೆ ಕೊಟ್ಟು, ಉಡಿತುಂಬಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಇಷ್ಟಲಿಂಗ ಪೂಜೆ – ಅನುಸಂಧಾನದ ಪ್ರಾತ್ಯಕ್ಷಿಕೆ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿಸಲಾಯಿತು.

ಡಾ. ಶಿವಾನಂದ ಬ್ಯಾಳೆಹುಣಸಿ, ಬಸವಕಿರಣ, ಭಾಗ್ಯಲಕ್ಷ್ಮಿ ರಂಜಾರೆ, ಟಿ.ಎಚ್. ಬಸವರಾಜ, ಹಂಪಣ್ಣ ಶರಣರು ಅನುಭಾವದ ನುಡಿಗಳನ್ನಾಡಿದರು.

ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳು ಸಹ ಅನುಭಾವ ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ, ಬಸವಗುರು ಪೂಜೆ ನೆರವೇರಿಸಲಾಯಿತು. ಪ್ರಾಸ್ತಾವಿಕವಾಗಿ ಡಾ. ಅಜಯಕುಮಾರ ತಾಂಡೂರ ಮಾತನಾಡಿದರು. ಅಶ್ವಿನಿ ಶಿವಾನಂದ ನಿರೂಪಿಸಿದರು. ಡಾ. ಭಾಗ್ಯಲಕ್ಷ್ಮಿ ರಂಜಾರೆ ಶರಣು ಸಮರ್ಪಣೆ ಮಾಡಿದರು.

ಲಿಂಗಾಯತ ಸಮಾಜ ಮುಖಂಡರಾದ ಸಾಲಿ ಬಸವರಾಜಸ್ವಾಮಿ, ಬಸರಹಳ್ಳಿ ಚಂದ್ರಶೇಖರ, ಅಕ್ಕಮಹಾದೇವಿ ಬಳಗ, ಬಸವ ಬಳಗ, ಸಖಿ ಸಂಸ್ಥೆಯ ಸದಸ್ಯರು, ಕಂಪ್ಲಿ, ಕುರಗೋಡು, ಕನಕಗಿರಿ ಗಂಗಾವತಿ, ಕೊಪ್ಪಳ, ಹೊಸಪೇಟೆ ಮತ್ತಿತರ ಭಾಗಗಳ 250ಕ್ಕೂ ಹೆಚ್ಚು ಶರಣ-ಶರಣೆಯರು ಉಪಸ್ಥಿತರಿದ್ದರು. ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
10 Comments
  • ಈ ಮಹಾಕೆಲಸವನ್ನು ತಾವುಗಳು ಮಡಿದ್ದು ಇದು ಬಸವಣ್ಣ ನವರ ಆಶಯಗಳನ್ನು ಪೂರೖಸುವ ಕೆಲಸವನ್ನು ಪೂರೖಸಿ ನಮ್ಮದು ಎಲ್ಲರೂ ಒಳಗೊಂಡ ಶರಣರನಡೆ ಎಂದು ತೋರಿಸಿದ್ದೀರಿ ಸಮಜದಿಂದ ಹೊರಗಾಗಿ ಇರುವ ನಮ್ಮ ತಾಯಂದಿರಿಗೆ ಲಿಂಗ ದೀಕ್ಷೆ ಮೂಲಕ ನಮ್ಮವರನ್ನಾಗಿ ಮಾಡಿದ್ದೀರಿ. ನಿಮಗೆಲ್ಲರಿಗೂ ನನ್ನ ಶರಣು ಶರಣಾರ್ಥಿಗಳು.

  • ಆಯೋಜಕರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. ಇದು ನಿಜವಾದ ಬಸವತತ್ವದ ಆಚರಣೆ. ಸಮಾಜದಿಂದ ದೂರ ಆದವರು, ಸಮಾಜ ನಿರಾಕರಿಸಿದವರು, ಕಾರಣಾಂತರದಿಂದ ಸಮಾಜದಲ್ಲಿನ ಇಂತಹ ಕೆಟ್ಟ ಸಂಪ್ರದಾಯಗಳಿಗೆ ಸಿಕ್ಕು ನಲಿದು ಹೋಗಿರುವವರ ಬಸವಾಣಿಯಾಯಿಗಳಲ್ಲದೆ ಇನ್ನಾರು ಅಪ್ಪಿ ಒಪ್ಪಿಕೊಳ್ಳಲು ಸಾಧ್ಯ. ಈ ಪುಣ್ಯಸ್ತ್ರೀ ಯಾರನ್ನು ಮುಖ್ಯವಾಹಿನಿಗೆ ತರುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. ನಿಮಗಿದೋ ಶರಣು ಶರಣಾರ್ಥಿಗಳು 🌹🙏
    ಜೊತೆಗೆ ಇಂದು ಪುಣ್ಯಸ್ತ್ರೀ ಗೌರವ ಪಡೆದ ಎಲ್ಲಾ ಶರಣೆಯರಿಗೂ ಶರಣು ಶರಣಾರ್ಥಿಗಳು 🌹🙏.

    • ಸಮಾಜದಲ್ಲಿ ಸಾಕಷ್ಟು ತುಳತಕ್ಕೆ ಒಳಗಾದ ಇಂತಹ ತಾಯಂದಿರನ್ನು ಗುರುತಿಸಿ ಅವರಿಗೂ ಗೌರವಯುತ ಬದುಕನ್ನು ಬದುಕಲು ಸಾಧ್ಯ ಎಂಬುದನ್ನು ತಿಳಿಸಿದ ಗಣ್ಯರಿಗೆ ತುಂಬುಹೃದಯದ ಧನ್ಯವಾದಗಳು. ಇಂತಹ ಕಾರ್ಯಕ್ರಮಗಳು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನಡಯಲಿ ಎಂಬುದು ನನ್ನ ಅನಿಸಿಕೆ

    • ಮುುತೈದಿಯರಿಗೆ ಉಡಿ ತುಂಬಿಸುವ ಮಠಾಧೀಶರಿಗೆ ಮಾರ್ಗದರ್ಶನ ಮಾಡಿರುವಿರಿ.ಬಸವ ತಂದೆಗೆ ಪ್ರೀಯವಾದ ಶ್ರೇಷ್ಠ ಸೇವೆ ಸಲ್ಲಿಸಿದರುವಿರಿ ನಿಮ್ಮ ಕೆಲಸ ಇತರರಿಗೆ ಪ್ರೇರಣೆಯಾಗಲಿ ಶರಣುಶರಣಾರ್ಥಿಗಳು

  • ಒಳ್ಳೆಯ ಕೆಲಸ ಇಂಥ ಸಾಮಾಜಿಕ ಕೆಲಸಗಳನ್ನು ಮಠಾಧೀಶರು ಮಾಡಬೇಕಾಗಿತ್ತು ಆದರೆ ಈ ಶರಣರು ಮಾಡಿರುವಂತಹ ಒಳ್ಳೆಯ ಕೆಲಸ ಹೀಗೆ ಮುಂದುವರೆಯಲಿ ಇದು ಮಠಾಧೀಶರಿಗೆ ಪ್ರೇರಣೆಯಾಗಲಿ

  • ಅತ್ಯಂತ ಶ್ಲಾಘನೀಯ ಕಾರ್ಯ. ಆಯೋಜಕರಿಗೆ ಹೃತ್ಪೂರ್ವಕ ವಂದನೆಗಳು.ಶರಣಾರ್ಥಿಗಳು.ಇಂಥ ಕಾರ್ಯಕ್ರಮಗಳನ್ನು ಇತ್ತೀಚೆಗೆ ಯಾರೂ ನಡೆಯಿಸಿಲ್ಲ-ಅನಿಸುತ್ತದೆ. ಕ್ರಾಂತಿಯ ಪ್ರಯೋಗವಿದು. ಬಸವ ಮೀಡಿಯಾಕ್ಕೂ ವಂದನೆಗಳು. ಧನ್ಯವಾದ ಕೂಡ.

  • ಈ ಶತಮಾನದ ಮಹತ್ತರವಾದ ಮಹತ್ವದ ಕಾರ್ಯವನ್ನ ಡಾ॥ ಅಜಯ್ ಸರ್ ಮಾಡಿದ್ದಾರೆ. ಸಮಾಜದಲ್ಲಿ ದೇವದಾಸಿಯರೆಂದರೆ ಕೀಳು ಭಾವನೆಯಿಂದ ನೋಡುವವರನ್ನ ಶರಣೆಯರೆಂದು ನೋಡುವಂತೆ ಮಾಡುತ್ತಿರುವುದು ಮಹಾನ್ ಪುಣ್ಯದ ಕೆಲಸ

  • ಬಸವಣ್ಣನವರು ಮಾಡಿದ ಸಮಾಜ ಪರಿವರ್ತನೆ ಕಾರ್ಯವನ್ನು ಈ ಕಾಲದಲ್ಲಿ ವಾಸ್ತವವಾಗಿ ಅನುಷ್ಠಾನ ಮಾಡುತ್ತಿರುವ ಮಹಾಶರಣರು ತಾವು. ಶರಣು ಶರಣಾರ್ಥಿಗಳು

  • ಬಸವಣ್ಣನವರು ಅಂದು ಗೌರವ ನೀಡಿದ್ದರು.
    ಆದರೆ ಅದೇ ನೆಪದಲ್ಲಿ ತಾವು ಮಾಡಿರುವ ಕಾರ್ಯ ಶ್ಲಾಘನೀಯ.
    ಆದರೆ ಅವರ ಬದುಕಿಗೆ ಬೇಕಾದ ಆಸರೆಯಲ್ಲಿ ತಾವು ಶ್ರಮಿಸಿ ಕೇವಲ ಕಾರ್ಯಕ್ರಮದಲ್ಲಿ ಇಷ್ಟು ಗೌರವ ಕೊಟ್ಟು ಕಳಿಸಿದರೆ ಸಾಲದು ಅವರ ಸಮಗ್ರ ಪುನರ್ ವಸತಿಗೆ ಶ್ರಮಿಸಿ. ಅಂದಾಗ ನಿಜವಾದ ಗೌರವ ಸಲ್ಲುತ್ತದೆ.

  • ಇದು ನೈಜ ಬಸವ ತತ್ವ ಆಚರಣೆ , ಇಂದು ನಿಜವಾಗಿಯೂ ಶರಣ ಧರ್ಮ ಬಸವತತ್ವದ ಬಗ್ಗೆ ಗೌರವ ಹೆಚ್ಚಿತು , ಇದು ಆಚರಿಸಬೇಕಾದ ಧರ್ಮ ಆದರೆ ಬಹುತೇಕ ಭಾಷಣಕ್ಕೆ ಸೀಮೀತ ಎನಿಸುತ್ತಿತ್ತು. ಈ ಕಾರ್ಯಕ್ರಮದ ಆಯೋಜಕರಿಗೆ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *