ಹುಬ್ಬಳ್ಳಿ ಬಸವ ಕೇಂದ್ರದಲ್ಲಿ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ:

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ಶಿವರಾತ್ರಿಯ ಅಂಗವಾಗಿ ರವಿವಾರ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ನಡೆಯಿತು.

ಪ್ರೊ.ಜಿ.ಬಿ.ಹಳ್ಯಾಳ ಅವರು ಇಷ್ಟಲಿಂಗ ಪ್ರಾಮುಖ್ಯತೆ ಮತ್ತು ಪೂಜಾ ವಿಧಾನವನ್ನು ತಿಳಿಸಿಕೊಟ್ಟರು.

ನಂತರ ಕೊಪ್ಪಳದ ಬಸವತತ್ವ ಅನುಭಾವಿಗಳಾದ ಡಾ.ಸಂಗಮೇಶ ಕಲಹಾಳ ಅವರು ಮಾತನಾಡಿ, ಶರಣ ಡೋಹರ ಕಕ್ಕಯ್ಯ ಅವರ ಕುರಿತು ಅನುಭಾವ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ಹಾಗೂ ಬಸವ ಕೇಂದ್ರದ ಕಾರ್ಯಾಧ್ಯಕ್ಷರಾದ ಶರಣ ಪ್ರೊ.ಎಸ್.ವಿ.ಪಟ್ಟಣಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ.ಜಿ.ಬಿ.ಹಳ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಚನಶ್ರೀ ಹಳ್ಯಾಳ ವಚನ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಶರಣ ಕೆ.ಎಸ್. ಇನಾಮತಿ ನಿರೂಪಿಸಿದರು. ಸುರೇಶ ಹುಗ್ಗಿಶೆಟ್ಟರ ಶರಣು ಸಮರ್ಪಣೆ ಮಾಡಿದರು.

ಉಮಾತಾಯಿ ಹುಲಿಕಂತಿಮಠ, ಪಂಕಜ ಹುಗ್ಗಿಶೆಟ್ಟರ ವಚನ ಗಾಯನ ಮಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *