ಶ್ರೀ ಗುರುಬಸವ ಮಂಟಪದ 80 ವರ್ಷಗಳ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ನಡೆದಿದ್ದು ಇದೇ ಪ್ರಥಮ ಬಾರಿ.
ಹುಬ್ಬಳ್ಳಿ
ವಿಶ್ವಗುರು ಬಸವೇಶ್ವರರ ಜಯಂತಿ-2025, ಅಂಗವಾಗಿ ನಗರದ ಶ್ರೀ ಗುರುಬಸವ ಮಂಟಪದ ನೀಲಾಂಬಿಕ ಬಳಗದ ವತಿಯಿಂದ ರವಿವಾರ ವಚನಾಧಾರಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬರುವ ಲಿಂಗಾಯತ ಮಹಿಳಾ ಸಂಘಟನೆಗಳ ಸದಸ್ಯೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಸಿದ್ಧಾಂತ, ತತ್ವ ಹಾಗೂ ವಚನ ಸಾಹಿತ್ಯದ ಐತಿಹಾಸಿಕ ಸಂಗತಿಗಳು, ಮೊದಲಾದ ವಿಷಯಗಳ ಮೇಲೆ 90 ಪ್ರಶ್ನೆಗಳನ್ನು ಕೇಳಲಾಯಿತು.
ಗಂಗೂತಾಯಿ ಲಿಗಾಡೆ ಅವರು ವಚನ ಪಠಣ ಮಾಡಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಸುಲೋಚನಾತಾಯಿ ಭೂಸನೂರ ಶ್ರೀ ಗುರುಬಸವ ಮಂಟಪದ 80 ವರ್ಷಗಳ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ನಡೆದಿದ್ದು ಇದೇ ಪ್ರಥಮ ಬಾರಿ, ಲಿಂಗಾಯತರಿಗೆ ತಮ್ಮ ಧರ್ಮದ ತತ್ವಗಳ ತಿಳುವಳಿಕೆ ಇಲ್ಲ ಎನ್ನುವ ಮಾತು ಸುಳ್ಳಾಯಿತು, ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಂದದ್ದು ಆಶ್ಚರ್ಯ ಉಂಟು ಮಾಡಿದೆ ಎಂದರು. ಬಸವ ತತ್ವ ಜಾಗೃತವಾಗಿದೆ ಎನ್ನುವುದನ್ನು ಈ ಕ್ವಿಜ್ ಕಾರ್ಯಕ್ರಮ ನಿರೂಪಿಸಿದೆ ಎಂದರು.

ಮಹಾಶರಣೆ ಗಂಗಾಂಬಿಕ ಬಳಗ, ಅಕ್ಷಯ ಕಾಲನಿಯಿಂದ ಶಶಿಕಲಾ ಕೊಡೇಕಲ್ ಹಾಗೂ ಗೀತಾ ಕುಬಸದ, ಗೌರಿ ಬಸವ ಬಳಗ ಕೇಶವಾಪುರದಿಂದ ಅನುಪಮಾ ಪಾಟೀಲ ಹಾಗೂ ಸುಧಾ ಗಂಜಿ, ಬಸವ ಕೇಂದ್ರ ಮುರಾರ್ಜಿ ನಗರದಿಂದ ದ್ರಾಕ್ಷಾಯಿಣಿ ಕೋಳಿವಾಡ ಹಾಗೂ ಬಸಮ್ಮ ಕೋಟಿ, ಬಸವ ಜ್ಞಾನ ಸೌರಭ ಮಹಿಳಾ ಘಟಕ ನವನಗರದಿಂದ ಪ್ರಭಾ ಎರೆಸೀಮಿ ಹಾಗೂ ವಿಜಯಲಕ್ಷ್ಮಿ ಪಾಟೀಲ, ಬಸವ ಕೇಂದ್ರ ಧಾರವಾಡದಿಂದ ಸುಜಾತಾ ನಾಗನಗೌಡ್ರ ಹಾಗೂ ಲತಾ ಮಂಟ, ಅಕ್ಕನ ಬಳಗದಿಂದ ಲಕ್ಷ್ಮಿ ಪಾರಶೆಟ್ಟಿ ಹಾಗೂ ಉಮಾತಾಯಿ ಹುಲಿಕಂತಿಮಠ, ವಿಶ್ವನಾಥ ಮಹಿಳಾ ಮಂಡಳದಿಂದ ರತ್ನಾ ಬೆಳವಲ ಹಾಗೂ ಜಯಶ್ರೀ ಗುಜರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದಿಂದ ಸವಿತಾ ನಡಕಟ್ಟಿ ಹಾಗೂ ಪ್ರಜ್ಞಾ ನಡಕಟ್ಟಿ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು.
ಶೋಭಾತಾಯಿ ಕರವೀರಶೆಟ್ಟರ, ಶಾರದಾತಾಯಿ ಪಾಟೀಲ, ಅನಿತಾತಾಯಿ ಕುಬಸದ ಹಾಗೂ ಶೋಭಾತಾಯಿ ಸಾದರಳ್ಳಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಬಸವಜ್ಞಾನ ಸೌರಭ ಮಹಿಳಾ ಘಟಕ ಇವರು 115 ಅಂಕ ಪಡೆದು ಪ್ರಥಮ ಸ್ಥಾನದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದವರು ಎರಡನೇ ಸ್ಥಾನದಲ್ಲಿ, ಮಹಾ ಶರಣೆ ಗಂಗಾಂಬಿಕಾ ಬಳಗದವರು 90 ಅಂಕ ಪಡೆದು ಮೂರನೇ ಸ್ಥಾನ ಗಳಿಸಿದರು.

ಪ್ರಶ್ನೆಗೆ ಉತ್ತರಿಸಿದ ಪ್ರೇಕ್ಷಕರಿಗೂ ಪುಸ್ತಕ ಬಹುಮಾನವಾಗಿ ನೀಡಲಾಯಿತು.
ಸಮಾರೋಪ ಭಾಷಣ ಮಾಡಿದ ಶಶಿಧರ ಕರವೀರ ಶೆಟ್ಟರ ಮಾತನಾಡುತ್ತ, ಲಿಂಗಾಯತರನ್ನು ಶುದ್ಧ ಲಿಂಗಾಯಿತರನ್ನಾಗಿ ಮಾಡಬೇಕೆಂದರೆ ಲಿಂಗಾಯತ ಧರ್ಮದ ತತ್ವಗಳನ್ನು ತಾಯಂದಿರಗೆ ತಿಳಿಸಿಕೊಡುವ ಕಾರ್ಯಕ್ರಮ ಏರ್ಪಡಿಸಬೇಕು. ವಾರದಲ್ಲಿ ಒಂದು ತಾಸು ಗೂಗಲ್ ಮೀಟ್ ಏರ್ಪಡಿಸಿ ಮೂಲಭೂತ ತತ್ವಗಳನ್ನು ತಿಳಿಸಿ ಕೊಡಬೇಕು, ಎಲ್ಲಿಯವರೆಗೂ ಲಿಂಗಾಯತ ತತ್ವಗಳನ್ನು ತಿಳಿಸುವುದಿಲ್ಲವೋ ಅಲ್ಲಿವರೆಗೂ ಮಹಿಳೆಯರು ವೈದಿಕ ಆಚರಣೆಗಳನ್ನು ಬಿಡುವುದಿಲ್ಲ ಎಂದರು.

ಭಾಗವಹಿಸಿದ ಸ್ಪರ್ಧಾಳುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಈ ಕಾರ್ಯಕ್ರಮದಿಂದ ಲಿಂಗಾಯತ ಧರ್ಮದ ಆಳ ಎಷ್ಟಿದೆಯೆಂದು ತಿಳಿಯಿತು, ಅಲ್ಲದೆ ಹೆಚ್ಚಿನ ಜ್ಞಾನಾರ್ಜನೆ ಆಯಿತು, ಹೊಸ ಉತ್ಸಾಹ ಮೂಡಿತು ಎಂದರು. ಶರಣರ ಇತಿಹಾಸ ತಿಳಿದು ರೋಮಾಂಚನವಾಯಿತೆಂದು ಹೇಳಿದರು.
ಸ್ಪರ್ಧೆಯಲ್ಲಿ ವಿಜೇತ ಸಂಘಟನೆಗಳಿಗೆ ಕ್ರಮವಾಗಿ ಪ್ರಥಮ ೨೦೦೦/- , ದ್ವಿತೀಯ ೧೫೦೦/- , ತೃತೀಯ ೧೦೦೦/- ನಗದು ಬಹುಮಾನ, ಫಲಕ, ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.

ಬಹುಮಾನವನ್ನು ಬರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಸಂಘಟಕರು ತಿಳಿಸಿದರು.
ಸುಧೀರ್ ಸಾದರಳ್ಳಿ ಹಾಗೂ ಶಶಿಧರ್ ನಾರಾ ಉಪಸ್ಥಿತರಿದ್ದರು. ಲತಾತಾಯಿ ಕುದರಿ ಸ್ವಾಗತಿಸಿದರು. ನಿರ್ಮಲಾತಾಯಿ ಬರ್ಲಬಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾತಾಯಿ ನಾರಾ ಅವರು ಕಾರ್ಯಕ್ರಮ ನಿರೂಪಿಸಿದರು. ಪಾರ್ವತಿತಾಯಿ ಯಾವಗಲ್ ಶರಣು ಸಮರ್ಪಣೆ ಮಾಡಿದರು.
ನೀಲಾಂಬಿಕಾ ಬಳಗದ ಶರಣೆಯರು ಆರಂಭದಲ್ಲಿ ವಚನ ಪ್ರಾರ್ಥನೆ ಮಾಡಿದರು.
ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಚನಾಧರಿತ ರಸಪ್ರಶ್ನೆಗಳನ್ನು, ಉತ್ತರ ಸಹಿತ, ಇತರೇ ಶರಣ-ಶರಣೆಯರ ಉಪಯೊಗಕ್ಕಾಗಿ ಇಲ್ಲಿ ಪ್ರಕಟಿಸಿರಿ.
ಇದೇ ರೀತಿ ಸ್ಥಳೀಯ ಮಟ್ಟದಲ್ಲಿ ಆಯೋಜನೆ ಮಾಡುವ ಆಯೋಜಕರಿಗೆ ಸುಲಭವಾಗುತ್ತದೆ ಅದರಿಂದ ಉತ್ತರ ಸಹಿತ ರಸಪ್ರಶ್ನೆಗಳ ಪಟ್ಟಿಯನ್ನು ಹಾಕುವುದು ಒಳಿತು.
ಒಳ್ಳೆ ಕಾರ್ಯಕ್ರಮ. ಲಿಂಗಾಯತ ಧರ್ಮ ಶರಣರ ಜೀವನ ಸಾಧನೆ ಇಗಳನ್ನು ಎಲ್ಲರೂ ತಿಳಿದು ಕೊಳ್ಳುವ ಅವಶ್ಯಕತೆ ಇದೆ. ಸಂಘಟಕರಿಗೆ ಶರಣು ಶರಣಾರ್ಥಿಗಳು.
ಇಂಥ ಒಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಎಲ್ಲಾ ಅಕ್ಕಂದರಿಗೂ ಶರಣು ಶರಣಾರ್ಥಿಗಳು
ಜಾಗತಿಕ ಲಿಂಗಾಯತ ಮಹಾಸಭಾ ಇಂತಹ ಕಾರ್ಯಕ್ರಮ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿಯೂ ಆಯೋಜಿಸಬೇಕು ಹೆಚ್ಚಾಗಿ ಯುವಕರು ಯುವತಿಯರು ಭಾಗವಹಿಸಬೇಕು ಮತ್ತು ಅವರಿಗೆ ಜವಾಬ್ದಾರಿವಹಿಸಬೇಕು ಶರಣುಶರಣಾರ್ಥಿಗಳು.