ಹುಬ್ಬಳ್ಳಿ ಘಂಟಿಕೇರಿ ಬಸವೇಶ್ವರ ಸೇವಾ ಸಮಿತಿ ಹಾಗೂ ಮಹಿಳಾ ಮಂಡಳದವರ ವತಿಯಿಂದ ನಡೆದ ಶ್ರಾವಣ ಮಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ ಘಂಟಿಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಗುರುಬಸವ ಮಂಟಪದ ಶರಣೆಯರಾದ ಅನಿತಾ ಕುಬಸದ, ಶಾರದಾ ಪಾಟೀಲ ಹಾಗೂ ನಿರ್ಮಲಾ ಬುರ್ಲಬಡ್ಡಿ ಮಕ್ಕಳಿಗೆ ಸಹಜ ಶಿವಯೋಗ ತಿಳಿಸಿಕೊಟ್ಟರು.
ಒಂದು ತಿಂಗಳು ಕಾಲ ಶಿವಾನುಭವ ನೀಡಿದ ಅಕ್ಕಮಹಾದೇವಿ ಗಿರಿಮಠ ಅವರನ್ನು ಸತ್ಕರಿಸಲಾಯಿತು.
ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನವನ್ನು ರಿತಿಕ್ ಅರಳಿಕಟ್ಟಿ, ದ್ವಿತೀಯ ಸ್ಥಾನವನ್ನು ಶ್ರಾವಣಿ ಬೆಂಡಿಗೇರಿ, ತೃತೀಯ ಸ್ಥಾನವನ್ನು ಪ್ರತೀಕ ಅರಳಿಕಟ್ಟಿ ಪಡೆದರು. ಅಕ್ಕಮಹಾದೇವಿ ಮಹಿಳಾ ಮಂಡಳದವರು ಮಕ್ಕಳಿಗೆ ವಚನ ಪುಸ್ತಕ ವಿತರಿಸಿದರು.
ಶರಣರಾದ ನಾಗಣ್ಣಾ ಮುದೆಣ್ಣವರ, ಶರಣು ವನಹಳ್ಳಿಮಠ ದಾಸೋಹ ವ್ಯವಸ್ಥೆ ಮಾಡಿದ್ದರು.