ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ ಬೆಳಗಾವಿ, ಗುರುಬಸವ ಬಳಗ, ಹಿರೇಬಾಗೇವಾಡಿ, ಇವರ ಸಹಭಾಗಿತ್ವದಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ 6 ಗಂಟೆಗೆ 45ನೇಯ ವಾರದ ವಚನ ಪ್ರಾರ್ಥನೆ ಹಾಗೂ ಪ್ರವಚನದ ವಚನ ಮಂಗಲ ಶ್ರೀ ನಿಜಗುಣ ಶಿವಯೋಗಿಗಳ ಶ್ರೀಮಠದಲ್ಲಿ ನಡೆಯಿತು.
ಈ ಪ್ರವಚನ ಕಾರ್ಯಕ್ರಮದ ಕುರಿತಾಗಿ ಅನುಭಾವಿಗಳಿಂದ ಅನುಭಾವ ಹಂಚಿಕೆ, ಪ್ರವಚನಕಾರರಿಗೆ ಸತ್ಕಾರ, ಪ್ರವಚನದ ಮಹಾಮಂಗಲ, ನಂತರ ಗ್ರಾಮದ ದಾಸೋಹಿಗಳಿಂದ ಅನ್ನ ಪ್ರಸಾದ ಕಾರ್ಯಕ್ರಮ ಜರುಗಿತು.
ಶ್ರೀಮಠದ ಪೂಜ್ಯರಾದ ಶ್ರೀ ನಿಜಗುಣದೇವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು. ಶರಣರ ಚರಿತಾಮೃತ ಪ್ರವಚನವನ್ನು ಶರಣ ಸಿ.ಎಂ. ಹುಬ್ಬಳ್ಳಿಯವರು ಮಾಡಿದರು.
ನಿತ್ಯ ವಚನ ಪ್ರಾರ್ಥನೆ, ಕಾರ್ಯಕ್ರಮ ನಿರೂಪಣೆಯನ್ನು ಆನಂದ ಯಲ್ಲಪ್ಪ ಕೊಂಡಗುರಿಯವರು ನಡೆಸಿಕೊಟ್ಟರು, ಪ್ರಾಸ್ತಾವಿಕ ನುಡಿಗಳನ್ನು ಬಾಬುಗೌಡ ಪಾಟೀಲ, ಪ್ರವೀಣ ರೊಟ್ಟಿ, ರಮೇಶ ತಿಗಡಿಯವರಿಂದ ನಡೆಯಿತು.

ಸಮಾರೋಪ ನುಡಿಗಳನ್ನು ಶ್ರೀ ಬಿ ಜಿ ವಾಲಿಇಟಗಿ, ಶ್ರೀ ಎನ್.ಪಿ. ಉಪ್ಪಿನ ಮಾಡಿದರು. ಕಾರ್ಯಕ್ರಮ ತಿಂಗಳು ಕಾಲ ಯಶಸ್ವಿಯಾಗಿ ನೆರವೇರಿತು.
ಶ್ರಾವಣ ಮಾಸದ ನಿಮಿತ್ಯ ಪ್ರತಿದಿನ ಸಂಜೆ 6:30 ರಿಂದ 08 ಗಂಟೆವರೆಗೆ ವಚನ ಪ್ರಾರ್ಥನೆ ಮತ್ತು ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.
ಶರಣರಾದ ಬಿ.ಜಿ. ವಾಲಿಇಟಗಿ, ಮಹಾಂತೇಶ ತೋರಣಗಟ್ಟಿ, ಬಾಬುಗೌಡ ಪಾಟೀಲ, ಎನ್.ಪಿ. ಉಪ್ಪಿನ, ಸಿ.ಎಂ. ಹುಬ್ಬಳ್ಳಿ, ಪ್ರವೀಣ ರೊಟ್ಟಿ, ಆನಂದ ಕೊಂಡಗುರಿ, ದಯಾನಂದ ಹಂಚಿನಮನಿ, ರಮೇಶ ತಿಗಡಿ, ಶಿವಪುತ್ರ ಹಳಮನಿ, ಮಂಜುನಾಥ ವಾಲಿ ಇಟಗಿ, ಈರಣ್ಣ ದಾನ್ನಣ್ಣವರ, ಬಸನಗೌಡ ಹಾದಿಮನಿ, ನಾಗನಗೌಡ ಹಾದಿಮನಿ, ಗುರುಬಸವ ಬಳಗದ ಸದಸ್ಯರು ಮತ್ತು ಶ್ರೀ ನಿಜಗುಣ ಶಿವಯೋಗಿಶ್ವರ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
