ಹುಬ್ಬಳ್ಳಿ
ನಗರದ ಅಕ್ಷಯ ಕಾಲೋನಿಯ ಶರಣೆ ಗಂಗಾಂಬಿಕಾ ಬಳಗದಿಂದ ಮಹಾಮನೆ ಕಾರ್ಯಕ್ರಮದಲ್ಲಿ ವಿವಾಹ ಪೂರ್ವದ ಶುಭಕಾರ್ಯವನ್ನು ವಚನ ಪಾರಾಯಣದೊಂದಿಗೆ ಮಾಡಿದ್ದು ಹೊಸತನವೆನಿಸಿತು.
ಶರಣೆ ಶಾಲಿನಿ ರುದ್ರಮುನಿ ಅವರ ಸುಪುತ್ರಿ ಕು. ಮೇಘಾ ಅವರ ವಿವಾಹ ಮಹೋತ್ಸವದ ಆರಂಭದ ಕಾರ್ಯವು ಅವರ ಸ್ವಗ್ರಹದಲ್ಲಿ ಶರಣರನ್ನು ಸ್ಮರಿಸುವ ವಚನ ಪಾರಾಯಣ ಮಾಡುವುದರ ಮೂಲಕ ನೆರವೇರಿಸಲಾಯಿತು.
ಗಂಗಾಂಬಿಕಾ ಬಳಗದ ಶರಣೆಯರು ಕೂಡಿ, ಪ್ರತಿವಾರ ನಡೆಸುತ್ತಿರುವ ಸಾಮೂಹಿಕ ವಚನ ಪಾರಾಯಣ ಈ ಭಾಗದ ಮಹಿಳೆಯರಲ್ಲಿ ಶರಣ ಜಾಗೃತಿಯನ್ನು ಮೂಡಿಸುತ್ತಿದೆ.
ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ ಅವರು ಮಾತನಾಡುತ್ತಾ, ಶರಣರು ದಾಂಪತ್ಯ ಧರ್ಮಕ್ಕೆ ಹೆಚ್ಚು ಮಹತ್ವ ಕೊಟ್ಟು, ಶರಣ ಸತಿ ಲಿಂಗ ಪತಿ ತತ್ವದ ಮೂಲಕ ಲಿಂಗಾಂಗ ಸಾಮರಸ್ಯವನ್ನು ಪ್ರತಿಪಾದಿಸಿದರು. ಮನದ ಮಲಿನತೆಯನ್ನು ಕಳೆಯುವ ವಚನಗಳನ್ನು ಮಹಿಳೆಯರು ಪ್ರತಿದಿನ ಮಕ್ಕಳೊಂದಿಗೆ ವಚನ ಪಾರಾಯಣ ಮಾಡಿ, ಸಂಸ್ಕಾರವಂತರಾಗಬೇಕು ಎಂದರು.

ನೂತನ ವಧು ಮೇಘಾ ಅವರಿಗೆ ಸಾಮೂಹಿಕವಾಗಿ ಎಲ್ಲ ಶರಣರೆಯರು ಶುಭ ಕೋರಿದರು. ಮರೆತು ಹೋಗಿದ್ದ ಶರಣ ಸಂಪ್ರದಾಯವನ್ನು ಮತ್ತೆ ಪ್ರಾರಂಭಿಸಿದ ಗೌರವ ಗಂಗಾಂಬಿಕಾ ಬಳಗಕ್ಕೆ ಸಲ್ಲಬೇಕು.
ಶರಣೆ ದಾಕ್ಷಾಯಣಿ ಕೋಳಿವಾಡ ಅವರು ಸ್ವಾಗತಿಸಿದರು. ಶರಣೆ ಶಾಲಿನಿ ರುದ್ರಮುನಿ ಶರಣು ಸಮರ್ಪಣೆ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ನಿಜಾಚರಣೆ ನಿಜಕ್ಕೂ ಅರ್ಥಪೂರ್ಣವಾದುದು.ಮದುವೆಯ ಶುಭ ಕಾರ್ಯಕ್ರಮ ವನ್ನು ನಮ್ಶ ಶರಣರನ್ನು ನೆನೆಯುತ್ತಾ ,ಅವರ ವಚನಗಳನ್ನ ಪಾರಾಯಣ ಮಾಡುವ ಮೂಲಕ ಪ್ರಾರಂಭಿಸಿದ್ದು ಅನುಕರಣೀಯ.ಇಂತಹ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ “ಶರಣೆ ಗಂಗಾಂಬಿಕಾ ಬಳಗ” ಕ್ಕೆ ಅಭಿನಂದನೆಗಳು.. 🙏🙏
ವಚನಗಳ ಪಾರಾಯಣ ನಮ್ಮ ಎಲ್ಲಾ ಸಂಪ್ರದಾಯಗಳಲ್ಲಿ ಅಳವಡಿಕೆ ಮಾಡಿಕೊಳ್ಳುತ್ತಿರುವುದು ಬಸವ ಸಂಸ್ಕೃತಿಗೆ ಒಂದು ಉತ್ತಮ ಕಾರ್ಯ. ಈ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ಮುಂದು ವರೆಯಲಿ. ಎಲ್ಲಾ ಲಿಂಗಾಯತ ಪಂಗಡಗಳು ಒಟ್ಟಿಗೆ ಈ ಕಾರ್ಯಕ್ರಮದ ಅನುಕರಣೆ ಮಾಡಲಿ. ಶುಭವಾಗಲಿ.
ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ
🙏🙏