ಹುಕ್ಕೇರಿ
ತಾಲೂಕಿನ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಶೂನ್ಯಸಿಂಹಾಸನ ಪೀಠದೊಡೆಯ ಅಲ್ಲಮಪ್ರಭುದೇವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶಿಕ್ಷಕರ ಶರಣ ಎಂ. ಎಂ. ಮಂಜುನಾಥ ಆಗಮಿಸಿ ಶೂನ್ಯ ಪೀಠದೊಡೆಯ ಅಲ್ಲಮ ಪ್ರಭುದೇವರ ಕುರಿತಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಕ್ಕನ ಬಳಗದವರು ವಚನ ಪ್ರಾರ್ಥನೆ ನೆರವೇರಿಸಿದರು, ಶರಣ ಮಹೇಶ ಕಾಡಗಿ ವಚನ ಗಾಯನ ಮಾಡಿದರು.
ಸಿದ್ರಾಮ ಚಿಲಮಿ, ಸುರೇಶ ಕಂಕನವಾಡಿ, ಶಿವಪ್ರಕಾಶ ಕೋಟೆವಾಲೆ, ಶಂಕರ ಶೆಟ್ಟೆಣ್ಣವರ, ದುರದುಂಡಿ ತೋಳಿ, ರಾಮಪ್ಪ ಶೆಟ್ಟೆನ್ನವರ, ಆನಂದ ತೋಳಿ, ಗಂಗಾಧರ ಗುಂಡಿ, ಸಂಜು ಕಾಡಗಿ, ಅಡಿವೆಪ್ಪ ಚೌಗಲಾ ಸೇರಿದಂತೆ ಗ್ರಾಮದ ಹಲವಾರು ಶರಣ ಶರಣೆಯರು ಉಪಸ್ಥಿತರಿದ್ದರು. ಪ್ರವೀಣ ತೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.