ಹೈದರಾಬಾದ: ಆಗಸ್ಟ್ ೧೧
“ತೆಲಂಗಾಣಕ್ಕೂ ಬಸವತತ್ವಕ್ಕೂ ಅವಿನಾಭಾವ ಸಂಬಂಧವಿದೆ. ಲಿಂಗಾಯತರಾದ ನೀವಿಲ್ಲಿ ಇಷ್ಟು ಜನ ಸೇರಿದ್ದಕ್ಕೆ ನನಗೆ ಆಶ್ಚರ್ಯ ಹಾಗೂ ಸಂತೋಷವಾಗುತ್ತಿದೆ. ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಪ್ರಯತ್ನಿಸುವೆ,” ಎಂದು ತೆಲಂಗಾಣ ರಾಜ್ಯ ಸರ್ಕಾರದ ಸಾರಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಂ ಪ್ರಭಾಕರ ಭಾನುವಾರ ಹೇಳಿದರು.
ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, “ಬಸವತತ್ವವನ್ನು ಆಂಧ್ರ, ತೆಲಂಗಾಣ ಜನತೆ ಎಂದಿಗೂ ಗೌರವಿಸುತ್ತಾರೆ,” ಎಂದು ಹೇಳಿದರು.
ಪ್ರವಚನ ಕಾರ್ಯಕ್ರಮ ರಾಮಬಾಗ್, ರಾಮಮಂದಿರದಲ್ಲಿ ಸೆಪ್ಟೆಂಬರ್ ೦೧ರವರೆಗೆ ನಡೆಯಲಿದೆ.
ಲಿಂಗಾಯತರಾದ ನೀವಿಲ್ಲಿ ಇಷ್ಟು ಜನ ಸೇರಿದ್ದಕ್ಕೆ ನನಗೆ ಆಶ್ಚರ್ಯ ಹಾಗೂ ಸಂತೋಷವಾಗುತ್ತಿದೆ. ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಪ್ರಯತ್ನಿಸುವೆ ಎಂದರು.

ಮುಖ್ಯ ಅತಿಥಿಗಳಾಗಿ ಬಂದಿದ್ದ ಜಹಿರಾಬಾದ ಸಂಸದ ಸುರೇಶ ಶೇಟಕಾರ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಅದು ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು. ರಾಜೇಂದ್ರ ನಗರ ಶಾಸಕ ಪ್ರಕಾಶ ಗೌಡ್, ಪಿ.ಸಂಗಮೇಶ್ವರ ಪಾಲ್ಗೊಂಡಿದ್ದರು.
ಅತಿಥಿಗಳಾಗಿ,ರಾಮರೆಡ್ಡಿ, ಅರ್ಜುನ ಸಿಂಗ್, ಶೇಖರಪ್ಪ ಪಾಟೀಲ, ಅನಿಲಕುಮಾರ ಪಾಟೀಲ, ವಿಜಯಕುಮಾರ ಪಟ್ನೆ, ಐ. ಮಧು, ಶ್ರೀದೇವಿ ಪಾಟೀಲ ಭಾಗಿಯಾಗಿದ್ದರು.
ಸಮಾರಂಭದ ಸಾನ್ನಿಧ್ಯವನ್ನು ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು.
ಅತ್ತಾಪುರ ರಾಷ್ಟ್ರೀಯ ಬಸವದಳ, ಶ್ರಾವಣಮಾಸ ಪ್ರವಚನ ಸಮಿತಿ ಆಶ್ರಯದಲ್ಲಿ ನಡೆದಿರುವ ಪ್ರವಚನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರದೀಪ ಬಿರಾದಾರ, ಖಜಾಂಚಿ ಸಂಗಯ್ಯಸ್ವಾಮಿ ಮತ್ತೀತರರು ಪಾಲ್ಗೊಂಡಿದ್ದರು.

Good