ಹುನಗುಂದ
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಇಳಕಲ್ ವಿಜಯಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಜೊತೆ ಬಸವ ಮಂಟಪದಲ್ಲಿ ಗುರುವಾರ ಗೋಪ್ಯ ಸಭೆ ನಡೆಸಿದರು.
ಹುನಗುಂದ ಬಸವ ಮಂಟಪಕ್ಕೆ ಬಂದಿದ್ದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಜಿಯವರನ್ನು ಹಲವಾರು ಭಕ್ತರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಗುರುಮಹಾಂತ ಸ್ವಾಮೀಜಿ ಜೊತೆ ಕೊಠಡಿಯೊಂದರಲ್ಲಿ ಸುಮಾರು ಒಂದು ಗಂಟೆ ಸಭೆ ನಡೆಸಿದರೆಂದು ತಿಳಿದು ಬಂದಿದೆ. ಸ್ಥಳೀಯ ಮುಖಂಡರು ಕೂಡ ಸಭೆಯಲ್ಲಿ ಭಾವಹಿಸಿದ್ದರು. ‘ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಸ್ವಾಮೀಜಿ ನಡುವಿನ ಬಿಕ್ಕಟ್ಟು ಶಮನಗೊಳಿಸಿ, ಸಂಧಾನ ನಡೆಸುವ ಸಭೆಯ ಉದ್ದೇಶವಾಗಿತ್ತು’ ಎನ್ನಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಶ್ರಾವಣ ಮಾಸದಲ್ಲಿ ಆಚರಿಸುವ ಬಸವ ಪಂಚಮಿ ಕುರಿತು ಚರ್ಚಿಸಲು ಬಂದಿದ್ದೆ’ ಎಂದರು.
ಏನೇ ಇರಲಿ. ಅರಿವಿನ ನಡೆ ಇರಲಿ. ಶುಭಾಶಯಗಳು