ತಾಳಿಕೋಟಿ
ತಾಳಿಕೋಟಿ ತಾಲೂಕಿನ ಗಡಿಸೋಮಾಪುರ ಗ್ರಾಮದ ಗುರುಬಸವ ಮಹಾಮನೆಯ ಪೂಜ್ಯಶ್ರೀ ಇಂದುಧರಯ್ಯಸ್ವಾಮಿಗಳು ಹಿರೇಮಠ (83) ಅವರು ಇಂದು ಮುಂಜಾನೆ 11ಕ್ಕೆ ಲಿಂಗೈಕ್ಯರಾದರು.
ಶರಣರು ಬಸವ ತತ್ವನಿಷ್ಠರು, ತಾಲೂಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು, ಸರಳ ಸಜ್ಜನಿಕೆಯ ವ್ಯಕ್ತಿಯೆಂದು ಎಲ್ಲರಿಂದಲೂ ಮನ್ನಣೆ ಪಡೆದಿದ್ದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಗಡಿಸೋಮನಾಳದಲ್ಲಿ ಅವರ ಅಂತಿಮ ಕ್ರಿಯಾ ಸಂಸ್ಕಾರ ನೆರವೇರಿಸಲಾಗುವುದು.
