ಇಂಗಳೇಶ್ವರ ವಿರಕ್ತಮಠದ ಪೂಜ್ಯ ಚೆನ್ನಬಸವ ಸ್ವಾಮೀಜಿ ಲಿಂಗೈಕ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವನಬಾಗೇವಾಡಿ

ವಚನ ಶಿಲಾಮಂಟಪದ ನಿರ್ಮಾಪಕ ಇಂಗಳೇಶ್ವರ ವಿರಕ್ತಮಠದ ಪೂಜ್ಯ ಚೆನ್ನಬಸವ ಮಹಾಸ್ವಾಮಿಗಳು (98) ತಾಲೂಕಿನ ಇಂಗಳೇಶ್ವರದಲ್ಲಿ ಇಂದು ಲಿಂಗೈಕ್ಯರಾದರು.

ಇಂದು ಬೆಳಗಿನ ಜಾವ ಪೂಜ್ಯರು ವಯೋಸಹಜವಾದ ಕಾರಣಗಳಿಂದ ಬಯಲಾಗಿ ತಮ್ಮ ಅಪಾರ ಭಕ್ತಬಳಗವನ್ನು ದುಃಖದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತ್ಯಕ್ರಿಯೂ ನಾಳೆ ಮಧ್ಯಾಹ್ನ 5 ಗಂಟೆಗೆ ಇಂಗಳೇಶ್ವರದಲ್ಲಿ ಜರುಗುವುದು.

ತಮ್ಮ “ಕರಣ್ ಹಸಿಗೆ” ಪ್ರವಚನದ ಮೂಲಕ ನಾಡಿನ ಮೂಲೆ ಮೂಲೆಗೂ ಶ್ರೀಗಳು ಬಸವತತ್ವ ಪ್ರಚಾರ ಮಾಡಿದ್ದರು.

ಇಂಗಳೇಶ್ವರದ ವಿರಕ್ತಮಠದ ಆವರಣದಲ್ಲಿ ನಿರ್ವಿುಸಿರುವ ಈ ವಚನ ಶಿಲಾಶಾಸನ ಮಂಟಪ ಅವರ 40 ವರ್ಷಗಳ ನಿರಂತರ ಶ್ರಮದ ಫಲ.

ಗುರುಗಳು ಲೋಕಪರ್ಯಟನೆಗೆ ತೆರಳಿದಾಗ ಉಂಟಾದ ಸ್ಪೂರ್ತಿಯಿಂದಾಗಿ, ಶರಣರ ವಚನಗಳನ್ನು ಶಾಶ್ವತವಾಗಿ ಉಳಿಸುವ ಉದ್ದೇಶಕ್ಕೆ ಕೈಹಾಕಿದರು.

ಶೆಲ್ಲಿಕೇರಿ ಕಲ್ಲಿನಲ್ಲಿ 1.60 ಲಕ್ಷಕ್ಕೂ ಅಧಿಕ ಅಕ್ಷರಗಳಲ್ಲಿ ಬಸವಣ್ಣನವರು ಹಾಗೂ ವಿವಿಧ ಶರಣರ 1500ಕ್ಕೂ ಹೆಚ್ಚು ವಚನಗಳನ್ನು ಹಲವಾರು ಶಿಲ್ಪಿಗಳಿಂದ ಕೆತ್ತಿಸಿ, ಅದನ್ನು ಮಂಟಪದಲ್ಲಿ ಅಳವಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಬಸವಾದಿ ಶರಣರ ವಚನಗಳನ್ನು ರಕ್ಷಿಸುವುದೇ ವಿರಕ್ತಮಠಗಳ ಉದ್ದೇಶ’ ಎಂದು ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದ್ದರು.

‘ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಯರು ಬಸವಣ್ಣನವರ ವಚನ ಶಿಲಾಶಾಸನ ಮಂಟಪ ನಿರ್ಮಿಸಿ ವಚನ ಸಂರಕ್ಷಣೆ ಮಾಡಿದರು,’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
7 Comments

Leave a Reply

Your email address will not be published. Required fields are marked *