ಇಂಗಳೇಶ್ವರ ಪೂಜ್ಯರಿಗೆ ಪೊಲೀಸ್ ಗೌರವದೊಂದಿಗೆ ಅಂತಿಮ ನಮನ.
ಇಂಗಳೇಶ್ವರ
ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಶ್ರೀಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿತು.


ಶ್ರೀಗಳೇ ರೂಪಿಸಿದ್ದ ಪ್ರಸಿದ್ಧ ವಚನ ಶಿಲಾಮಂಟಪದ ಆವರಣದಲ್ಲಿ ನಿರ್ಮಾಣ ಮಾಡಿದ್ದ ಗದ್ದುಗೆಯಲ್ಲಿಯೇ ಅವರ ಅಂತಿಮ ಧಾರ್ಮಿಕ ವಿಧಿವಿಧಾನಗಳು ಲಿಂಗಾಯತ ಸಂಪ್ರದಾಯದಂತೆ ನಡೆದವು.

ಪೋಲಿಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೋಲಿಸ್ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಿದರು.

ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ಕೆ.ಆನಂದ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿಇಓ ರಿಷಿ ಆನಂದ, ಶಾಸಕ ರಾಜುಗೌಡ ಪಾಟೀಲ, ಎಂಎಲ್ಸಿ ಭೀಮರಾವ ಪಾಟೀಲ
ಸೇರಿದಂತೆ ಅನೇಕ ಮುಖಂಡರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.


ಅಪಾರ ಸಂಖ್ಯೆಯ ಭಕ್ತಸಮೂಹ ಭಾಗವಹಿಸಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು.


ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳು (93) ಅವರು ಗುರುವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದರು. ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ವಿವಿಧೆಡೆಗಳಿಂದ ಅನೇಕ ಶ್ರೀಗಳು, ಭಕ್ತ ಸಮೂಹ ಇಂಗಳೇಶ್ವರ ಗ್ರಾಮಕ್ಕೆ ನಿನ್ನೆಯಿಂದಲೇ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು.

ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆಯು ವಿರಕ್ತಮಠದಿಂದ ಶುಕ್ರವಾರ ಮಧ್ಯಾಹ್ನ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿರಕ್ತಮಠಕ್ಕೆ ಸಂಜೆ ಆಗಮಿಸಿತು. ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳು ಭಾಗವಹಿಸಿದ್ದವು.
ಶ್ರೀಗಳ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಟ್ಯಾಕ್ಟರ್ ಮೂಲಕ ಮೆರವಣಿಗೆ ನಡೆಯಿತು. ಮೆರವಣಿಗೆಯ ಸಾಗುವ ಮಾರ್ಗದಲ್ಲಿ ಗ್ರಾಮಸ್ಥರು ರಂಗೋಲಿ ಚಿತ್ತಾರ ಬಿಡಿಸಿದ್ದರು. ಭಕ್ತ ಸಮೂಹ ಓಂ ಶ್ರೀಗುರುಬಸವ ಲಿಂಗಾಯನಮಃ ಮಂತ್ರ ಪಠಿಸಿದರು. ರಸ್ತೆ ಅಕ್ಕಪಕ್ಕದಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರು ಶ್ರೀಗಳ ಪಾರ್ಥಿವ ಶರೀರ ಕಣ್ತುಂಬಿಕೊಳ್ಳುವದರೊಂದಿಗೆ ತಮ್ಮ ಅಂತಿಮ ನಮನ ಸಲ್ಲಿಸುತ್ತಿರುವದು ಕಂಡುಬಂದಿತು. ಕೆಲಭಕ್ತರು ಕಣ್ಣೀರು ಹಾಕುವುದು ಕಂಡುಬಂದಿತು.

ಈ ಸಂದರ್ಭದಲ್ಲಿ ಶ್ರೀಮಠದ ಕಿರಿಯ ಸ್ವಾಮೀಜಿ, ಡಾ. ಸಿದ್ದಲಿಂಗ ಸ್ವಾಮೀಜಿ, ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಧಾರವಾಡದ ಮುರುಘಾಮಠದ ಶ್ರೀಗಳು, ನಿಡಸೋಸಿಯ ಜಗದ್ಗುರುಗಳು, ಮೂರುಸಾವಿರ ಮಠದ ಜಗದ್ಗುರುಗಳು, ಬೀಳಗಿ ಕಲ್ಮಠದ ಶ್ರೀಗಳು, ವಡವಡಗಿ ಶ್ರೀಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿ, ಯರನಾಳದ ಸಂಗನಬಸವ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ಪಡೇಕನೂರಿನ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ, ಕಲ್ಲಿನಾಥದೇವರು, ಹಾವೇರಿಯ ಶಾಂತಲಿಂಗ ಸ್ವಾಮೀಜಿ, ನದಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ, ಗುಂಡಕನಾಳ ಸ್ವಾಮೀಜಿ, ಗದಗದ ಚಂದ್ರಶೇಖರ ಶಿವಾಚಾರ್ಯ, ಬಸರಕೋಡದ ಜಗದೀಶ ಸ್ವಾಮೀಜಿ, ಬೀಳಗಿಯ ಚನ್ನಬಸವ ಸ್ವಾಮೀಜಿ, ಹಿಕ್ಕನಗುತ್ತಿಯ ಪ್ರಭುಲಿಂಗ ಸ್ವಾಮೀಜಿ, ಕವಡಿಮಟ್ಟಿಯ ಬಸವಪ್ರಭು ಸ್ವಾಮೀಜಿ, ಲಟ್ಟಗೇರಿಯ ಗುರುಮೂರ್ತಿ, ಮಣೂರಿನ ಸಂಗನಬಸವ ಸ್ವಾಮೀಜಿ, ಇಂಗಳಗೇರಿಯ ಅಕ್ಕಮಹಾದೇವಿ ಮಾತಾ, ಮುಳವಾಡದ ಸಿದ್ಧಲಿಂಗ ಶಿವಾಚಾರ್ಯ, ತೇಲಸಂಗದ ವೀರೇಶ್ವರ ದೇವರು, ಜಮಖಂಡಿ ಓಲೇಮಠದ ಆನಂದ ದೇವರು, ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಗುಳೇದಗುಡ್ಡ ಶ್ರೀಗಳು, ಕಲಬುರ್ಗಿಯ ಸಿದ್ಧಲಿಂಗ ಸ್ವಾಮೀಜಿ, ಚಿಮ್ಮಲಗಿಯ ಸಿದ್ಧರೇಣುಕ ಸ್ವಾಮೀಜಿ, ಮುದ್ದೆಬಿಹಾಳದ ಲಾಲನಿಂಗೇಶ್ವರ ಶರಣರು, ಸೋಲಾಪೂರದ ಸ್ವಾಮಿನಾಥ ಸ್ವಾಮೀಜಿ, ಅಥಣಿಯ ಸಿದ್ಧಲಿಂಗ ಸ್ವಾಮೀಜಿ, ಕೊಕಟನೂರಿನ ಮಡಿವಾಳೇಶ್ವರ ಸ್ವಾಮೀಜಿ, ಬನಹಟ್ಟಿಯ ಮಹಾಂತ ದೇವರು, ಜಮಖಂಡಿಯ ಶ್ರೀದೇವಿತಾಯಿ, ನಾಗಠಾಣದ ಚನ್ನಬಸವ ಸ್ವಾಮಿಜಿ, ಗುಣದಾಳದ ವಿವೇಕಾನಂದರ ಸ್ವಾಮೀಜಿ, ನಾವದಗಿ ಶ್ರೀಗಳು, ಗ್ರಾಪಂ ಅಧ್ಯಕ್ಷ ಬನ್ನೆಪ್ಪ ಡೋಣೂರ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ನಿವೃತ್ತ ತಹಸೀಲ್ದಾರ ಎಂ.ಎನ್. ಚೋರಗಸ್ತಿ, ಅಶೋಕ ಹಂಚಲಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಹಾಸಿಂಪೀರ ವಾಲಿಕಾರ, ನಿಂಗಪ್ಪ ಬೊಮ್ಮನಹಳ್ಳಿ, ಕಲ್ಲು ದೇಸಾಯಿ, ಸಂಗಮೇಶ ಓಲೇಕಾರ, ಡಾ.ಮಹಾಂತೇಶ ಬಿರಾದಾರ, ಡಾ. ಎಮ್. ಎಸ್. ಮದಭಾವಿ, ಉಮೇಶ ಕವಲಗಿ, ಈರಣ್ಣ ಬೆಕಿನಾಳ, ಶಿವನಗೌಡ ಬಿರಾದಾರ, ಎ.ಎಂ. ಪಾಟೀಲ ಉಕ್ಕಲಿ, ಶಾಂತು ಬೈಚಬಾಳ, ಅರವಿಂದ ಕುಲಕರ್ಣಿ, ನಾನಾಗೌಡ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಸಮೂಹ ಇದ್ದರು.




ವಚನಶಿಲಾ ಮಂಟಪದಲ್ಲಿ ನಡೆದ ಅಂತಿಮ ಧಾರ್ಮಿಕ ವಿಧಿವಿಧಾನ ಕ್ರಿಯೆಗಳನ್ನು ಭಕ್ತಸಮೂಹ ಶ್ರೀಮಠದ ಹೊರಗಡೆ ಅಳವಡಿಸಲಾದ ಎಲ್.ಡಿ. ಪರದೆಯಲ್ಲಿ ವೀಕ್ಷಿಸಿದರು.

ಶ್ರೀಗಳ ಅಂತಾರಾತ್ಮಕ್ಕೆ ವಿಶ್ವಜ್ಯೋತಿ ಬಸವಣ್ಣನವರು ಸದ್ಗತಿ ದಯಪಾಲಿಸಲಿ ಓಂ ಶಾಂತಿ
ಓಂ ಶಾಂತಿ