ನಾಡಿನ ನೂರಾ ನಲವತ್ತಕ್ಕೂ ಹೆಚ್ಚು ಬಸವ ಭಕ್ತರು, ಅಧ್ಯಾತ್ಮಿಕ ಜಿಜ್ಞಾಸುಗಳು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು
ರಾಷ್ಟ್ರೀಯ ಬಸವ ಪ್ರತಿಷ್ಠಾನದ ವತಿಯಿಂದ ವರ್ಷ ಬಾಲಿ,ಮಲೇಷಿಯಾ ಹಾಗೂ ಥೈಲ್ಯಾಂಡ್ ರಾಷ್ಟ್ರಗಳ ಹನ್ನೊಂದು ದಿನಗಳ ಕಾಲ ‘ಭಾರತ ವಚನ ಸಂಸ್ಕೃತಿ ಯಾತ್ರೆ’ಯನ್ನು ಆಯೋಜಿಸಿದೆ.
ದಿನಾಂಕ ೨೧ ನವೆಂಬರ್ ೨೦೨೪ ರಂದು ಇಂಡೋನೇಷ್ಯಾದ ಬಾಲಿಯಲ್ಲಿ ‘ಇಂಡಿಯಾ-ಬಾಲಿ ಸಾಂಸ್ಕೃತಿಕ ಸಮಾವೇಶ’ ಸಾಯಂಕಾಲ ೬.೦೦ ಗಂಟೆಗೆ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಬೆಟ್ಟಳ್ಳಿ ಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಾ.ಡಿ.ವಿ.ಸದಾನಂದಗೌಡರು, ದೇಶದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಡಾ.ವಿ.ಗೋಪಾಲಗೌಡರು ಹಾಗೂ ಇಸ್ರೋದ ಮಾಜಿ ಚೇರಮನ್‌ರಾದ ಡಾ. ಎ.ಎಸ್.ಕಿರಣಕುಮಾರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ನಾಡಿನ ಬಸವ ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ರಂಜಾನ್ ದರ್ಗಾ ಮತ್ತು ವಚನ ಮಾಧ್ಯಮ ಸಂಸ್ಥೆಯ ಎಂ.ಡಿ. ಹಾಗೂ ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಅವರು ‘ವಚನ ಸಾಹಿತ್ಯದ ಜಾಗತಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಸುರೇಶ ಅವರು ಅಧ್ಯಕ್ಷತೆವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಿಯ ಪ್ರೇಮಲೋಕ ಅಂತಾರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕರಾದ ಗುರೂಜಿ ಡಾ. ರಮೇಶ್ ಶಾಸ್ತ್ರಿ ಅವರಿಗೆ ೨೦೨೪ ನೇ ಸಾಲಿನ ‘ಚೀಫ್ ಸಿವಿಲಿಯನ್ ಅವಾರ್ಡ್’ ನೀಡಿ ಗೌರವಿಸಲಾಗುವುದು.
ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ‘ಉರಿಲಿಂಗ ಪೆದ್ದಿ’ ನಾಟಕ ಪ್ರದರ್ಶನವಿದೆ.
ನಾಡಿನ ನೂರಾ ನಲವತ್ತಕ್ಕೂ ಹೆಚ್ಚು ಬಸವ ಭಕ್ತರು, ಅಧ್ಯಾತ್ಮಿಕ ಜಿಜ್ಞಾಸುಗಳು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬರುವ ದಿನಗಳಲ್ಲಿ ವಚನ ಸಾಹಿತ್ಯದ ಮೌಲ್ಯವನ್ನು ಇಂದಿನ ಯುವಕರಿಗೆ ಜಾಗತಿಕ ಮಟ್ಟದಲ್ಲಿ ತಲುಪಿಸುವ ಉದ್ದೇಶವನ್ನು ಪ್ರತಿಷ್ಠಾನ ಹೊಂದಿದೆ ಎಂದು ಅಧ್ಯಕ್ಷ ಎಸ್.ಎಂ. ಸುರೇಶ, ಕಾರ್ಯಾಧ್ಯಕ್ಷ ಸಿ.ಎಸ್.ಬೋಪಯ್ಯ, ಜಿ.ಎನ್. ಶಿವಕುಮಾರ, ಆರ್.ಮಂಜುನಾಥ, ಪ್ರಸನ್ನಕುಮಾರ ಮರಡಿ, ಎಸ್. ಮಂಜುನಾಥ, ಶಂಕರ್ ಶಾಸ್ತ್ರಿ, ಆರ್.ವಿ. ಶಾಂತಾನಂದ, ಬಿ.ಆರ್. ಹರೀಶ್, ಸ್ವರ್ಣಗೌರಿ ಹಾಗೂ ರೇಖಾ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಾದಿ ಶರಣರ ಮೌಲ್ಯಗಳ ಮತ್ತು ವಚನಗಳ ನಿಜಾಚರಣೆಯ ಪ್ರಚಾರದ ಉದ್ದೇಶ ಇಟ್ಟುಕೊಂಡು ಆರಂಭವಾದ ಸಂಸ್ಥೆಯೇ ರಾಷ್ಟ್ರೀಯ ಬಸವ ಪ್ರತಿಷ್ಠಾನ. ಸಾಣೆಹಳ್ಳಿಯ ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ, ಎಸ್.ಎಂ.ಸುರೇಶ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜನೆ ಮಾಡುತ್ತ ಜಾಗತಿಕ ಪರ್ಯಟನೆಯಲ್ಲಿ ತೊಡಗಿದೆ.
ಗುರ ಬಸವಲಿಂಗ ಶರಣ!!
[ಅ.ಸ.ಷ.]
🌹🌹🌹🌹🌹🌹🌹🌹
ಶರಣ ಬಂಧುಗಳೇ,
ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದಲ್ಲಿ ನಿರಾಕಾರ ದೇವನಾಗಲಿ ಯಾ ಆಕಾರ ದೇವನಾಗಲಿ ಇಲ್ಲವಾದುದರಿಂದ ಲಿಂಗವಂತರಲ್ಲಿ ಯಾತ್ರೆಯಿದೆಯೆ ಹೊರತು ತೀರ್ಥಯಾತ್ರೆಯಿಲ್ಲ, ತಾನೆ ದೈವತ್ವವನ್ನು ಪಡೆದು ದೇವನಾಗುವ ಕಲೆಯನ್ನು ಕರಲಿಂಗನಿಷ್ಟೆಯಿಂದ ತಾನೆ ಕರಗತ ಮಾಡಿಕೊಳ್ಳಬೇಕೆ ವಿನಹಾ ಭಯ ಭೀತಿ ಭ್ರಾಂತಿ ಭ್ರಮೆ ಭೇದಗಳಿಂದ ದೇವರನ್ನು ಅಂತರಂಗದಲ್ಲಿ ಯಾ ಬಹಿರಂಗದಲ್ಲಿ ಸೃಷ್ಟಿಸಿ ಅವುಗಳಿಗೆ ಅಡ್ಡ ಯಾ ಉದ್ದ ಯಾ ಕುಳಿತು ಹಣೆ ಹಚ್ಚುವುದಲ್ಲ, ಶರಣಾರ್ಥಿ.
😀😀😀
ಶರಣ Mrutyunjaya Satenahalli ಅಣ್ಣಾವರು ಕೇಳುತ್ತಾರೆ
👆👆👆
ಮತ್ತೆ ಕೂಡಲಸಂಗದಲ್ಲಿ ಇರುವುದು ಏನು. ಅಣ್ಣ ಬಸವಣ್ಣನವರ ಕೂಡಲ ಸಂಗಮದೇವ ಯಾರು. ಅವನು ಶಿವನಲ್ಲವೇ. ಅ ಶಿವನನ್ನು ಬಸವ ಭಕ್ತರು ಪೂಜಿಸಬಾರದೇ……?
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ Mrutyunjaya Satenahalli ಅಣ್ಣಾವರೇ ಆಲಿಸಿ, ಕೂಡಲಸಂಗಮದಲ್ಲಿ ಇರುವುದು ಅಲ್ಲಿಯ ಶೈವ ಮತದ ದೇಗುಲ ಹಾಗು ಕೆಲವು ಪ್ರೇಕ್ಷಣೀಯ ಯಾತ್ರಾ ಸ್ಥಳಗಳು, ಅಪ್ಪ ಸಂಗನಬಸವಣ್ಣ ಅವರು ಬಳಸಿದ ಪದ ಕೂಡಲಸಂಗಮದೇವ ಎಂಬುದು ಅವರ ಲಿಂಗಾಂಗ ಚೈತನ್ಯದ ಹೆಸರಾಗಿದ್ದು ಹಾಗೆಯೆ ಉಳಿದ ಶರಣರ ಲಿಂಗಾಂಗ ಚೈತನ್ಯದ ಹೆಸರುಗಳು ಅವರವರದೆ ಆಗಿವೆ. ನೀವು ಬಹುಶಃ ಕೇಳುತ್ತಿರುವ ದೇವಸ್ಥಾನದ ಸಂಗಮೇಶ್ವರ ಸ್ಥಾವರಲಿಂಗದ ಬಗ್ಗೆ ಆಗಿದ್ದಂತೆ ಕಾಣುತ್ತಿದ್ದು ಅದು ಲಿಂಗವಂತರಿಗೆ ತಾಣವೇ ಹೊರತು ದೇವರಲ್ಲ. ಲಿಂಗ ಧರ್ಮದಲ್ಲಿ ತಾನೇ ದೆವನಾಗುವಿಕೆಯನ್ನು ಕಂಡುಕೊಳ್ಳಬೇಕೆ ವಿನಹಾ ಮತ್ತೊಂದು ಮತ್ತೊಬ್ಬರು ತನಗೆ ದೇವರಲ್ಲ. ಹಾಗಾಗಿ ಅಂತರಂಗದ ಮತ್ತು ಬಹಿರಂಗದ ದೇವರನ್ನು ನಂಬದ ಏಕೈಕ ಈ ಲೋಕದ ಧರ್ಮವೆಂದರೆ ಅದು ಲಿಂಗ ಧರ್ಮ ಮಾತ್ರ, ಶರಣಾರ್ಥಿ.
😀😀😀
😀😀😀
ಯಿಂದ
ಪೀಠಾಧಿಪತಿ,
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ ಭಾರತ ದೇಶ
ದೂರ!! ೮೪೩೧೯೩೯೩೮೦
😀😀😀