ಅಂತರ್ಜಾತಿ ದಂಪತಿ ರಕ್ಷಣೆಗೆ ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ಚಿಂತನೆ

ಬಸವ ಮೀಡಿಯಾ
ಬಸವ ಮೀಡಿಯಾ

ಮರ್ಯಾದೆ ಹತ್ಯೆ ತಡೆಯಲು ‘ಇವ ನಮ್ಮವ’ ಮಸೂದೆ ಬಜೆಟ್ ಅಧಿವೇಶನದಲ್ಲಿ ಮಂಡನೆ

ಬೆಂಗಳೂರು

ಜಾತಿ ಸಂಕೋಲೆ ಮೀರಿ ಪ್ರೀತಿಸಿ ಮದುವೆಯಾಗುವ ದಂಪತಿಗೆ ಸಾಂವಿಧಾನಿಕ ರಕ್ಷಣೆ ನೀಡಲು ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ರಾಜ್ಯ ಸರಕಾರ ಚಿಂತಿಸುತ್ತಿದೆ.

ಕುಟುಂಬ ಮತ್ತು ಸಮಾಜದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ಕೌನ್ಸೆಲಿಂಗ್ ಮತ್ತು ನೆರವು ನೀಡಲು ‘ಇವ ನಮ್ಮವ ವೇದಿಕೆ’ಯಲ್ಲಿ ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳ ತಂಡವಿರುತ್ತದೆ.

ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ‘ಸುರಕ್ಷಿತ ಮನೆ’ ಸ್ಥಾಪಿಸಲಾಗುವುದು. ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ 6 ಗಂಟೆಯೊಳಗೆ ಪೊಲೀಸರು ಅಗತ್ಯ ಭದ್ರತೆ ಒದಗಿಸಬೇಕಾಗುತ್ತದೆ.

ಮಾನ್ಯ ಹತ್ಯೆಯ ನಂತರ ಅಂತರ್ಜಾತಿ ವಿವಾಹವಾಗುವ ದಂಪತಿಗಳನ್ನು ರಕ್ಷಿಸಲು ರೂಪಿಸಿರುವ ‘ಮದುವೆಯಲ್ಲಿ ಮುಕ್ತ ಆಯ್ಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆ ಹಾಗೂ ನಿಷೇಧ ಕಾಯ್ದೆ- 2026’ ಮಸೂದೆಯ ಕೆಲವು ಮುಖ್ಯ ಅಂಶಗಳಿವು.

ಸರಳವಾಗಿ ‘ಇವ ನಮ್ಮವ ಇವ ನಮ್ಮವ’ ಎಂದು ಕರೆಯಲಾಗುವ ಈ ಕಾನೂನನ್ನು ಜಾರಿಗೆ ತರಲು ಮಸೂದೆಯು ಸಧ್ಯದಲ್ಲೇ ಶುರುವಾಗುವ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಬಸವಣ್ಣನವರ ‘ಇವ ನಮ್ಮವ’ ಸಮಾನತೆ ತತ್ವ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯದಂತೆ ರೂಪಿಸಲಾಗಿರುವ ಈ ಮಸೂದೆಯಲ್ಲಿ ಮರ್ಯಾದೆ ಹತ್ಯೆಯನ್ನು ನಿಯಂತ್ರಿಸಲು ಗಂಭೀರ ಪ್ರಯತ್ನ ಮಾಡಲಾಗಿದೆ.

ಮರ್ಯಾದಾ ಹತ್ಯೆ ಆಧಾರಿತ ಅಪರಾಧ ಎಸಗುವವರಿಗೆ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

ಕೇವಲ ಕೊಲೆ ಅಥವಾ ದೈಹಿಕ ಹಲ್ಲೆ ಮಾತ್ರವಲ್ಲದೆ ಮಾನಸಿಕ ಕಿರುಕುಳ ನೀಡುವುದನ್ನು ಈ ಮಸೂದೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ

ದಂಪತಿಗಳ ವಿರುದ್ಧ ಸಾಂಕೇತಿಕವಾಗಿ ಶವಸಂಸ್ಕಾರದ (ತಿಥಿ) ವಿಧಿವಿಧಾನ ಮಾಡುವುದು ಅಥವಾ ಅವರ ಕುಟುಂಬದ ಬಗ್ಗೆ ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸುವುದು ಅಥವಾ ಸುಳ್ಳು ಮಾಹಿತಿ ಹರಡುವುದನ್ನು ಈ ಕಾಯ್ದೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದೆ

ದಂಪತಿ ಫೋನ್, ಲ್ಯಾಪ್‌ಟಾಪ್ ಕಸಿದುಕೊಳ್ಳುವುದು ಅಥವಾ ಅವರ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದನ್ನು ‘ಗೌರವ’ದ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ

ಅಂತರ್ಜಾತಿ ವಿವಾಹಿತ ಮಹಿಳೆಗೆ ಬಲವಂತದ ಗರ್ಭಪಾತ ಮಾಡಿಸುವುದನ್ನು ಈ ಕಾಯ್ದೆಯಡಿ ಗಂಭೀರ ಅಪರಾಧವೆಂದು ಗುರುತಿಸಲಾಗಿದೆ.

ಯಾವುದೇ ಇಬ್ಬರು ವಯಸ್ಕರರು ತಮ್ಮ ಆಯ್ಕೆಯ ಸಂಗಾತಿ ಮದುವೆಯಾಗಲು ಪಾಲಕರು, ಕುಟುಂಬ ಅಥವಾ ಜಾತಿಯ ಒಪ್ಪಿಗೆ ಕಡ್ಡಾಯವಲ್ಲ ಎಂದು ಈ ಕಾಯ್ದೆ ಸ್ಪಷ್ಟಪಡಿಸುತ್ತದೆ.

ಡಿಸೆಂಬರ್ ತಿಂಗಳಲ್ಲಿ ಲಿಂಗಾಯತ ಸಮುದಾಯದ ಮಾನ್ಯ ದಲಿತ ಯುವಕ ವಿವೇಕಾನಂದ ದೊಡ್ಡಮನಿ ಅವರನ್ನು ಮದುವೆಯಾಗಿದ್ದಕ್ಕೆ ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರಿಂದಲೇ ಕೊಲೆಯಾಗಿದ್ದಳು.

ಆಗ ರಾಜ್ಯವಿಡೀ ವ್ಯಕ್ತವಾಗಿದ್ದ ಆಕ್ರೋಶದಲ್ಲಿ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಮಾನ್ಯ ಪಾಟೀಲ ಹೆಸರಲ್ಲಿ ತರಬೇಕೆಂದು ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
2 Comments
  • ನಿಜಾ ಪ್ರೀತಿ ಪ್ರೇಮಕ್ಕೆ ಬೆಲೆಯಿಲ್ಲ ಅನೈತಿಕ ಸಂಬಂಧಗಳೆ ಹೆಚ್ಚು ಹುಚ್ಚು ಜನ ಅವರನ್ನು ನೋಡಿ ಸುಮ್ಮನೆ ಇರುತ್ತಾರೆ ಇಂತವರನ್ನು ನೋಡಿ ರೋಷದಿಂದ ಕೊಚ್ಚುತ್ತಾರೆ ಅಂತವರಿಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ ಜೈ ಬಸವ ಜೈ ಅಂಬೇಡ್ಕರ್ ಜೈ ಜೈ ಸಂವಿಧಾನ.

Leave a Reply

Your email address will not be published. Required fields are marked *