ದೇವದುರ್ಗ
ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದಲ್ಲಿ ನೀಲಾಂಬಿಕಾ ಬಸವ ಯೋಗಾಶ್ರಮ ಏರ್ಪಡಿಸಿದ್ದ ವಚನ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.
ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಹುಲಸೂರು ಮಾತಾಡುತ್ತಾ, ಜಾಗೀರ ಜಾಡಲದಿನ್ನಿ ಇದು ಅತ್ಯಂತ ಹಿಂದುಳಿದ ಗ್ರಾಮ. ಇಂತಹ ಗ್ರಾಮದಲ್ಲಿ ಬಸವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಖುಷಿಯಾಯಿತು. ಜನ ಇಂತಹ ಅಧುನಿಕ ಕಾಲದಲ್ಲೂ ಮೌಢ್ಯದಲ್ಲಿ ಮುಳುಗಿದೆ. ಒಬ್ಬರ ಮನವ ನೋಯಿಸಿ ಒಬ್ಬರ ಮನವ ಘಾತವ ಮಾಡಿ ಗಂಗೆಯ ಮುಳುಗಿದರೇನು ಉಪಯೋಗವಿಲ್ಲ. ಗಂಗೆಯ ಮುಳುಗಿ ಆದರೆ ಯಾರ ಮನಸ್ಸು ನೋಯಿಸಬೇಡಿ. ತಂದೆ ತಾಯಿಗಳಿಗೆ ಗೌರವ ಇಲ್ಲದಂಗಾಗಿದೆ. ಹಿರಿಯರಿಗೆ ಗೌರವ ಕೊಡಲು ಮಕ್ಕಳಿಗೆ ಕಳಿಸಿ ಎಂದು ಕರೆ ನೀಡಿದರು.
ಸಾನಿಧ್ಯವಹಿಸಿ ಬಸವಪ್ರಭು ಬೆಟ್ಟದೂರು ಮಾತನಾಡುತ್ತಾ, ಸಮಾಜ ನಾಲ್ಕು ಭಾಗವಾಗಿ ಛಿದ್ರವಾಗಿದ್ದಾಗ ಬಸವ ತಂದೆ ಉದಾಯಿಸಿದ. ತಳಸಮುದಾಯದವರೊಂದಿಗೆಬಸವಣ್ಣ ಸಮಾಜ ಕಟ್ಟಿದ.
ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಕಲಿಸಿದ. ದುಡಿಯುವುದನ್ನು ಕಲಿಸಿದ. ಸಮಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ವಚನ ಓದಬೇಕು, ಅದರಂತೆ ನಡೆಯಬೇಕು, ಹಾಗಾದಾಗ ಮಾತ್ರ ಸಮಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ ಮಾತನಾಡಿ, ಬಸವತತ್ವ ಹಾಗೂ ಚಿಂತನೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾಡಬೇಕಾಗಿದೆ. ಅಂತಹ ಕೆಲಸವನ್ನು ಈ ಗ್ರಾಮದಲ್ಲಿ ವೀರಭದ್ರ ಮಹಾಸ್ವಾಮಿಗಳು ಮಾಡ್ತಾ ಇರೋದು ಶ್ಲಾಘನೀಯ.
ಯಾವಾಗ ಬಸವಣ್ಣನವರು ಇವ ನಮ್ಮವ ಇವ ನಮ್ಮವ ಎಂದು ಅಪ್ಪಿಕೊಂಡರೊ ಆಗ ಎಲ್ಲ ಜಾತಿ ಜನಾಂಗದ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನ ಅನುಭವ ಮಂಟಪದಲ್ಲಿ ಸೇರಿದರು. ಶರಣ ವಿಚಾರ ಅಳವಡಿಸಿಕೊಳ್ಳಲು ಮಕ್ಕಳಿಗೆ ಪ್ರೋತ್ಸಾಹಿಸಿ ಅದರಿಂದ ಅವರಿಗೆ ಸಂಸ್ಕಾರ ಸಿಗುತ್ತದೆ. ಸಂಸ್ಕಾರವಿಲ್ಲದೆ ಯುವಕರು ಹಾಳಾಗುತ್ತಿದ್ದಾರೆ. ಮಕ್ಕಳೇ ತಂದೆ ತಾಯಿಗಳನ್ನು ಕೊಲೆ ಮಾಡೋ ದುಸ್ಥಿತಿ ಬಂದಿದೆ, ಅದನ್ನು ತಪ್ಪಿಸಿ ಎಂದರು.
ತಾಯಂದಿರು ವಚನಗಳನ್ನು ಹಾಡುತ್ತ ಹಾಡುತ್ತ ಅಡುಗೆ ಮಾಡಿ ಅದು ಪ್ರಸಾದವಾಗಿ ಮಾರ್ಪಾಡಾಗುತ್ತದೆ. ಕೆಲಸ ಮಾಡುವಾಗ ವಚನ ಪಠಿಸಿ ಅದರಿಂದ ಅದು ಕಾಯಕವಾಗುತ್ತದೆ. ಇವೆಲ್ಲವುಗಳಿಂದ ಮನೆಗಳು ಮಹಾಮನೆಗಳಾಗುತ್ತವೆ.
ಬಸವಣ್ಣನವರು ಕಾಯಕ ಜೀವಿಗಳಿಗೆ ಶಿಕ್ಷಣ ಕೊಟ್ಟು ವಚನ ಬರೆಸಿದರು, ಕಾಯಕದ ಮಹತ್ವ ತೋರಿಸಿ ಕೊಟ್ಟರು ಎಂದರು.

ಬೆಟ್ಟಪ್ಪ ಕಸ್ತೂರಿ ಮತ್ತು ಸಂಗಡಿಗ ಕಲಾವಿದರು “ಸಮಗಾರ ಹರಳಯ್ಯ” ನಾಟಕ ಪ್ರದರ್ಶಿದರು.
ವೇದಿಕೆಯಲ್ಲಿ ವೀರಭದ್ರ ಸ್ವಾಮಿಗಳು, ಡಾ.ಬಸವಪ್ರಭು ಪಾಟೀಲ ಬೆಟ್ಟದೂರು. ವಿದ್ಯಾವತಿ, ಕರೇಗೌಡ ಪೋ.ಪಾ. ಕುರುಕುಂದ, ನಾಗಭೂಷಣ ನವಲಿ, ಶಾಂತಪ್ಪ ಚಿಂಚರಕಿ, ಅಮರೇಶ್ ಗವಿಗಟ್ಟ ಇನ್ನು ಅನೇಕರು ಉಪಸ್ಥಿತರಿದ್ದರು.
ಬಸವಲಿಂಗಪ್ಪ ಬಾದರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಬಸವ ನೀರಮಾನವಿ ಕಾರ್ಯಕ್ರಮ ನಿರೂಪಿಸಿದರು.