ಜಹಿರಾಬಾದ :
ಸ್ಥಳೀಯ ಅನುಭವ ಮಂಟಪದಲ್ಲಿ ರವಿವಾರ ಸಾಮೂಹಿಕ ಬಸವಗುರುವಿನ ಪ್ರಾರ್ಥನೆ ಮತ್ತು ಹೊಸ ವರ್ಷದ ಲಿಂಗಾಯತ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ತೆಲಂಗಾಣದ ಜಹಿರಬಾದ ತಹಸಿಲ್ದಾರ್ ಆದ ಪಿ. ದಶರತ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು, ಜಹಿರಾಬಾದನ ಲಿಂಗಾಯತ ಸಮಾಜದವರು ಪ್ರತಿ ವಾರಕ್ಕೊಮ್ಮೆ ಬಸವಗುರು ಪ್ರಾರ್ಥನೆ ಮಾಡುತ್ತಾ, ಪ್ರತಿತಿಂಗಳು ೦೧ರಂದು ಹಾಗೂ ೧೫ರಂದು ಬಸವ ಜ್ಯೋತಿ ಅರಿವಿನ ಕಾರ್ಯಕ್ರಮವನ್ನು ಮಾಡುತ್ತಾ, ಮನೆ ಮನೆಗೆ ಬಸವ ತತ್ವದ ಅರಿವು ಮೂಡಿಸುತ್ತಾ ಬರುತ್ತಿರುವುದು ತುಂಬಾ ಸಂತೋಷದ ವಿಷಯ.
ವಿಶ್ವಗುರು ಬಸವೇಶ್ವರರ ದಿನದರ್ಶಿಕೆಯನ್ನ ನನ್ನ ಕೈಯಿಂದ ಬಿಡುಗಡೆ ಮಾಡುತ್ತಿರುವುದು ನನ್ನ ಅದೃಷ್ಟವೆಂದು ಭಾವಿಸಿರುವೆನು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ರಾಜಶೇಖರ ಶೆಟ್ಕಾರ, ಕಾರ್ಯದರ್ಶಿ ರೇಕುಳಗಿ ಸುಭಾಷ್ ಹಾಗೂ ಅಕ್ಕನ ಬಳಗ ಪದಾಧಿಕಾರಿಗಳು, ಸಮಾಜದ ಮುಖಂಡರು, ಶರಣ ಶರಣೆಯರು ಉಪಸ್ಥಿತರಿದ್ದರು.
