ಬನ್ನಂಜೆಯಂತವರು ಪುರಾಣವನ್ನು ಇತಿಹಾಸವೆಂದು, ಇತಿಹಾಸವನ್ನು ಪುರಾಣವೆನ್ನುವ ಚಟ ಬಿಡಬೇಕು.
ಬೆಂಗಳೂರು

ಸಂಘ ಪರಿವಾರದ ಚಿಂತಕಿ, ವಚನ ದರ್ಶನ ತಂಡದ ವೀಣಾ ಬನ್ನಂಜೆ ಅವರು ಲಿಂಗಾಯತ ಧರ್ಮದ ಬಗ್ಗೆ ಆಗಾಗ ಉಪನ್ಯಾಸ ನೀಡುತ್ತಾ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕುತ್ತಾರೆ.
ಶ್ರೀ ರಾಮ, ಕೃಷ್ಣರನ್ನು, ಅವರುಗಳಿಗೆ ಸಂಬಂಧಿಸಿದ ಪುರಾಣಗಳನ್ನು ಭಕ್ತಿಯಿಂದ ಇತಿಹಾಸವೆಂದು ಒಪ್ಪಿಕೊಳ್ಳುವ ಇವರು ಶರಣರ ಇತಿಹಾಸದ ಬೇರುಗಳನ್ನು ಕೀಳುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಪೇಜಾವರ ಶ್ರೀಗಳಂತೆ ಇವರೂ ವಚನಗಳು ವೇದ, ಉಪನಿಷತ್ತುಗಳ ಸರಳ ಅನುವಾದ, ಲಿಂಗಾಯತರೆಲ್ಲ ಸನಾತನಿ ಹಿಂದೂಗಳ ಭಾಗವೆಂದು ವಾದಿಸುತ್ತಾರೆ.
ಸಾಮಾನ್ಯವಾಗಿ ತಮ್ಮ ಬಳಗದ ಒಳಗೆಯೇ ಮಾತಾಡಿಕೊಳ್ಳುವ ಇವರನ್ನು ಇಷ್ಟು ದಿನ ಶರಣ ಸಮುದಾಯದಿಂದ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಅವರ ಹೊಸ ವಿಡಿಯೋಗೆ ದೊಡ್ಡ ಪ್ರತಿಕ್ರಿಯೆ ಬಂದಿದೆ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ಅವರಿಂದ.
ಲಿಂಗಾಯತದ ಅಸ್ಮಿತೆಯ ಆಧಾರ ಸ್ತಂಭವಾದ ಅನುಭವ ಮಂಟಪದ ಬುಡಕ್ಕೆ ಈ ಬಾರಿ ಬನ್ನಂಜೆ ಕೈ ಹಾಕಿರುವುದು ಕೆರಳಿಸುವಂತಹ ಪ್ರಚೋದನೆ. ದೀರ್ಘ ನಿದ್ದೆಯಿಂದ ಏಳುತ್ತಿರುವ ಲಿಂಗಾಯತರು ಇಂತಹ ಯಾವುದೇ ಚೇಷ್ಟೆಗಳನ್ನು ಸಹಿಸುವ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.
ಲಿಂಗಾಯತದ ಅಸ್ಮಿತೆಯ ಆಧಾರ ಸ್ತಂಭವಾದ ಅನುಭವ ಮಂಟಪದ ಬುಡಕ್ಕೆ ಈ ಬಾರಿ ಬನ್ನಂಜೆ ಕೈ ಹಾಕಿರುವುದು ಕೆರಳಿಸುವಂತಹ ಪ್ರಚೋದನೆ.
ತಮ್ಮ ಹೊಸ ವಿಡಿಯೋದಲ್ಲಿ ಬನ್ನಂಜೆ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎನ್ನುತ್ತಾರೆ. ಅವರ ಪ್ರಕಾರ 12ನೇ ಶತಮಾನದ ಆಕರಗಳಾದ ಹರಿಹರನ ರಗಳೆ, ವಚನಗಳಲ್ಲಿ ಅನುಭವ ಮಂಟಪದ ಹೆಸರು, ಕಲ್ಪನೆ ಕಾಣಿಸುವುದಿಲ್ಲ. ನಂತರದ ಶತಮಾನಗಳಲ್ಲಿ ಬಂದ ಶೂನ್ಯ ಸಂಪಾದನೆಗಳಿಂದ ಈ ಕಲ್ಪನೆ ಶುರುವಾಯಿತು ಎನ್ನುತ್ತಾರೆ.
ವಚನ TV ಜತೆ ಮಾತನಾಡುತ್ತ ಜಾಮದಾರ್ 12ನೇ ಶತಮಾನದ ಆಕರಗಳಾದ ಹರಿಹರನ ರಗಳೆ, ಬಸವ ಪುರಾಣಗಳಲ್ಲಿ ಅನುಭವ ಮಂಟಪದ ಕಲ್ಪನೆ ಎಲ್ಲೆಲ್ಲಿ, ಯಾವ ಯಾವ ಅಧ್ಯಾಯಗಳಲ್ಲಿ, ಯಾವ ಯಾವ ಪುಟಗಳಲ್ಲಿ ಬರುತ್ತದೆ ಎಂದು ದಾಖಲೆ ಸಹಿತ ತೋರಿಸಿದ್ದಾರೆ. ಹಾಗೆಯೆ ಯಾರ ಯಾರ ಎಷ್ಟು ವಚನಗಳು ಅನುಭವ ಮಂಟಪವನ್ನು ಯಾವ ರೀತಿ ಗ್ರಹಿಸಿವೆ ಎನ್ನುವುದನ್ನೂ ವಿವರಿಸಿದ್ದಾರೆ.
ಹರಿಹರನ ರಗಳೆ, ಬಸವ ಪುರಾಣಗಳಲ್ಲಿ ಅನುಭವ ಮಂಟಪದ ಕಲ್ಪನೆ ಎಲ್ಲೆಲ್ಲಿ, ಯಾವ ಯಾವ ಅಧ್ಯಾಯಗಳಲ್ಲಿ, ಯಾವ ಯಾವ ಪುಟಗಳಲ್ಲಿ ಬರುತ್ತದೆ ಎಂದು ತೋರಿಸಿದ್ದಾರೆ.
ಈ ಎಲ್ಲಾ ಆಕರಗಳಲ್ಲಿ ‘ಅನುಭವ ಮಂಟಪ’ವೂ ಸೇರಿದಂತೆ ಬೇರೆ ಬೇರೆ ಹೆಸರುಗಳಿಂದ 12ನೇ ಶತಮಾನದ ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣರ ಚಿಂತನ ಗೋಷ್ಠಿಗಳ ಉಲ್ಲೇಖವಿದೆ, ವಿವರಣೆಯಿದೆ.
ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ಅನುಭವ ಮಂಟಪವನ್ನು ಪ್ರಜಾಪ್ರಭುತ್ವದ ಉಗಮ ಸ್ಥಳ ಎಂದು ಕರೆದಿದ್ದು ಸಂಘ ಪರಿವಾರದ ಹೊಟ್ಟೆ ಉರಿಸಿದೆ. ಒಂದು ವರ್ಷದ ಹಿಂದೆ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆಯಾಗಿದ್ದು ಈ ಹೊಟ್ಟೆ ಉರಿಯನ್ನು ಎರಡು ಪಟ್ಟು ಮೂರು ಪಟ್ಟು ಹೆಚ್ಚಿಸಿದೆ, ಎನ್ನುತ್ತಾರೆ ಜಾಮದಾರ್.
ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆಯಾಗಿದ್ದು ಈ ಹೊಟ್ಟೆ ಉರಿಯನ್ನು ಎರಡು ಪಟ್ಟು ಮೂರು ಪಟ್ಟು ಹೆಚ್ಚಿಸಿದೆ.
ಈ ಸಹಿಸಲಾಗದ ಹೊಟ್ಟೆ ನೋವಿನಿಂದಲೇ ಬನ್ನಂಜೆಯಂತವರು ಅನುಭವ ಮಂಟಪವಿರಲೇ ಇಲ್ಲ, ಅದಕ್ಕಿಂತ ಮುಂಚೆಯೇ ಎಲ್ಲೆಲ್ಲೋ ಪ್ರಜಾಪ್ರಭುತ್ವದ ಕಲ್ಪನೆಯಿತ್ತು ಎಂದು ಹೇಳಿಕೊಂಡು ತಿರುಗಾಡುತ್ತಿರುವುದು.
ಸಂಘ ಪರಿವಾರಕ್ಕೆ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರಲ್ಲಿ ಯಾರನ್ನಾದರೂ ಒಬ್ಬರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದ್ದರೆ ಸಮಾಧಾನವಾಗುತ್ತಿತ್ತೇನೋ ಎಂಬ ಪ್ರಶ್ನೆಯನ್ನೂ ಜಾಮದಾರ್ ಎತ್ತುತ್ತಾರೆ.
ಜಾಮದಾರ್ ಹೇಳುವಂತೆ ಎಂಟು ದಶಕಗಳ ಹಿಂದೆ ಅನುಭವ ಮಂಟಪದ ಬಗ್ಗೆ ಇದೇ ರೀತಿ ವಾದ ವಿವಾದ ನಡೆದಿತ್ತು. ಅನುಭವ ಮಂಟಪವಿರಲೇ ಇಲ್ಲ ಎಂದು ಕಪಟರಾಳ ಕೃಷ್ಣರಾವ್ ಹೇಳಿದಾಗ ಅದಕ್ಕೆ ತಕ್ಕ ಉತ್ತರವನ್ನು ಕ್ರೈಸ್ತ ಪಾದ್ರಿಯಾಗಿದ್ದ ಉತ್ತಂಗಿ ಚನ್ನಪ್ಪ ಕೊಟ್ಟಿದ್ದರು.
ಹರಿಹರನ ರಗಳೆ, ಬಸವ ಪುರಾಣಗಳನ್ನು ಸರಿಯಾಗಿ ಓದದೇ ಕೃಷ್ಣರಾವ್ ವಾದ ಮಾಡಲು ಹೋಗಿ ತೆಪ್ಪಗಾಗಿದ್ದರು. ಈಗ ಬನ್ನಂಜೆ ಕೂಡ ಸರಿಯಾಗಿ ಅಧ್ಯಯನ ಮಾಡದೇ ಅದೇ ವಾದವನ್ನು ಮಾಡುತ್ತಾ, ಅದೇ ತಪ್ಪನ್ನೇ ಮಾಡಿದ್ದಾರೆ.
ಬನ್ನಂಜೆ ಕೂಡ ಸರಿಯಾಗಿ ಅಧ್ಯಯನ ಮಾಡದೇ ಅದೇ ವಾದವನ್ನು ಮಾಡುತ್ತಾ, ಅದೇ ತಪ್ಪನ್ನೇ ಮಾಡಿದ್ದಾರೆ.
1930ರ ದಶಕದಲ್ಲಿ ಇಷ್ಟೊಂದು ವಚನಗಳು ಶೋಧನೆಯಾಗಿರಲಿಲ್ಲ. ಲಿಂಗಾಯತರಲ್ಲಿ ವಿದ್ಯಾವಂತರೂ ಕೆಲವೇ ಜನ. ಕೃಷ್ಣರಾವ್ ಅವರಿಗೆ ಉತ್ತರ ನೀಡಲು ಲಿಂಗಾಯತ ಸಮಾಜ, ಮಠಗಳು ತಿಣುಕಾಡಬೇಕಾಯಿತು.
ಆದರೆ ಈಗ ಸಾವಿರಾರು ವಚನಗಳು ಪ್ರಕಟವಾಗಿವೆ. ಲಿಂಗಾಯತ ಸಮಾಜವೂ ಮೊದಲಿನಂತಿಲ್ಲ. ವಚನ ದರ್ಶನ, ಶರಣರ ಶಕ್ತಿಗಳಂತಹ ಹತಾಶೆಯ ಪ್ರಯತ್ನಗಳಿಗೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಶರಣ ಸಮಾಜದ ಸಾಮರ್ಥ್ಯದ ಸುಳಿವಿದೆ, ಭವಿಷ್ಯದ ದಿಕ್ಸೂಚಿಯಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ: ಬನ್ನಂಜೆ 12ನೇ ಶತಮಾನದಲ್ಲಿ ಅನುಭವ ಮಂಟಪದಂತಹ ಯಾವ ಭೌತಿಕ ವ್ಯವಸ್ಥೆಯೂ ಇರಲಿಲ್ಲ, ಯಾವ ಕಟ್ಟಡವೂ ಇರಲಿಲ್ಲ ಎನ್ನುತ್ತಾರೆ.
ಇದರಲ್ಲಿ ಮೊದಲನೆಯ ‘ಭೌತಿಕ ವ್ಯವಸ್ಥೆ’ ಇರಲಿಲ್ಲ ಎನ್ನುವ ವಾದವನ್ನು ದಾಖಲೆ ತೋರಿಸಿ ಕಸಕ್ಕೆ ಹಾಕಬಹುದು. ಅನುಭವ ಮಂಟಪದ ಯಾವ ಕಟ್ಟಡವೂ ಇರಲಿಲ್ಲ ಎನ್ನುವುದೂ ಹಳೆಯ ಮಾತು. ಬಸವಣ್ಣನವರ ಮಹಾಮನೆಯೇ ಅನುಭವ ಮಂಟಪದ ವೇದಿಕೆಯಾಗಿತ್ತು ಅನ್ನುತ್ತಾರೆ ಜಾಮದಾರ್.
ದಶಕಗಳ ಹಿಂದೆಯೇ ಎಂ.ಎಂ. ಕಲ್ಬುರ್ಗಿಯವರು ಅನುಭವ ಮಂಟಪ ಮುಖ್ಯವಾಗಿ ಒಂದು ಬೌದ್ಧಿಕ ವ್ಯವಸ್ಥೆಯಾಗಿತ್ತು, ಶರಣರು ಸೇರಿ ಚಿಂತನೆ ನಡೆಸಿದ ಸ್ಥಳಗಳೆಲ್ಲಾ ಅನುಭವ ಮಂಟಪದ ವೇದಿಕೆಗಳಾಗುತ್ತಿದ್ದವು ಎಂದು ಬರೆದಿದ್ದಾರೆ.
ಅನುಭವ ಮಂಟಪದ ಯಾವುದೊ ಕಾಲದ ಇಟ್ಟಿಗೆ, ಗಾರೆಯ ಕಟ್ಟಡವಾಗಿತ್ತೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಅದರ ಮಹತ್ವವಿರುವುದು ಬಸವಾದಿ ಶರಣರು ರೂಪಿಸಿದ ಮುಕ್ತ ಚರ್ಚೆಯ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮತ್ತು ಅದು ಬಿಂಬಿಸುವ ಸಾರ್ವತ್ರಿಕ ಆದರ್ಶವಾಗಿ.
ಇದೊಂದು ಐತಿಹಾಸಿಕ ಸತ್ಯ. ಬ್ರಾಹ್ಮಣ್ಯದಲ್ಲಿ ಮುಳುಗಿ ಹೋಗಿರುವ ಬನ್ನಂಜೆಯವರಂತಹ ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಮಾತ್ರ ಇದನ್ನು ಅಲ್ಲಗೆಳೆಯಲು ಸಾದ್ಯ.
ಬ್ರಾಹ್ಮಣ್ಯದಲ್ಲಿ ಮುಳುಗಿ ಹೋಗಿರುವ ಬನ್ನಂಜೆಯವರಂತಹ ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಮಾತ್ರ ಇದನ್ನು ಅಲ್ಲಗೆಳೆಯಲು ಸಾದ್ಯ.
ಜಾಮದಾರ್ ಹೇಳುವಂತೆ ಬನ್ನಂಜೆಯಂತವರು ಪುರಾಣವನ್ನು ಇತಿಹಾಸವೆಂದು, ಇತಿಹಾಸವನ್ನು ಪುರಾಣವೆನ್ನುವ ಚಟ ಬಿಡಬೇಕು.
ಪ್ರತಿಕ್ರಿಯೆ
ಕ್ರಿಯೆ
ಶರಣ ಸಂಸ್ಕೃತಿಯನ್ನು ಪಟ್ಟಭದ್ರ ಶಕ್ತಿಗಳು ಕಾಲನುಕಾಲದಿಂದ ನಾಶಮಾಡುವ ಹುನ್ನಾರ ಮಾಡುತ್ತಲೇ ಬಂದಿವೆ. ಶರಣರು ಉಗ್ರ ಗಾಮಿಗಳು ಆದಾಗ ನಾಶಮಾಡುವ ಶಕ್ತಿಗಳು ನಾಶ ಆಗುತ್ತವೆ.
ಈಕೆಗೆ ಹೊಟ್ಟೆ ನೋವೆಂದಾಗ ಗಾಬರಿಯಾಯ್ತು ಕೊನೆಗೆ ಸ್ನೇಹಿತ ನಗುತ್ತಾ ಹೇಳಿದ… ಅದಕ್ಕಲ್ಲಣ್ಣಾ… ಹೊಟ್ಟೆಯಲ್ಲಿ ಬಸವನ ಹುಳ ಹರಿದಾಡುತ್ತಿರುವ ಕಾರಣದಿಂದ! ನನಗೋ ತಡೆಯಲಾಗದ ನಗೆ ಉಕ್ಕುಕ್ಕಿ ಬರುತಿತ್ತು!
👍👏
ಜಾಮದಾರ್ ಸರ್ ಅವರು ವೀಣಾ ಬನ್ನಂಜೆಯವರ
ಅಸಹಿಷ್ಣುತೆ ಮಾತುಗಳಿಗೆ ಸರಿಯಾದ ಚಾಟಿ ಏಟು
ಬೀಸಿದ್ದಾರೆ. ಜಾಮದಾರ್ ಮಾತುಗಳಲ್ಲಿ ಇತಿಹಾಸ ಇದೆ,
ಆಧಾರ್ ಇದೆ, ಸ್ಪಷ್ಟತೆ ಇದೆ. ವಚನ ಟಿ ವಿ ಯೊಂದಿಗೆ
ಉತ್ತಮ ಸಂರ್ದಶನ ನೀಡಿದ್ದಾರೆ.
What ur r given justifications are welcome settled matter and have done a wonderful task sir
ಇದು ಶರಣರ ಬಸವಣ್ಣನವರ ಅಸ್ಮಿತೆಯನ್ನು ಅಳಿಸುವ ಪ್ರಯತ್ನ , ಇದು ಸಂಘ ಪರಿವಾರದ ವ್ಯವಸ್ಥಿತವಾದ ಷಡ್ಯಂತ್ರದ ಭಾಗ, ಬಸವಣ್ಣನವರ ಶರಣರ ವಿಚಾರ ಹೆಚ್ಚು ಪ್ರಸಾರವಾದರೆ ಇವರ ಕೋಮುವಾದದ ದ್ವೇಷದ ಅಜೆಂಡಾಗೆ ಕರ್ನಾಟಕ ಸ್ಪಂದಿಸದೇ ಹೋದರೇ ಹೇಗೆ ಎನ್ನುವುದು ಆತಂಕಕ್ಜೀಡು ಮಾಡಿದೆ, ಅವರ ತತ್ವದಲ್ಲಿ ಏನೂ ಸತ್ವ ಇಲ್ಲಆದರೆ ನಮ್ಮ ಬಸವ ತತ್ವದ ಸಾಹಿತ್ಯ, ವಿಚಾರ, ಪ್ರಚಾರ ನೋಡಿ ಗಾಬರಿಯಾಗಿದ್ದಾರೆ .
ಬಹುಶಃ ವೀಣಾ ಮೇಡಂ ರಾಜಕೀಯ ಸೇರುವ ನಿರೀಕ್ಷೆ ಇದೆ, ಇಲ್ಲಾ ವಯಸ್ಸಾಗಿ ಬುದ್ಧಿ ಭ್ರಮೆ ಯಾಗಿರಬಹುದು , ಕಾಲ ಬದಲಾಗಿದೆ ಮೇಡಂ ಹುಷಾರು ಹೆಬ್ಬೆಟ್ಟಿನ ಕಾಲಹೋಗಿದೆ,ನಿಮ್ಮ ವೀಣೆಯ ತಂತಿ ಹರಿದಿರಬಹುದು ಸರಿಯಾಗಿ ರಿಪೇರಿ ಮಾಡಿಸಿಕ್ಕೊಳ್ಳಿ, ಅದೂ ನಿಮಗೆ ಒಳ್ಳೆಯದು.
Did you also notice that this Ugadi, people were sending some new wish – “Vishwavasu Samvastvar”? I was getting messages from people who are far from understanding their culture and traditions. Clearly this made me wonder how the social fabric and construct based on nature’s principles are changed and destroyed slowly. People would barely pay attention to such things but the vengeful and vicious Sanghis are at it with complete focus.
ವೀಣೆಯ ಬನ್ನಂಜೆಯವರು ಪ್ರಚಾರದ ಗೀಳಿಗೆ ಬಿದ್ದಿರಬಹುದು ಅನಿಸುತ್ತದೆ. ಸಮಯ ಮಾಡಿಕೊಂಡು ವಚನಗಳನ್ನ ಅದ್ಯಯನ ಮಾಡಲಿ ವ್ಯರ್ಥವಾದ ವಿಷಯಗಳನ್ನ ಅಲ್ಲಿ ಇಲ್ಲಿ ಹೇಳಿಕೊಂಡು ತಿರುಗಾಡುವ ಬದಲು ಶರಣ ಚಿಂತನೆ ಮಾಡಲಿ ಮೋಕ್ಷನಾದರೂ ಸಿಗುತ್ತದೆ
ಇಂಥವರೆಲ್ಲ ಕ್ಯಾನ್ಸರ್ ಗೆಡ್ಡಯ ತರಹ ಕತ್ತರಿಸಿದಂತೆಲ್ಲ ಬೆಳೆಯುತ್ತಲೇ ಇರುತ್ತವೆ.
ಕೊನೆಗೊಂದು ದಿನ ಸರ್ವನಾಶ ಆಗುತ್ತವೆ.
ಸತ್ಯ ಯಾವತ್ತಿದ್ದರೂ ಸತ್ಯವೇ ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ಬಸವಾದಿ ಪ್ರಮಥರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರು ಬೆಳಗುವ ಸೂರ್ಯನಿಗೆ ಉಗುಳಿದ ಹಾಗೆ.
ಇಂತವರಿಗೆಲ್ಲ ಎಂದೂ ಉಳಿಗಾಲವಿಲ್ಲ.
ಇವೆಲ್ಲ ತರಗಲೆಯಂತೆ ಹಾರಿ ಹೋಗುವ ಕಸವಿದ್ದಂತೆ.
ಗುಡಿಸ್ತಾ ಇರಬೇಕು ಬೀಸಾಕುತ್ತೀರಬೇಕು.
ಶರಣ ಜಾಮದಾರ ಅವರ ಸ್ಪಷ್ಟನೆಗೆ ಜಯವಾಗಲಿ. ಬಸವ ತತ್ವಕ್ಕೆ ಜಯವಾಗಲಿ
This is chicanery at its best. She is trying to fool people by her cunning niceties by raising doubt in people’s minds. For a person to whom mythology is history she is trying to convert the history of the vachana movement into a myth. In the vachana movement, what is more important than a physical space, was its attempt at social awakening against the brahminical caste and varna system. These Hindutvavadis want to discredit the Basava led movement with falsification like they did with Babri Masjid with thier faith based argument on Rama’s birth place. Change history by destroying a structure purely for political gains. The best answer for her is a vachana of Basava itself ‘Sthavarakke Alivuntu Jangamakke Alivilla’. Whether mantapa physically existed or not, the movement existed and continues with its relevance. Modi glorifying Basava’s Anubhava Mantapa (like glorifying Gandhi without any conviction) was to win lingayats votes in Karnataka. These hypocrisies have to be understood and exposed as ably done by Shri Jamadhar.
ಬನಂಜೆ ವೀಣಾರವರ ಬಗ್ಗೆ ಜಾಮದಾರರು ಆಧಾರಸಹಿತವಾಗಿ ದಾಖಲೆಗಳನ್ನು ಒದಗಿಸಿರುತ್ತಾರೆ. ಬನಂಜೆಯವರು ಪಾಠ ಕಲಿಯಲಿ.
ಬನ್ನಂಜೆ ಮೇಡಮ್ ಈ ಹಿಂದೆ ( ಬಹುಶ ಕೊಪ್ಪಳ ಜಾತ್ರೆ ಭಾಷಣದಲ್ಲಿ ) ಈ ಕೆಳಕಂಡಂತೆ ಹೇಳಿದ್ದು ಜ್ಞಾಪಕ ಇದೆ .
ಶರಣ ಚಳುವಳಿ ಕಾಲನಂತದಲ್ಲಿ ಉಳಿಯದಿರಲು ಕಾರಣ ನೀಡುತ್ತಾ ಅದು ಮುಂದುವರೆಯಲು ಸಾಧ್ಯ ಆಗದೆ ಇರಲು ಇನ್ನೂ ಕೆಲವು ವೈಚಾರಿಕ ಕ್ರಾಂತಿಗಳು ಜನ ಒಪ್ಪದೇ ಸನಾತನ ಧರ್ಮದಲ್ಲಿ ನಂಬಿಕೆ ಇದ್ದು ತಿರಸ್ಕರಿಸಿದರು.
ಇದನ್ನೊಮ್ಮೆ ಪರಿಶೀಲಿಸಿದರೆ ನನ್ನ ನೆನಪು ಸರಿಯೋ ಎಂದು ಖಾತ್ರಿ ಆಗುತ್ತದೆ .