ಗುಳೇದಗುಡ್ಡ
(ಹಿಂದುತ್ವದ ಕಪಿಮುಷ್ಟಿಯಿಂದ ಲಿಂಗಾಯತ ಯುವಕರನ್ನು ರಕ್ಷಿಸಿಕೊಳ್ಳಲು, ಶರಣ ಪರಂಪರೆಯ ಮೇಲಿನ ಸಾಂಸ್ಕೃತಿಕ ಆಕ್ರಮಣ ಪ್ರತಿರೋಧಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹತ್ವದ ಸಭೆ ಜನವರಿ 17ರಂದು ಧಾರವಾಡದಲ್ಲಿ ನಡೆಯಲಿದೆ.
ಸಮಾಜದ ಸಮಸ್ಯೆಗಳನ್ನು ಚರ್ಚಿಸಲು ಸೇರುವ ಪೂಜ್ಯರಿಗೆ ಶರಣ ತತ್ವ ಚಿಂತಕ ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ ಒಂದು ಮನವಿ ಸಲ್ಲಿಸಿದ್ದಾರೆ.)
ಪೂಜ್ಯ ಸ್ವಾಮಿಗಳವರಲ್ಲಿ ಅನಂತ ಶರಣು ಶರಣಾರ್ಥಿಗಳು …
೧. ಇಂದು ಮುಖ್ಯವಾಗಿ ಲಿಂಗಾಯತ ಮಠದ ಸ್ವಾಮಿಗಳು, ತಮ್ಮ ಮುಂದಿನ ಉತ್ತರಾಧಿಕಾರಿಗಳನ್ನಾಗಿ ಜಾತಿ ಜಂಗಮರನ್ನೇ ಆಯ್ದುಕೊಳ್ಳುವುದನ್ನು ಬಿಡಬೇಕು.
೫. ಸಾಹಿತಿಗಳು, ಪತ್ರಕರ್ತರು, ಪ್ರಚಾರಕರು, ಪೀಠದ ಪರಮ ಭಕ್ತರು ಎನಿಸಿಕೊಳ್ಳುವವರು ಕೇವಲ ಒಂದು ಹಾರ ಮತ್ತು ಶಾಲಿಗಾಗಿ (ಸನ್ಮಾನ ಎಂಬ ಹೆಸರಿನಲ್ಲಿ) ತಮ್ಮನ್ನು ತಾವು ಮಾರಿಕೊಂಡು ಸತ್ಯವನ್ನು ಬಿಟ್ಟು, ಕಾಲ್ಪನಿಕ ಇತಿಹಾಸವನ್ನು ಸೃಷ್ಟಿಸುವ ಕೆಲಸ ಮಾಡಬಾರದು.
೨. ಭಕ್ತ ವರ್ಗದಿಂದ ಬಂದ ಮಠಾಧಿಪತಿಗಳು ತಮ್ಮ ಪೂರ್ವಾಶ್ರಮದ ಸಮಾಜಕ್ಕೆ (ಜಾತಿಗೆ) ಅಂಟಿಕೊಳ್ಳಬಾರದು.
೩. ಲಿಂಗಾಯತ ಮಠಾಧೀಶರು, ಆಯಾ ಮಠಗಳ ಭಕ್ತರು, ಧರ್ಮಗುರು ಬಸವಣ್ಣನವರಿಗೆ ಮೊದಲ ಸ್ಥಾನ ನೀಡಬೇಕೇ ವಿನಃ ಜಾತಿ ಮತ್ತು ಕಾಯಕ ಮುಂದೆ ಮಾಡಿಕೊಂಡು, ಅವರ ಹೆಸರಿನಲ್ಲಿಯೇ ಕರ್ತೃ ಗದ್ದುಗೆಗಳನ್ನು ಪೂಜಿಸುತ್ತಾ, ಅರ್ಚಿಸುತ್ತಾ ಕೂಡ್ರಬಾರದು.
೪. ತಾವು (ಪೀಠಾಧಿಕಾರಿಗಳಾಗಲಿ, ಭಕ್ತವರ್ಗದವರಾಗಲಿ) ಇತರರಿಗಿಂತ ಶ್ರೇಷ್ಠರು ಹಾಗು ಪೂರ್ವ ಪರಂಪರೆಯವರೆಂಬ ವ್ಯಸನಕ್ಕೆ ಕಟ್ಟುಬಿದ್ದು ಸುಳ್ಳು ಮತ್ತು ನಿರಾಧಾರವಾದ ಪುರಾಣಗಳನ್ನು ಬರೆಯಿಸುವುದನ್ನು ಬಿಡಬೇಕು.
೬. ನಮಗೆ ಹರ್ಡೇಕರ ಮಂಜಪ್ಪನವರು, ಫ. ಗು. ಹಳಕಟ್ಟಿಯವರು, ಉತ್ತಂಗಿ ಚೆನ್ನಪ್ಪನವರು ಮಾದರಿಯಾಗಬೇಕು.
೭. ಮನೆ, ಮಠಗಳಲ್ಲಿ ವಚನ ಪಠಣ, ಗಾಯನ, ಅರ್ಥೈಸುವಿಕೆ ನಿರಂತರ ನಡೆಯುವಂತೆ ನೋಡಿಕೊಳ್ಳಬೇಕು.
೮. ಲಿಂಗಾಯತ ಧಾರ್ಮಿಕ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಚಿಕ್ಕವರನ್ನು, ಯುವಕರನ್ನು ಕರೆದೊಯ್ಯಬೇಕು.
೯. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಕುರಿತು ನಮ್ಮ ಮಕ್ಕಳಿಗೆ ಮತ್ತು ಮನೆಯ ಸದಸ್ಯರಿಗೆ ಸಾಧ್ಯವಾದಷ್ಟು ತಿಳಿಸಬೇಕು.
೧೦. ಇತರ ಧರ್ಮೀಯರನ್ನು ಅವಮಾನಿಸದೆ, ಸಾದ್ಯವಾದರೆ ಅವರಿಗೆ ಬಸವ (ಲಿಂಗಾಯತ) ಧರ್ಮದ ಪರಿಚಯವನ್ನು ಮಾಡಿಕೊಡುವಂತಾಗಬೇಕು.
ಈ ಮೇಲಿನ ವಿಷಯಗಳನ್ನು ವ್ಯಷ್ಟಿ ಮತ್ತು ಸಮಷ್ಟಿ ಹಂತದಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು.
-ಸಿದ್ಧಲಿಂಗಪ್ಪ ಬಸಪ್ಪ ಬರಗುಂಡಿ, ಗುಳೇದಗುಡ್ಡ
99726 90015
ಉತ್ತಮ ಸಲಹೆಗಳು ಇವುಗಳನ್ನು ಅನುಷ್ಟಾನಕ್ಕೆ
ತಂದಲ್ಲಿ ಲಿಂಗಾಯತ ಧರ್ಮದ ತಳಪಾಯ ಗಟ್ಟಿಯಾಗುವ ದಾರಿಯಲ್ಲಿ ಯಾವ ಸಂಶಯವಿಲ್ಲ.
ಧನ್ಯವಾದಗಳು ಶರಣ ಸಿದ್ದಲಿಂಗಪ್ಪಾ ಬಸಪ್ಪಾ ಬರಗುಂಡಿ
ಗುಳೇದಗುಡ್ಡ ಇವರಿಗೆ
ಸಿದ್ದಲಿಂಗಪ್ಪ ಬರಗುಂಡಿಯವರ ಸಲಹೆಗಳು ವಾಸ್ತವತೆಯಿಂದ ಕೂಡಿವೆ.ಇವುಗಳನ್ನು ಬಸವ ಪರಂಪರೆಯ ಲಿಂಗಾಯತ ಮಠಾಧೀಶರು ಕಡ್ಡಾಯವಾಗಿ ಪಾಲಿಸಬೇಕು.
ಇದರ ಜೊತೆಗೆ ನಮ್ಮ ಸಲಹೆ ಏನೆಂದರೆ…,
೧. “ಲಿಂಗಾಯತರ ಅಸ್ಮಿತೆ” ಯ ಈ ಸಭೆಯಲ್ಲಿ ಇಷ್ಟಪಟ್ಟು ಸೇರುವ ಇಷ್ಟಲಿಂಗಧಾರಿ ಸ್ವಾಮಿಗಳು ತಮ್ಮ ಮಠವು ಬಸವ ಪರಂಪರೆಯ ಸಾಂಸ್ಕೃತಿಕ ಮಠವೆಂದು ಘೋಷಿಸಿ, ತಮ್ಮ ಮಠದ ದಾಖಲೆಗಳಲ್ಲಿ ಸೇರಿಸಬೇಕು.
೨. ಈ ಸಭೆಯ ನಂತರ, ಕೆಲವು ಪ್ರಮುಖ ಸ್ವಾಮಿಗಳ ಒಂದು ನಿಯೋಗ ರಚಿಸಿ, ಈ ಸಭೆಯಲ್ಲಿ ಯಾವುದೋ ಕಾರಣದಿಂದ ಹಾಜರಾಗದೇ ಇರುವ ಇಷ್ಟಲಿಂಗಧಾರಿ ವೀರಶೈವ /ಲಿಂಗಾಯತ ಸ್ವಾಮಿಗಳ, ಗುರುಗಳ ಮಠಗಳಿಗೆ ತೆರಳಿ, ಅವರು ಮತ್ತು ಅವರ ಆ ಮಠವು ಯಾವ ಪರಂಪರೆಗೆ ಸೇರಿದ್ದು ಎನ್ನುವುದನ್ನು ಅವರಿಂದಲೇ ತಿಳಿದುಕೊಂಡು ದಾಖಲಿಸುವ ಪ್ರಮುಖ ಕೆಲಸವಾಗಬೇಕು.
ಇದು ಮುಂದಿನ ದಿನಗಳಲ್ಲಿ “ಧರ್ಮ ಸಂಘಟನೆಯ ಕಾರ್ಯ” ಕ್ಕೆ ಬಹು ದೊಡ್ಡ ಶಕ್ತಿ ಯಾಗಬಹುದು.
ನಂದಿಕುಮಾರ ಪಾಟೀಲ ವಕೀಲರು ಮತ್ತು ಅಧ್ಯಕ್ಷರು ರಾಷ್ಟ್ರೀಯ ಬಸವ ದಳ, ಚಿಂಚೋಳಿ ೯೯೭೨೩೭೭೮೨೬
ಉತ್ತಮ ಹಾಗೂ ವೈಚಾರಿಕ ಹಾಗೂ ನೈಜ ಬಸವತತ್ವ ಆಲೋಚನಾ ಸಲಹೆಗಳು ಇದನ್ನು ಒಪ್ಪಿ ಅಪ್ಪುವ ಹೃದಯ ವೈಶಾಲ್ಯತೆ ಮನಸುಗಳು ಉದಯವಾಗಿ ಬೇಕು..,.
ಉತ್ತಮ ಸಲಹೆಗಳು ಇವುಗಳನ್ನು ಪಾಲಿಸಿದರೆ ಜಾತ್ಯತೀತ ಮಠಗಳು ಆಗುತ್ತವೆ ಮತ್ತು ಲಿಂಗಾಯತ ಧರ್ಮಕ್ಕೆ ಅರ್ಥ ಬರುತ್ತದೆ.
ಲಿಂಗಾಯತ ಧರ್ಮದ ನಿಜಾಚರಣೆಯಲ್ಲಿರುವ ಬಹು ಸಂಖ್ಯಾತ ಬಸವಾಭಿಮಾನಿಗಳ ಮನದಾಳದ ಭಾವನೆಗಳನ್ನು ಹತ್ತು ಅಂಶಗಳಲ್ಲಿ ಅತ್ಯಂತ ಸಮರ್ಪಕವಾಗಿ ಪ್ರಸ್ತುತಪಡಿಸಿದ್ದಾರೆ.
ಬರಗುಂಡಿ ಅಣ್ಣನವರಿಗೆ ಶರಣು ಶರಣಾರ್ಥಿಗಳು.
ಶಿವಾನಂದ ನರಕಲದಿನ್ನಿ
🙏👌👍
ಅತ್ಯತ್ತಮವಾದ ಸಲಹೆಗಳು
ಅತ್ಯುತ್ತಮವಾದ ಸಲಹೆಗಳು
ಮೊದಲು ಲಿಂಗಾಯತ ಎಂದರೇನು ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗಬೇಕು. ವೀರಶೈವ-ಲಿಂಗಾಯತ ಗೊಂದಲ ಬಗೆಹರಿಸಬೇಕು. ಮೊನ್ನೆ ಜತ್ತಿಯವರು ಹೇಳಿದಂತೆ ಲಿಂಗಾಯತ ಎಂಬುದು ಕೇವಲ ಬದುಕಿನ ಧರ್ಮ ಎಂಬ ತಿಳುವಳಿಕೆ ಸಾಕೇ ಅಥವಾ ಅದಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಕೇ? ಇದು ನಿರ್ಧಾರ ವಾಗಬೇಕು.
ನಮ್ಮದು ಪ್ರತ್ಯೇಕ ಧರ್ಮವಾದರೆ ನಮ್ಮ ಧರ್ಮಗ್ರಂಥಗಳು ಸ್ಪಷ್ಟವಾಗಬೇಕು. ಅದು ವಚನಗಳೇ ಆದರೂ ಸಹಿತ ಅದರಲ್ಲಿಯ ಪ್ರಕ್ಷಿಪ್ತ, ಜೀವನ್ ಮುಕ್ತಿ, ಪುನರಾವರ್ತಿತ, ಗೊಂದಲಮಯ ವಚನಗಳನ್ನು ತೊಡೆದು ಹಾಕಬೇಕು. ಅದನ್ನು
ಸಂಕ್ಷಿಪ್ತವಾಗಿಸಿ ಅರ್ಥವಿವರಣೆಯೊಂದಿಗೆ ಇದೇ ಲಿಂಗಾಯತರ ಅಧಿಕೃತ ಧರ್ಮ ಗ್ರಂಥ ಎಂದು ಘೋಷಣೆ ಆಗಬೇಕು.
ಜೀವನ್ಮುಖಿ ಅಂದರೆ ಕುರಾನ್ ರೀತಿಯಲ್ಲಿ ಜನಸಾಮಾನ್ಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಲಿಂಗಾಯತ ಆಚರಣೆ ನಡಾವಳಿಗಳ ಸ್ಪಷ್ಟ ವಿವರ ನೀಡಬೇಕು. ಇಂತಹ. ಕ್ರಮಗಳಿಂದ ಲಿಂಗಾಯತ ಅಸ್ಮಿತೆ ಉಳಿಯುತ್ತದೆ. ಧನ್ಯವಾದಗಳು.
ಪಾಲಿಸಲೇಬೇಕಾದ ಸಲಹೆಗಳು.
ನಮ್ಮ ಇಂದಿನ ಯುವಕರಿಗೆ ಲಿಂಗಾಯತ ಧರ್ಮದ ಇತಿಹಾಸ ಅರಿವಿಲ್ಲದಿರುವುದು ಬಹುದೊಡ್ಡ ಕಂದಕವಾಗಿ ಮಾರ್ಪಟ್ಟಿದೆ. ಅವರಿಗೆ ಲಿಂಗಾಯತ ಧರ್ಮದ ಇತಿಹಾಸ ತಿಳಿಯುವಂತೆ ಮಾಡುವುದು ಇಂದಿನ ಅತ್ಯಂತ ತುರ್ತಿನ ಕೆಲಸಗಳಲ್ಲಿ ಅತ್ಯಂತ ಪ್ರಮುಖವಾಗಿರುವಂತದ್ದು. ಇದನ್ನು ಲಿಂಗಾಯತ ಸಮಾಜದ ಬಾಂಧವರು / ಮಠಾಧೀಶರು / ಸಂಘಟನೆಗಳು ಅರ್ಥ ಮಾಡಿಕೊಂಡು ಲಿಂಗಾಯತ ಯುವಕರನ್ನು ಸೇರಿಸಿ ಲಿಂಗಾಯತ ಧರ್ಮದ ಇತಿಹಾಸ ಮಾಲಿಕೆಯ ಕಾರ್ಯಾಗಾರ ಮಾಡುವುದು ಸೂಕ್ತವಾದ ಯೋಜನೆ.
ವಿಜಯಪುರದ J S ಪಾಟೀಲ್ ಶರಣರು ಇತಿಹಾಸದ ಸತ್ಯಗಳನ್ನು ಸಮರ್ಥವಾಗಿ ಹೆಕ್ಕಿ ತೆಗೆದು ಅವುಗಳನ್ನು ಸಮಯಕ್ಕನುಗುಣವಾಗಿ ಕ್ರಮವಾಗಿ ಜೊಡಿಸಿ ಪುರಾವೆಗಳ ಆಧಾರದಿಂದ ಕಟ್ಟಿ ಒಂದೊಳ್ಳೆ ಪಠ್ಯಕ್ರಮವನ್ನು ತಯಾರಿಸಿ ಸಮಾಜಕ್ಕೆ ತಮ್ಮ ಶಿಬಿರಗಳ ಮೂಲಕ ಹಂಚುವಲ್ಲಿ ವಿಶಿಷ್ಟವಾದ ಕೆಲಸವನ್ನು ಮಾಡುತ್ತಿದ್ದಾರೆ.
ಅವರ ತಂಡಕ್ಕೆ ಲಿಂಗಾಯತ ಸಮಾಜದ ಬಾಂಧವರು / ಮಠಾಧೀಶರು / ಸಂಘಟನೆಗಳು ಲಿಂಗಾಯತ ಯುವಕರನ್ನು ಸೇರಿಸಿ ಲಿಂಗಾಯತ ಧರ್ಮದ ಇತಿಹಾಸ ಮಾಲಿಕೆಯ ಕಾರ್ಯಾಗಾರ ಏರ್ಪಡಿಸಲು ಸೂಕ್ತ ಸಹಕಾರವನ್ನು ಕೊಡುವಂತೆ ಮಾಡಬೇಕು. ಇದರಿಂದ ಲಿಂಗಾಯತ ಧರ್ಮದ ಯುವಕರು ಲಿಂಗಾಯತ ಧರ್ಮದಿಂದ ವಿಮುಖರಾಗುವುದು ಬಹು ಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಅರಿವು ಮೂಡುತ್ತದೆ.
ಶರಣು ಶರಣಾರ್ಥಿಗಳು🙏
-ಕಿರಣ ಸರ್ ನಾಡಗೌಡರ್.
ತಾವರಗೇರಾ/ಧಾರವಾಡ
8095789701.