ಚಳ್ಳಕೆರೆ:
ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ 2026ರ ಜನವರಿ 12, 13, 14ರಂದು ಮೂರು ದಿನಗಳ ಕಾಲ ರಾಜ್ಯಮಟ್ಟದ 39ನೇ ಶರಣಮೇಳ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವಂತೆ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಡಾ. ಗಂಗಾ ಮಾತಾಜಿ ವಿನಂತಿಸಿಕೊಂಡಿದ್ದಾರೆ.
ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಾತಾಜಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಜ್ಞಾನದ ಸಂಪತ್ತನ್ನು ಸರಿಸಮಾನವಾಗಿ ಎಲ್ಲಾ ಸಮಾಜಕ್ಕೂ ಹಂಚಿದವರು.

ಸಮಾಜದಲ್ಲಿ ಅಂಧಕಾರವನ್ನು ತೊಲಗಿಸಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಅವರ ಬಸವತತ್ವದ ಪ್ರಚಾರಕಾರ್ಯ ಪ್ರತಿವರ್ಷ ಶರಣಮೇಳದ ಮೂಲಕ ಹಮ್ಮಿಕೊಳ್ಳುತ್ತಿದ್ದು ಅದರ ಪ್ರಚಾರ ಕಾರ್ಯ ಎಲ್ಲಾ ಕಡೆ ಆರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ. ವೀರೇಶಕುಮಾರ, ಬಸವರತ್ನ ಮಾತಾಜಿ, ಅಮಿಶಾನಂದ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಆರ್. ಪ್ರಸನ್ನಕುಮಾರ, ಶ್ರೀಕಂಠಪ್ಪ, ಎಂ.ಎಸ್. ತಿಪ್ಪೇಸ್ವಾಮಿ, ಓಬಳೇಶ್, ರವಿ, ತಿಪ್ಪಮ್ಮ, ಜ್ಯೋತಿ ನಾಗರಾಜು, ವೀಣಾಸುರೇಶ, ಲತಾಪ್ರಕಾಶ, ಪ್ರತಿಭಾ ಬಸವರಾಜು ಮತ್ತಿತರರು ಇದ್ದರು.
