ಬೆಂಗಳೂರು
ಅವೈಜ್ಞಾನಿಕ ಕಾಂತರಾಜ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದೆಂದು ಅಖಿಲ ಭಾರತ ವೀರಶೈವ ಮಹಾಸಭಾದ ತಿರಸ್ಕರಿಸಿದೆ.
ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಪ್ರತಿಪಾದಿಸಿ, ಮತ್ತೊಮ್ಮೆ ವೈಜ್ಞಾನಕ್ಕಾಗಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯ ಮಾಡಲು ತೀರ್ಮಾನಿಸಿದೆ.
ಜಾತಿ ಜನಗಣತಿ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನದ ವಿರುದ್ಧ ಮಹಾಸಭಾ ಕೈಗೊಂಡಿರುವ ನಿರ್ಣಯಕ್ಕೆ ರಾಜ್ಯದ ನಾಲ್ವರು ಸಚಿವರೂ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು, ಸಂಸದರು ಬೆಂಬಲ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸದಸ್ಯರಾಗಿರುವ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಮುಖ್ಯಮಂತ್ರಿಯವರ ಸಲಹೆಗಾರ ಬಿ.ಆರ್. ಪಾಟೀಲ ಪಾಲ್ಗೊಂಡಿದ್ದರು. 55ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರೆಂದು ಮಹಾಸಭಾದ ಪ್ರಕಟಣೆ ತಿಳಿಸಿದೆ.
ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಾಲ್ಗೊಂಡಿದ್ದರು.
ಕಾಂಗ್ರೆಸ್ ಶಾಸಕರಾದ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಹಂಪನಗೌಡ ಬಾದರ್ಲಿ, ಸಿ.ಎಸ್. ನಾಡಗೌಡ, ಸಂಸದ ಸಾಗರ್ ಖಂಡ್ರೆ, ಮುಖಂಡ ಅಲ್ಲಂ ವೀರಭದ್ರಪ್ಪ, ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಸೇರಿದಂತೆ ಹಲವರು ಸಭೆಯಲ್ಲಿದ್ದರು. ಸುದೀರ್ಘ ಚರ್ಚೆಯ ಬಳಿಕ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಮಹಾಸಭಾ ನಿರ್ಣಯಗಳೇನು?
ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಸರ್ವರಿಗೂ ಒಳ್ಳೆಯದನ್ನು ಬಯಸುವ ಸಮಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳಲ್ಲ. ಆದರೆ ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಮಹಾಸಭೆ ಆಗ್ರಹಿಸುತ್ತದೆ.
ರಾಜ್ಯ ಸರ್ಕಾರದ ಪರಿಗಣನೆಯಲ್ಲಿರುವ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳು, ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ವರದಿಯಾಗಿದ್ದು, ಈ ವರದಿಯು ಅವೈಜ್ಞಾನಿಕ ಮತ್ತು ಅಸಾಂವಿಧಾನಿಕವಾದುದ್ದರಿಂದ ಸ್ವೀಕಾರಕ್ಕೆ ಅರ್ಹವಲ್ಲವೆಂದು ಮಹಾಸಭೆಯು ಸ್ಪಷ್ಟವಾಗಿ ಅಭಿಪ್ರಾಯಿಸುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಕುರಿತಾದ ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕು.
ರಾಜ್ಯ ಹಿಂದುಳಿದ ವರ್ಗಗಳ (ಒ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ “ಲಿಂಗಾಯತ” ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದ್ದರಿಂದ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ “ಲಿಂಗಾಯತ” ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮಹಾಸಭಾ ಮನವಿ ಮಾಡುತ್ತದೆ.
ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಒ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕು.
ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಪ್ರಕಟಿಸಿದರು.
ದಲಿತರು ತಳವರ್ಗದವರು ಇತರೆ ಬಡವರ ಮೇಲೆ ಯಾವಾಗಲೂ ತಮ್ಮ ಅಧಿಕಾರ ದರ್ಪ ತೋರಿಸಿಕೊಂಡು ಇರಬೇಕು,, ಜನಸಂಖ್ಯೆ ಆಧಾರದ ಮೇಲೆ ಅಧಿಕಾರ ಹಂಚಿಕೆ ಆಗುವುದು ಈ ಮಹಾಸಭಾಕ್ಕೆ ಬೇಕಿಲ್ಲ,,ಕೇವಲ ಮೇಲ್ವರ್ಗದವರ ಹಿತ ಕಾಪಾಡಲು ಇರುವವರಂತೆ,,ಕೇವಲ ಓಟಿಗಾಗಿ ಮಾತ್ರ ಈ ವರ್ಗದವರು ಬೇಕು,, ಬಸವಣ್ಣನವರ ಹೆಸರಿನಲ್ಲಿ ರಾಜಕಾರಣ ಬೇಕು ಆದರೆ ಅವರ ತತ್ವಗಳು ಬೇಡ,,ಉಪಪಂಗಡಗಳ ಬಡವರಿಗೆ ಮೋಸ ಮಾಡಿ ಮನುವ್ಯಾದಿಗಳ ಚೌಕಿದಾರರು ಸಾಬೀತು ಮಾಡಿಕೊಂಡಿರಿ
Dharmakki kuttu bandaga ondagi orata madi nimma nimma pakshadalli nimma padavigalannu sampadisi….basava dharmakki kuttu bandaga eallaru kai jodosi…lingayatarannu tach maduva gundige dhirya ..madalu yarigu sadhyavagadu.
Nimma oggatttige sharanu sharanarthigalu…jai basava jai jai basava.
ಈ ವೀರಶೈವ ಮಹಾಸಭಾಕ್ಕೆ ಲಿಂಗಾಯತರ ಒಳಗಿನ ಜಾತಿ ಬೇಕು, ಎಲ್ಲರನ್ನೂ ಸೇರಿಸುವ ಲಿಂಗಾಯತ ಧರ್ಮದ ಹೋರಾಟಕ್ಕೆ ಎಲ್ರೂ ಆಗ ಬರ್ಬೇಕಾಗುತ್ತು , ಇವರೆಲ್ಲ ಪಕ್ಷ ಭೇಧ ಮರೆತು ಒಗ್ಗಟ್ಟಾಗಿರುವುದು ಇದೇ ಮೊದಲು, ಇದನ್ನು ನೋಡಿದರೆ ಖಂಡಿತ ಇನ್ನು ಮುಂದೆ ಲಿಂಗಾಯತರಿಗೆ ಒಳ್ಳೇದಾಗುತ್ತೆ, ಅಪಾಯವಿರುವುದು ಇವರ ರಾಜಕೀಯ ಸೀಟುಗಳಿಗೆ,
ಇದ್ದ ಒಬ್ಬ ಎಂಬಿಪಿ ಅವರನ್ನು ಇದೇ ಶಾಮನೂರ ಅಜ್ಜ ಬಾಯಿಗೆ ಬಂದ ಹಾಗೆ ಬೈತಿದ್ದ .
ಈ ಮಹಾಸಭಾ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಮಯದಲ್ಲಿ ಲಿಂಗಾಯತದ ಬಹುತೇಕ ಉಪಪಂಗಡಗಳು ಕೈಜೋಡಿಸಿದರು,, ಆದರೆ ಇವರು ಹಿಂದೂ ಧರ್ಮ ಒಡೆದರು ಎಂದು ಆಪಾದನೆ ಮಾಡಿಕೊಂಡು ಓಡಾಡಿದರು ಈಗ ಧರ್ಮದ ರಕ್ಷಣೆ ದಿಢೀರ್ ಆಗಿ ನೆನಪಾಗಿದೆ,,, ಇವರಿಗೆ ಲಿಂಗಾಯತ ಅನ್ನುವುದು ಜಾತಿ ಆಗಿರಬೇಕು ಧರ್ಮ ಆಗಿ ಬೇಡ,, ಇತರೆ ಉಪಪಂಗಡಗಳ ಬಡವರು ಲಿಂಗಾಯತ ಧರ್ಮದಲ್ಲಿ ಒಳಗೊಳ್ಳುವುದು ಇವರಿಗೆ ಬೇಕಿಲ್ಲ,, ಬಸವಣ್ಣ ಇವರಿಗೆ ರಾಜಕಾರಣಕ್ಕೆ ಮಾತ್ರ ಬೇಕು ಆಚರಣೆ ಮಾತ್ರ ಬೇಡಾ, ಬಹುಶಃ ಈ ತಾರತಮ್ಯದಿಂದಲೇ ಬಹುತೇಕ ಯುವಕರು ವೈದಿಕ ಸಂಘಟನೆಗಳ ಬಲೆಯಲ್ಲಿ ಸಿಲುಕಿದರು
ಮೂರನ್ನೂ ಬಿಟ್ಟ ಮೂವರೂ ಸೇರಿದ್ದಾರಲ್ಲಾ ಇವರ ಜನ್ಮಕ್ಕೆ ಬೆಂಕಿ ಹಾಕಾ….ನೀತಿ ತತ್ವ ಹೀನರು. ವಾಸ್ತವಿಕ ಜನಸಂಖ್ಯೆ ಆಧಾರಿತ ಮೀಸಲಾತಿ ಬಂದರೆ ಇವರಿಗೆ ಅಧಿಕಾರದ ಪ್ರಮಾಣ ಕಡಿಮೆ ಆಗುತ್ತದಲ್ಲಾ ಅದಕ್ಕೆ ಸೇರಿದ್ದಾರೆ.
1) ವೀರಶೈವ ಅಲ್ಪ ಧರ್ಮ ಮಾನ್ಯತೆಗೆ ಮಹಾಸಾಬದಿಂದ
ಬೇಡಿಕೆ ಕೇಂದ್ರದಿಂದ ತಿರಸ್ಕಾರ.
2) ಎದನೆಬಾರಿ ವೀರಶೈವ – ಲಿಂಗಾಯತ ಅಂತ
ಕಳಿಸಿದ ಮನವಿ. ಅದೂ ವಾಪಾಸಾಗಿದೆ.
ಕಾರಣ ವೀರಶೈವ ಪದ ಬಳಕೆ.
3) 3 ಬಾರಿ ” ಲಿಂಗಾಯತ ” ವಚನ ಸಾಹಿತ್ಯ,
ಧರ್ಮಗುರು ಬಸವಸಣ್ಣ, justice ಶ್ರೀ ನಾಗಮೋಹನ್ ದಾಸ್ ರವರ ಸಮಿತಿ ವರದಿ ಆಧಾರಿಸಿ ಕಳಿಸಿದ್ದು
ಕಾನೂನಾತ್ಮಕವಾಗಿ ಮಾನ್ಯತೆ ಸಿಗಬೇಕಿದ್ದುದು,
ವಿನಾ ಕಾರಣ pending ಇದೆ. ಇದೇ ರೀತಿ, ಎಲ್ಲಾ
ಒಗ್ಗಟ್ಟಾಗಿ ಹೋರಾಡಿದ್ರೆ ಇಂದು ಜೈನ ಧರ್ಮಕ್ಕೆ ಸಿಕ್ಕ
ರೀತ್ಯ ಲಿಂಗಾಯತ ಧರ್ಮಕ್ಕೂ ಮಾನ್ಯತೆ ಸಿಕ್ಕಿರ್ತಿತ್ತು.
ಇಲ್ಲಿ ಕೆಲ ಕಾಣದ ಕೈ – ವಾಡ ( 2 bageyaddu) ದಿಂದಾಗಿ
ಬಡ ಲಿಂಗಾಯತರಿಗೆ ಮೋಸ ಆಗಿದೆ.
ಶ್ರೀ ಶಂಕರ್ ಮಹಾದೇವ ಬಿದರಿ ಶರರಣರು,
I p s, ಶ್ರೀ s m ಜಂದಾರ್ ಶರಣರಣರು ಲಿಂಗಾಯತ ಧರ್ಮಕ್ಕೆ ಮಾಸನ್ನಯತೆ ಕೊಡಿಸಲೂ ತನು, ಮನ, ಧನ
Ad ಸಂಶೋಧನೆ ಮಾಡಿ, ಬ್ರಿಟಿಷರ ಕಾಕದಲ್ಲೇ
ಮಾನ್ಯತೆ, ಪಡೆದದ್ದು, gezeteerer ನಲ್ಲಿ ಅಂದೇ
ಮಾನ್ಯತೆ ಪಡೆದನ್ನು justice ಸಮಿತಿ ಮುಂದೆ ನಮಂಡಿಸಿ
ಸಮಾಜಕ್ಕಾಗಿ ಪ್ರಯತ್ನಿಸಿದ್ದಾರೆ ಅಂತ ಮಾಹಿತಿ.
ರಾಜಕೀಯ ಸ್ಥಾಣಮಾನ, ಅಧಿಕಾರಕ್ಕಾಗಿ,
ಬಡಿದಾ ಡದೆ, ಸಮಾಜಕ್ಕಾಗಿ * ಲಿಂಗಾಯತ *
ಸ್ವತಂತ್ರ ಧರ್ಮ ಮಾನ್ಯತೆ ಗಾಗಿ ಎಲ್ಲಾ ಒಂದಾಗಿ ಪ್ರಗತ್ನಿಸಿರಿ ಅಂತ ಕೋರಿಕೆ. ( 2a ಕೊಡಿ ಅನ್ನೋದು ಅಪ್ರಸ್ತುತ. ಕಂಡಿತಾ ಯಾರು ಕೊಡಲ್ಲ )
ಪ್ರತಿಷ್ಠೆ ಬಿಟ್ಟು ಸಮಾಜ ಕ್ಕಾಗಿ ಒಟ್ಟಾಗಿ
Pending ಇರುವ file ಅನ್ನು ಮಾನ್ಯತೆಗಾಗಿ
Move ಮಾಡಿಸಲು ಕಳಕಳಿಯ ಮನವಿ.
ಶರಣು ಶರಣಾರ್ಥಿಗಳು. 🙏