ಜಾತಿಗಣತಿಯಲ್ಲಿ ಧರ್ಮಕ್ಕೂ ಮೀಸಲಾತಿಗೂ ಸಂಬಂಧವಿಲ್ಲ
ಬೆಂಗಳೂರು
ಜಾತಿ ಜನಗಣತಿಯಲ್ಲಿ ಧರ್ಮ, ಜಾತಿ, ಮೀಸಲಾತಿಗಳ ಬಗ್ಗೆ ಬಹಳ ಪ್ರಶ್ನೆಗಳಿವೆ. ಹಿಂದುಳಿದ ವರ್ಗಗಳ ಆಯೋಗದವರು ಬಿಡುಗಡೆ ಮಾಡಿರುವ ಅರ್ಜಿ ಪತ್ರದಲ್ಲಿ ಧರ್ಮಕ್ಕೂ ಮೀಸಲಾತಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಗಿದೆ.
ಜಾತಿಗಣತಿಯ ಅರ್ಜಿಪತ್ರದ 8ನೇ ಕ್ರಮ ಸಂಖ್ಯೆ ಕಾಲಂನಲ್ಲಿ ಧರ್ಮ ದಾಖಲಾಗುತ್ತದೆ. ಅದರಲ್ಲಿರುವ 11 ಉಪ ಕ್ರಮಸಂಖ್ಯೆಗಳು:
1) ಹಿಂದೂ
2) ಇಸ್ಲಾಂ
3) ಕ್ರೈಸ್ತ
4) ಜೈನ
5) ಸಿಖ್
6) ಬೌದ್ದ
7) ಪಾರ್ಸಿ
8) ನಾಸ್ತಿಕ
9) ಗೊತ್ತಿಲ್ಲ
10) ನಿರಾಕರಿಸುತ್ತೆವೆ
11) ಇತರರು Others
ಲಿಂಗಾಯತ ಧರ್ಮೀಯರೆಲ್ಲರೂ ಕಡ್ಡಾಯವಾಗಿ ‘ಇತರರು, Others’ ಆಯ್ಕೆ ಮಾಡಿಕೊಂಡು ಅದರಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಯಬೇಕು.
ಅರ್ಜಿಯ ಮುಖ್ಯ ಕ್ರಮ 9ನೇ ಸಂಖ್ಯೆಯಲ್ಲಿ ಜಾತಿ ಬಗ್ಗೆ ಕೇಳಿದ್ದಾರೆ. ಇಲ್ಲಿ ನಿಮ್ಮ ಜಾತಿ ಬರೆಯಿರಿ. 10ನೇ ಮುಖ್ಯ ಕ್ರಮಸಂಖ್ಯೆಯಲ್ಲಿ ನಿಮ್ಮ ಉಪಜಾತಿ ಬರೆಯಿರಿ.
ಇದರಿಂದ ಮೀಸಲಾತಿಯಲ್ಲಿರುವ ನಿಮ್ಮ ಸ್ಥಾನಕ್ಕೇನೂ ಧಕ್ಕೆ ಬರುವುದಿಲ್ಲ. ಉದಾಹರಣೆಗೆ 2A ಗ್ರೂಪ್ ನಲ್ಲಿ ಹಟಗಾರ ಎಂಬ ಜಾತಿಯಿದೆ. ಆ ಜಾತಿಯವರು ಜಾತಿಗಣತಿಯಲ್ಲಿ ‘ಹಟಗಾರ’ ಎಂದು ಬರೆಸಿದರೆ ಅವರು ಅದೇ 2A ಗುಂಪಿನಲ್ಲಿ ಉಳಿಯುತ್ತಾರೆ. ಇನ್ನೂಂದು ಗುಂಪಿಗೆ ಹೋಗುವುದಿಲ್ಲ, 2A ಸೌಲಭ್ಯ ಕಳೆದುಕೊಳ್ಳುವುದಿಲ್ಲ.
ಒಟ್ಟಾರೆ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಅರ್ಜಿಪತ್ರದ ಅನ್ವಯ ಜಾತಿಗೆ ಮೀಸಲಾತಿ ಇದೆ. ಧರ್ಮಕ್ಕೆ ಮೀಸಲಾತಿ ಇಲ್ಲ. ಧರ್ಮದ ಅಂಕಣದಲ್ಲಿ ನೀವು ‘ನಾಸ್ತಿಕ’ ಅಥವಾ ‘ಗೊತ್ತಿಲ್ಲ’ ಎಂದೂ ಬರೆಸಬಹುದು. ಹಾಗೆ ಬರೆಸಿದರೂ ನಿಮಗೆ ಸದ್ಯಕ್ಕಿರುವ ಮೀಸಲಾತಿಗೆ ಧಕ್ಕೆಯಾಗುವುದಿಲ್ಲ.

ಬಣಜಿಗ ಜಾತಿ ಅಥವಾ ಉಪಜಾತಿ ಎನ್ನುವದು ತಿಳಿಸಬೇಕು