‘ವೀರಶೈವ/ಲಿಂಗಾಯತ’ ಈಗ ‘ವೀರಶೈವ ಲಿಂಗಾಯತ’ವಾಗಿ ಬದಲಾಗಿದೆ.
ಬೆಳಗಾವಿ
ಸರ್ಕಾರದಿಂದ ದೊರೆಯುವ ಜಾತಿ ಪ್ರಮಾಣಪತ್ರದಲ್ಲಿ ಮೊದಲು ‘ಹಿಂದೂ ಲಿಂಗವಂತ’ ಎಂದು ಬರೆಯುತ್ತಿದ್ದರು. ನಂತರ ಅದು ‘ವೀರಶೈವ/ಲಿಂಗಾಯತ’ ಎಂದಾಯಿತು.
ಈಗ ಕಳೆದ ಕೆಲವು ವರ್ಷಗಳಿಂದ ಕಂಪ್ಯೂಟರ್ ನಲ್ಲಿ ಬರುತ್ತಿರುವ ಜಾತಿ ಪ್ರಮಾಣಪತ್ರದಲ್ಲಿ ‘ವೀರಶೈವ ಲಿಂಗಾಯತ’ ಎಂದು ಬದಲಾಗಿದೆ.
ವೀರಶೈವ/ಲಿಂಗಾಯತ ಪದದ ಮಧ್ಯ ಇರುವ ಅಡ್ಡ ರೇಖೆ ವೀರಶೈವ ಅಥವಾ ಲಿಂಗಾಯತ ಎಂದು ಸೂಚಿಸುತ್ತದೆ. ಅಂದರೆ ಪ್ರಮಾಣಪತ್ರದಲ್ಲಿರುವ ವ್ಯಕ್ತಿಗಳು ವೀರಶೈವ ಅಥವಾ ಲಿಂಗಾಯತ ಎಂದು ಗುರುತಿಸಿಕೊಳ್ಳಲು ಅವಕಾಶವಿರುತ್ತದೆ.
ಆದರೆ ‘ವೀರಶೈವ ಲಿಂಗಾಯತ’ ಎಂದು ಬರೆದರೆ ಇದು ಎರಡೂ ಸಮುದಾಯಗಳು ಒಂದೇ ಎಂದು ಸೂಚಿಸುತ್ತದೆ. ಮುಂದೆ ನಮ್ಮ ಮಕ್ಕಳು ‘ವೀರಶೈವ ಲಿಂಗಾಯತ’ ಎಂದು ಗುರುತಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ‘ಲಿಂಗಾಯತ’ ಎನ್ನುವುದನ್ನು ಬಿಟ್ಟು ಬರೀ ‘ವೀರಶೈವ’ ಉಳಿಸಿಕೊಳ್ಳಬಹುದು.
ಇದೊಂದು ಮಹತ್ತರವಾದ ಬದಲಾವಣೆ. ಇದನ್ನು ಮಾಡಿದವರು ಯಾರು? ಸರಕಾರದ ನೀತಿ ಬದಲಾಗಿದೆಯೇ? ಅಥವಾ ಯಾವುದಾದರೂ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ?
ಶಾಲಾ ಕಾಲೇಜುಗಳು ತಹಸಶೀಲ್ದಾರ ಕೊಟ್ಟಿರುವ ಪ್ರಮಾಣಪತ್ರ ‘ವೀರಶೈವ ಲಿಂಗಾಯತ’ ಎಂದು ಇದೆ. ನಮ್ಮ ರಿಜಿಸ್ಟರ್ ನಲ್ಲಿಯೂ ‘ವೀರಶೈವ ಲಿಂಗಾಯತ’ ಎಂದು ಬರೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.
ಕೆಲವು ಮಕ್ಕಳು ತಮ್ಮ ತಂದೆಯ ಶಾಲಾ ಪ್ರಮಾಣಪತ್ರದಲ್ಲಿ ಲಿಂಗವಂತ ಅಥವಾ ಲಿಂಗಾಯತ ಎಂದು ಇರುವುದನ್ನು ತೋರಿಸಿ ಲಿಂಗಾಯತ ಅಂತ ಬರೆಸುತ್ತಿದ್ದಾರೆ. ಆದರೆ ಎಲ್ಲರೂ ಈ ಕೆಲಸ ಮಾಡುವ ಜಾಗೃತಿ, ತಾಳ್ಮೆ ತೋರಿಸುತ್ತಾರೆ ಎಂದು ನಾವು ನಿರೀಕ್ಷಿಸಬಾರದು.
ಮಕ್ಕಳ ಶಾಲಾ ದಾಖಲಾತಿಗಳಲ್ಲಿ ‘ವೀರಶೈವ ಲಿಂಗಾಯತ’ ಎಂದು ನಮೂದಾಗುತ್ತಿರುವುದನ್ನು ನಿಲ್ಲಿಸುವುದು ಹೇಗೆ? ಇದರ ಬಗ್ಗೆ ಚರ್ಚೆಯಾಗಬೇಕು, ಒಂದು ಹೋರಾಟ ಕೂಡ ಬೇಗನೆ ಶುರುವಾಗಬೇಕು. ಇಲ್ಲವಾದರೆ ಮುಂದೆ ಸರಕಾರಿ ದಾಖಲೆಗಳಲ್ಲಿ ನಾವೆಲ್ಲ ವೀರಶೈವರಾಗಿ ಬಿಡುತ್ತೇವೆ.

ಈ ಬದಲಾವಣೆಗೆ ದಿವಂಗತ ಎಂ. ಪಿ. ಪ್ರಕಾಶ್ ಅವರು ಕಾರಣ ಎಂದು ಕೇಳಿದ್ದೇನೆ. ಅವರು ವೀರಶೈವ ಸಮಾಜದ ಮತ್ತು ಪಂಚಾಚಾರ್ಯ ಮಠಗಳ ಪ್ರಭಾವ ಮತ್ತು ಒತ್ತಡಗಳಿಗೆ ಒಳಗಾಗಿ ದಿವಂಗತ ಎಸ್. ಎಂ. ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದಾಗ ಅವರ.ಮೇಲೆ ಒತ್ತಡ ತಂದು ಈ ಬದಲಾವಣೆ ಮಾಡಿಸಿದರು ಎನ್ನುವುದು ಸುದ್ದಿ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ಗುರುತು ಹಾಗೆಯೇ ಮುಂದುವರಿದರೆ ಲಿಂಗಾಯತ ಬೇರೆ ಮತ್ತು ಅದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಒತ್ತಾಯಗಳು ಪ್ರಾರಂಭವಾಗುವುದನ್ನು ಮನಗಂಡು ಎರಡೂ ಒಂದೇ ಅನ್ನುವ ದಾಖಲೆಗಳನ್ನು ಸೃಷ್ಟಿಸುವುದು ಒಂದು ಪ್ರಮುಖ ಉದ್ದೇಶವಾಗಿತ್ತು. ಈಗ ಅದು ಲಿಂಗಾಯತರಿಗೆ ಸರ್ಕಾರಿ ದಾಖಲೆಗಳಲ್ಲಿ ಅವರ ಅಸ್ಮಿತೆಯನ್ನೇ ಅಳಿಸಿ ಹಾಕುವ ಹಂತ ತಲುಪಿದೆ. ಇದನ್ನು ಮೊದಲು ಇದ್ದ ಹಾಗೆ ಬದಲಾವಣೆ ಮಾಡಲು ಅದಕ್ಕಾಗಿಯೇ ಲಿಂಗಾಯತ ಸಮಾಜ ಬೇರೆಯದೇ ಹೋರಾಟವನ್ನು ರೂಪಿಸಿ ಬದಲಾವಣೆಗೆ ಆಗ್ರಹಿಸಬೇಕು. ಲಿಂಗಾಯತ ಸಮಾಜ ಈಗಲಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಇಳಿಯಲಿ.
ಹೌದು ಇದು ನಿಜ
ಯಡಿಯೂರಪ್ಪ CM ಇದ್ದಾಗ, ಈ ವೀರಶೈವ ಲಿಂಗಾಯತ ಅಂತ ಪ್ರಮಾಣ ಪತ್ರ ಕೊಡಲು ಪ್ರಾರಂಭ ಆಯಿತು.
ಆಗ ನನ್ನ ಮಗಳ ಪ್ರಮಾಣ ಪತ್ರ ಪಡೆದಾಗ ಹೀಗೆ ಮಿಶ್ರ ಹೆಸರಿನಲ್ಲಿ ಕೊಟ್ಟರು
🥲
ಈ ಬಗ್ಗೆ ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಮೈಸೂರಿನ ಜಾಗತಿಕ ಲಿಂಗಾಯತ ಮಹಾಸಭೆ ಮುಖಂಡರು ಸಲ್ಲಿಸಿದ್ದಾರೆ.
Excellent 👍
💐
💐
ಹೌದು ಇದು ಗಂಭೀರ ವಿಷಯ, ಲಿಂಗಾಯತ ಎಂದು ನಾವು ಜಾತಿ ಪ್ರಮಾಣ ಪತ್ರದಲ್ಲಿ ಬರೆದು ಕೊಟ್ಟರೂ ಕೂಡ ಅದನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಕೂಡಲೇ ಜಾಗತಿಕ ಲಿಂಗಾಯತ ಮಹಾ ಸಭಾದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಮತ್ತು ಸಂಭಂದ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಲು ಒತ್ತಡ ಹೇರಬೇಕು.