ಬಸವಜಯ ಮೃತ್ಯುಂಜಯ ಶ್ರೀ ನನ್ನ ಆತ್ಮೀಯರು. ಆದರೆ, ಅವರು ಯಾತ್ನಾಳ ಹಿಂದೆ ಏಕೆ ಬಿದ್ದಿದ್ದಾರೋ ಗೊತ್ತಿಲ್ಲ: ಬೇಲೂರ ವಿರಕ್ತ ಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ
ಹುಲಸೂರ
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಯತ್ನಾಳರನ್ನು ಅವರು ಓಲೈಸುತ್ತಿರುವುದು ಸರಿಯಲ್ಲ, ಎಂದು ಬೇಲೂರ ವಿರಕ್ತ ಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸ್ವಾಮೀಜಿ ಆದವರು ಎಲ್ಲರನ್ನು ಸಮಾನವಾಗಿ ನೋಡಬೇಕು.
ಮೃತ್ಯುಂಜಯ ಶ್ರೀ ನನ್ನ ಆತ್ಮೀಯರು. ಆದರೆ, ಅವರು ಯಾತ್ನಾಳ ಹಿಂದೆ ಏಕೆ ಬಿದ್ದಿದ್ದಾರೋ ಗೊತ್ತಿಲ್ಲ. ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳು ಎಚ್ಚೆತ್ತುಕೊಳ್ಳಬೇಕು. ಶಾಸಕ ಯಾತ್ನಾಳಗೆ ಯಾರೂ ಸಹ ಬೆಂಬಲಿಸಬಾರದು ಎಂದರು.
ಸದಾ ನಾಲಿಗೆ ಹರಿಬಿಟ್ಟು ವಿವಾದ ಸೃಷ್ಟಿಸುತ್ತಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಸರಿಯಾದ ಕ್ರಮವಾಗಿದೆ ಎಂದು ಬೇಲೂರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.
ಧರ್ಮಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಲಿಂಗಾಯತರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಅವಾಚ್ಯ ಶಬ್ದ ಬಳಸುತ್ತಿದ್ದ ಅವರ ನಡೆ ಅತಿರೇಕಕ್ಕೆ ಹೋಗಿತ್ತು. ಅವರ ಮಾತುಗಳೇ ಅವರಿಗೆ ಮುಳುವಾಯಿತು.
ಯತ್ನಾಳರ ಬೆಂಬಲಕ್ಕೆ ನಿಂತಿರುವ ಮೃತ್ಯುಂಜಯ ಶ್ರೀಗಳಿಗೆ ಕಾಂಗ್ರೆಸ್ ಪಕ್ಷದ ಪಂಚಮಸಾಲಿ ನಾಯಕರಿಂದಲೂ ವಿರೋಧ ಬಂದಿದೆ.
ಈ ಹುಚ್ಚ ಯತ್ನಾಳನ್ನ ಬೆಂಬಲಿಸುವುದು, ದೂರ ಸರಿಸುವುದು ಎರಡೂ ಬಿಸಿ ತುಪ್ಪ ಇದ್ದಂತೆ.
ಬೆಂಬಲಿಸಿದರೆ, ಒಬ್ಬ ಲಿಂಗಾಯತ ವಿರೋಧಿ, ಹಿಂದೂ ಧರ್ಮದ ಹುಚ್ಚನಿಗೆ ಬೆಂಬಲಿಸಿದಂತೆ.
ವಿರೋಧಿಸಿದರೆ ಲಿಂಗಾಯತ ಸ್ವತಂತ್ರ ಧರ್ಮ ವಿರೋಧಿ ಪಕ್ಷವನ್ನು ಬೆಂಬಲಿಸಿದಂತೆ,
ಇವೆರಡೂ ಮಾಡದೆ ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಡಗುವುದು ಒಳ್ಳೆಯದು
ಬಸವನಗೌಡ ಪಾಟೀಲ್ ಯತ್ನಾಳ್ ರಾಜಕೀಯ
ತತ್ವ ಸಿದ್ದಾಂತ ಅರಿಯದ ಸಂವಿಧಾನ ವಿರೋಧಿ
ರಾಜಕಾರಣಿ. ಧರ್ಮ ನಿರಪೇಕ್ಷಿತ ನೀತಿಯನ್ನು
ಉಲ್ಲಂಘಿಸಿ ಬಾಯಿಗೆ ಬಂದದ್ದನ್ನು ಉಗುಳಿ
ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುವ
ರಾಜಕಾರಣ, ರಾಜಕಾರಣಿಗಳನ್ನು ಜನರು ಬಹಿಷ್ಕರಿಸಿವದ
ಕಾರ್ಯವಾಗಬೇಕು.
Swamy gale niveella polticsdavr bennige nillabedi.nimma bktrige mane manege hogi niti nadvalike,saty sadachar ,bhakti marg kalisuvdar kadege gamna harisi. Adu bittu rajkiyadar kade yake hogtiri
Avrella 3 bittu bandu politics madutiddare. Niv yake avrbagge matadtiri? Niu swamyji agi swamy gala kelaa madi. Saku.
ಕೂಡಲಸಂಗಮದ ಸ್ವಾಮಿಗಳು ರಾಜಕಿಯ ವಿಚಾರಗಳಲ್ಲಿ ಎಚ್ಚರಿಕೆ ಹೊಂದಿರಬೇಕು. ಬೇಡ ಸ್ವಾಮಿಗಳೇ ಯತನಾಳನಬೆಂಬಲಕ್ಕೆ ನಿಲ್ಲುವುದು.
ಯತ್ನಾಳ ಸರ್ ಬಾಯಿ ಇದೆ ಅಂತಾ ಏನೆನೋ ಮಾತಾಡಬಾರದೂ ಒಬ್ಬ ಶಾಸಕರಾಗಿ ಸಾವ೯ಜನಿಕ ಜೀವನದಲ್ಲಿರುವವರು ಸಾವ೯ಜನಿಕವಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕೂ ಆವೇಶಕ್ಕೊಳಗಾಗಿ ಏನೇನೊ ಮಾತನಾಡಬಾರದು.