ಮೃತ್ಯುಂಜಯ ಶ್ರೀಗಳ ಕಾಲ ಮುಗಿದೈತಿ, ಬದಲಾವಣೆ ಆಗತ್ತೆ: ಕಾಶಪ್ಪನವರ್

“ಬದಲಾವಣೆ ಆಗ ಬೇಕೂಂದ್ರೆ ಸುನಾಮಿ ತರಾನೇ ಆಗತ್ತೆ. ಅವರ ಕಾಲ ಮುಗಿದೈತಿ, ಬದಲಾವಣೆ ಆಗತ್ತೆ,”

ಕೂಡಲ ಸಂಗಮ

ಕೂಡಲ ಸಂಗಮದಲ್ಲಿ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಬದಲಿಸುವ ಮಾತು ನಡೆದಿದೆ.

ನೆನ್ನೆ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲು ನಿಂತಾಗ ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರಿಗೆ ಪತ್ರಕರ್ತರು ಸ್ಪೋಟಕವಾದ ವಿಷಯದ ಮೇಲೆ ಒಂದು ಪ್ರಶ್ನೆ ಕೇಳಿದರು.

ಪ್ರಶ್ನೆ) ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಬದಲಾವಣೆ ಮಾಡೋ ಕೆಲಸ ಒಳೊಳಗೆ ನಡೆಯುತ್ತಿದೆ ಅನ್ನೋ ಮಾತಿದೆ…

ಉತ್ತರ) ಇವರದು ಕಾಲ ಮುಗಿದೈತಿ ಬದಲಾವಣೆ ಆಗೇ ಆಗತ್ತೆ

“ಸಮಾಜ ಗುರುಗಳನ್ನು ಮಾಡಿದೆ, ಕಾಲಕಾಲಕ್ಕೆ ಏನೇನು ಆಗಬೇಕು ಅಂತ ಸಮಾಜ ನಿರ್ಣಯ ಮಾಡತ್ತೆ. ಬದಲಾವಣೆ ಮಾಡುವ ಕಾಲ ಬಂದರೆ ಅದು ಕೂಡ ಆಗತ್ತೆ ಕಾಯ್ದು ನೋಡಿ,” ಎಂದರು.

ಮುಂದುವರೆದು ಕಾಶಪ್ಪನವರ್ “ಬದಲಾವಣೆ ಕಾಲ ಬಂದಾಗ ಯಾರೂ ತಡೆಯೋ ಹಾಂಗಿಲ್ಲ… ಬದಲಾವಣೆ ಆಗ ಬೇಕೂಂದ್ರೆ ಸುನಾಮಿ ತರಾನೇ ಆಗತ್ತೆ. ಅವರ ಕಾಲ ಮುಗಿದೈತಿ, ಬದಲಾವಣೆ ಆಗತ್ತೆ,” ಎಂದು ಹೇಳಿದರು.

ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪರ ನಿಂತಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮಾಜದ ಹಲವಾರು ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್, ಮೋಹನ್ ಲಿಂಬಿಕಾಯಿರಂತಹ ಮುಖಂಡರಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ.

“ಯತ್ನಾಳ ಬೇಕಿದ್ದರೆ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಬೇರೆ ಪಂಚಮಸಾಲಿ ಪೀಠ ಮಾಡಲಿ. ಸಮಾಜದಿಂದ ಸ್ವಾಮೀಜಿ ಇದ್ದಾರೆ, ಸ್ವಾಮೀಜಿಯಿಂದ ಸಮಾಜ ಇಲ್ಲ, ಎಂದು ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದರು.

“ಸ್ವಾಮೀಜಿಗಳು ಹೇಗಿದ್ದರೂ ರಾಜಕಾರಣಕ್ಕೆ ಬರುವ ತಯಾರಿಯಲ್ಲಿ ಇದ್ದಾರೆ, ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟು ಯಾವುದಾದರೂ ಕ್ಷೇತ್ರದಲ್ಲಿ ನಿಲ್ಲಿಸಲಿ, ಶ್ರೀಗಳು ಖಾವಿ ತೊರೆದು ಖಾದಿ ಹಾಕ್ಕೊಂಡು ಯತ್ನಾಳ ಜೊತೆ ರಾಜಕಾರಣ ಮಾಡಲಿ,” ಎಂದು ಹೇಳಿದರು.

ಸಮಾಜಕ್ಕೆ ಯತ್ನಾಳರ ಕೊಡುಗೆ ಏನು, ಸಮಾಜ ಕಟ್ಟಿದ ೮೦ ವರ್ಷದ ವಯೋವೃದ್ಧರ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸಿಕೊಡುತ್ತದೆ, ಎಂದು ವಾಗ್ದಾಳಿ ನಡೆಸಿದರು.

ಕೂಡಲಸಂಗಮ ಪೀಠವನ್ನು ಆರಂಭಿಸಿದವರು ಪ್ರಭಣ್ಣ ಹುಣಸಿಕಟ್ಟಿ, ನೀಲಕಂಠ ಅಸೂಟಿ ಮತ್ತು ನಾನು. ಸ್ವಾಮೀಜಿಗಳಿಗೆ ಅನ್ನ, ಆಶ್ರಯ ಕಲ್ಪಿಸಿದವರು ನಾವು. ಯತ್ನಾಳ ಅಲ್ಲ. ಟ್ರಸ್ಟಗೆ ಭೂಮಿ ಖರೀದಿಸುವಾಗ ಕಾನೂನಿನ ತೊಡಕುಗಳಿಂದ ಟ್ರಸ್ಟಿಗಳ ಹೆಸರಿನಲ್ಲಿ ಖರೀದಿಸಿದೆ, ಇದು ಎಲ್ಲರಿಗೂ ತಿಳಿದ ವಿಷಯ ಇದರಲ್ಲಿ ರಾಜಕಾರಣ ಮಾಡುವ ಕಾರ್ಯವನ್ನು ಯತ್ನಾಳರು ಮಾಡುತ್ತಿದ್ದಾರೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
2 Comments
  • ಸ್ವಾಮಿ ಗಳು ಧರ್ಮ ಕ್ಷೇತ್ರ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಹೋದರೆ ಅವರ ಅಧಿಕಾರ ವನ್ನು ತಗೆದುಹಾಕುವ ಶಕ್ತಿ ರಾಜಕಾರಣಿಗಳಿಗೆ ಇದೆ ಆದ್ದರಿಂದ ಸ್ವಾಮಿ ಗಳು ರಾಜಕೀಯ ಕ್ಷೇತ್ರಕ್ಕೆ ಬರಬೇಡಿ

  • ನಾನು ಪಂಚಮಸಾಲಿ ಹೋರಾಟಕ್ಕೆ ನಾನು ಒಬ್ಬ ಪಂಚಮಸಾಲಿ ಪಂಗಡದ ವ್ಯಕ್ತಿ ಅಂತ 125 ಜನರ ಸಂಗಡ ಹೋಗಿದ್ದೆ, ಹೊರತು ಹುಚ್ಚ ಯತ್ನಾಳ ನ ಬೆಂಬಲಿಗ ಅಂತ, ನಾವು ರಾಜಕೀಯದ BJP ಯ ಮನುಷ್ಯ ಆಗಿ ಹೋಗಿರಲಿಲ್ಲ.
    ನನಗೆ RSS ದ ಸದಸ್ಯತ್ವ ಅಧಿಕೃತವಾಗಿ ಇದ್ದರೆ ಯತ್ನಾಳನ ಇಲ್ಲದೆ BJP ಯ ವಿಷಯದಲ್ಲಿ ಇಣುಕಿ ನೋಡುತ್ತಿದೆ.

Leave a Reply

Your email address will not be published. Required fields are marked *