ಜಯದೇವ ಜಗದ್ಗುರುಗಳ ಸಂಸ್ಮರಣ “ಜಯದೇವ ದಿಗ್ವಿಜಯ” ಪುಸ್ತಕ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶ್ರೀಮಠದ ಅನುಭವ ಮಂಟಪದಲ್ಲಿ ಮಂಗಳವಾರ ಶ್ರೀ ಜಯದೇವ ಜಗದ್ಗುರುಗಳ ಸಂಸ್ಮರಣ ೧೨೦೦ ಪುಟಗಳ “ಜಯದೇವ ದಿಗ್ವಿಜಯ” ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಗ್ರಂಥದ ಸಂಪಾದಕ ಸಲಹಾ ಸಮಿತಿಯಲ್ಲಿ ವಚನ ದರ್ಶನ ಪುಸ್ತಕದ ತಂಡದಲ್ಲಿರುವ ಮಲ್ಲೇಪುರಂ ವೆಂಕಟೇಶ್ ಕಾಣಿಸಿಕೊಂಡಿದ್ದು ಈ ಮುಂಚೆ ವಿವಾದವಾಗಿತ್ತು.

ಕಾರ್ಯಕ್ರಮದಲ್ಲಿ ನಿಡಸೂಸಿ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಾಣೇಹಳ್ಳಿ ಶ್ರೀ ತರಳಬಾಳು ಬೃಹನ್ಮಠ ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಯೋಗಗುರು ವೈದ್ಯಶ್ರೀ ಚನ್ನಬಸಣ್ಣ, ಎಸ್.ಜೆ. ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಶ್ರೀ ಗುರುಬಸವ ಪಟ್ಟದ್ದೇವರು, ರಾವಂದೂರಿನ ಶ್ರೀ ಮೋಕ್ಷಪತಿ ಸ್ವಾಮಿಗಳು, ಡಾ.ಷಡಕ್ಷರಿ ಮಹಾಸ್ವಾಮಿಗಳು, ಶ್ರೀ ಜಯಬಸವಾನಂದ ಸ್ವಾಮಿಗಳು, ಶ್ರೀ ಇಮ್ಮಡಿ ಷಡಕ್ಷರ ಸ್ವಾಮಿಗಳು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ. ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ, ಎನ್‌ಜಿಇಎಫ್ ಲಿ. ನಿವೃತ್ತಜನರಲ್ ಮ್ಯಾನೇಜರ್ ಶ್ರೀ ಎನ್ ಟಿ ಸಿದ್ಧರಾಮಣ್ಣನವರ್ ಉಪಸ್ಥಿರಿದ್ದರು.

ಸಾಹಿತಿ ಶ್ರೀ ಎಸ್.ಆರ್ ಗುಂಜಾಳ್ ಮಾತನಾಡಿ, ನಾನು ಧಾರವಾಡ ಮುರುಘಾಮಠದಲ್ಲಿ ಪ್ರಸಾದವನ್ನು ಸ್ವೀಕರಿಸಿ ಓದಿ ಬೆಳೆದೆ. ನಾನು ೧೨೦೦೦ ಗ್ರಂಥಗಳನ್ನು ಲಿಂಗಾಯತ ಧರ್ಮದ ಕುರಿತು ವಿಚಾರವನ್ನು ವಿವಿಧ ಭಾಷೆಗಳಿಂದ ತಿಳಿದು ಲಿಂಗಯತ ಧರ್ಮದ ಬಗ್ಗೆ ಬೃಹತ್ ಗ್ರಂಥವನ್ನು ರಚಿಸಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ಸಹ ದೊರೆತಿದೆ. ನನಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ೧೨ನೇ ಶತಮಾನದ ಅನುಭವ ಮಂಟಪದಂತಹ ಅನುಭವ ಮಂಟಪ ಶ್ರೀಮಠದಲ್ಲಿರುವುದು ಅಭಿನಂದನಾರ್ಹ ಎಂದು ನುಡಿದರು.

“ಜಯದೇವ ದಿಗ್ವಿಜಯ” ಪುಸ್ತಕ ಪುಸ್ತಕದ ಸಂಪಾದಕರು ಶ್ರೀ ಶಿವಯೋಗಿ ಸಿ ಕಳಸದ ಹಾಗೂ ಪ್ರಧಾನ ಸಂಪಾದಕರು ಶ್ರೀ ಬೈರಮಂಗಲ ರಾಮೇಗೌಡರು ಹಾಜರಿದ್ದರು.

ಶ್ರೀ ಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ-೨೦೨೪ರ ನಿಮಿತ್ತ e ವಿಶೇಷ ಗ್ರಂಥವನ್ನು ಹೊರತರಲಾಗಿದೆ.

Share This Article
2 Comments

Leave a Reply

Your email address will not be published. Required fields are marked *