“ಇದನ್ನೇ ದೊಡ್ಡ ವಿಷಯ ಮಾಡುವುದು ಸರಿಯಲ್ಲ. ಚರ್ಚೆ ಮಾಡೋಣ, ಎಲ್ಲ ಮುಖಂಡರ ನಿರ್ಧಾರಕ್ಕೆ ನನ್ನ ಸಹಮತವಿದೆ.”
ಕೂಡಲಸಂಗಮ
ಉಚ್ಚಾಟಿತ ಬಿಜೆಪಿ ಶಾಸಕ ಬಸನ ಗೌಡ ಯತ್ನಾಳ್ ಪರ ನಿಂತು ಹಲವಾರು ಮುಖಂಡರ ಆಕ್ರೋಶಕ್ಕೆ ಗುರಿಯಾಗಿರುವ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಏಪ್ರಿಲ್ 20 ರಂದು ರಾಜ್ಯ ಮಟ್ಟದ ಸಭೆ ಕರೆದಿದ್ದಾರೆ.
ರಾಜಕೀಯದ ಸ್ವರೂಪ ಪಡೆದಿರುವ ತಮ್ಮ ನಡೆಯನ್ನು ಸರಿಪಡಿಸಿಕೊಳ್ಳದಿದ್ದರೆ ಉಚ್ಚಾಟಿಸುವುದಾಗಿ ಪಂಚಮಸಾಲಿ ಮುಖಂಡರು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿಯೇ ಶ್ರೀಗಳು ಸಭೆಯನ್ನು ಕರೆದಿದ್ದಾರೆ.
ವ್ಯಾಪಕವಾಗಿ ಟೀಕೆಗೆ ಒಳಗಾಗಿರುವ ಶ್ರೀಗಳ ಇತ್ತೀಚಿನ ನಡೆಯನ್ನು ಚರ್ಚಿಸಲು ಏಪ್ರಿಲ್ 22 ರಂದು ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡರು ಕರೆದಿರುವ ಸಭೆಯ ಎರಡು ದಿನಗಳ ಮುಂಚೆಯೇ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಈ ಸಭೆ ನಡೆಯಲಿದೆ.
ಇಂದು ಬಾಗಲಕೋಟೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಶ್ರೀಗಳು ಏಪ್ರಿಲ್ 20ರ ಸಭೆಗೆ ಬರುವಂತೆ ಸಮಾಜದ ಶಾಸಕ, ಸಂಸದ, ಸಚಿವರಿಗೆ ಮಾಧ್ಯಮಗಳ ಮೂಲಕ ಅಹ್ವಾನ ನೀಡಿದರು.
ಪತ್ರಕರ್ತರು ಯತ್ನಾಳರ ಬೆಂಬಲಕ್ಕೆ ನಿಂತಿರುವ ಶ್ರೀಗಳನ್ನು ಪ್ರಶ್ನಿಸಿದಾಗ ತಾವು ಯಾವುದೇ ವ್ಯಕ್ತಿ ಪರವಾಗಿ ಮಾತನಾಡಿಲ್ಲ, ಸಮಾಜಕ್ಕೆ ದುಡಿದಿರುವ ಎಲ್ಲರ ಪರವಾಗಿ ಪಕ್ಷಾತೀತವಾಗಿ ಧ್ವನಿ ಎತ್ತಿದ್ದೇನೆ, ಎಂದು ಹೇಳಿದರು.
“ಎಂದೂ ಸಹ ಏಕ ವ್ಯಕ್ತಿ, ಏಕ ಪಕ್ಷದ ಪರ ಮಾತನಾಡಿಲ್ಲ, ಅಪಾರ್ಥ ಮಾಡಿಕೊಳ್ಳಬೇಡಿ. ಇದನ್ನೇ ದೊಡ್ಡ ವಿಷಯ ಮಾಡುವುದು ಸರಿಯಲ್ಲ. ಚರ್ಚೆ ಮಾಡೋಣ, ಎಲ್ಲ ಮುಖಂಡರ ನಿರ್ಧಾರಕ್ಕೆ ನನ್ನ ಸಹಮತವಿದೆ,” ಎಂದು ಹೇಳಿದರು.
ಚುನಾವಣೆಗೆ ನಿಲ್ಲುತ್ತೀರಾ ಎನ್ನುವ ಪ್ರಶ್ನೆಗೆ ಗುರುಗಳು ಭಕ್ತರನ್ನು ಜನಪ್ರತಿನಿಧಿಗಳಾಗಿ ಮಾಡಬೇಕೆ ಹೊರತು ಗುರುಗಳು ಚುನಾವಣೆಗೆ ನಿಲ್ಲಬಾರದು ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪಕ್ಕೆ ಇವತ್ತು ಬಯಲಲ್ಲೇ ಇದ್ದು ಸಮಾಜ ಸಂಘಟನೆ ಮಾಡ್ತಿದ್ದೇನೆ,
ಆಸ್ತಿ ಹಾಗೂ ಅಂತಸ್ತು ಯಾವುದು ನನಗೆ ಮುಖ್ಯ ಅಲ್ಲ, ಭಕ್ತರು ಕೊಡುವ ಕೈತುತ್ತು ನನಗೆ ಮಹಾಪ್ರಸಾದ, ಎಂದು ಭಾವನಾತ್ಮಕವಾಗಿ ನುಡಿದರು.
ಸಮಾಜದಲ್ಲಿ ಬೇರೆ ಬೇರೆ ಸಿದ್ದಂತಗಳಿದ್ದರೂ ತಮ್ಮದು 12ನೇ ಶತಮಾನದ ಬಸವಾದಿ ಶರಣರ ಸಿದ್ಧಾಂತ, ಸ್ಥಾವರ ಮುಖ್ಯವಲ್ಲ ಜಂಗಮವೇ ಮುಖ್ಯ ಎಂದರು.
ಮೀಸಲಾತಿ ಹೋರಾಟಕ್ಕೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನೋವನ್ನು ನಿವಾರಿಸಲು ತಾವು ಬದ್ದವಾಗಿದ್ದು, ತಮ್ಮ ವಿರುದ್ಧ ಏನೇ ಷಡ್ಯಂತರವಾದರೂ ಸಹಿಸಿಕೊಳ್ಳುವ ಸಾಮರ್ಥ್ಯ ಬಸವಣ್ಣನವರು ಕೊಡುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದರು.
Budhi nihu basava thathva dalli yiddare nahu nimma para nihu hindu mundu handare nahu yen madokagalla
ನೀವು ಅಖಂಡ ಲಿಂಗಾಯತ ಧರ್ಮದ ಮಾನ್ಯತೆಗೆ ಹೋರಾಟ ಪ್ರಾರಂಭ ಮಾಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕರೆ ಪಂಚಮಸಾಲಿ ಸಮಾಜಕ್ಕೂ ಮಿಸಲಾತಿ ಸಿಗುತ್ತೆ ಇಡಿ ಲಿಂಗಾಯತ ಸಮಾಜ ನಿಮ್ಮ ಬೆನ್ನಿಗೆ ನಿಲ್ಲುತ್ತೆ ಸ್ವಾಮೀಜಿ ನಮ್ಮ ತತ್ವ ಇವ ನಮ್ಮವ ತತ್ವ ಇದೆ ಆದರೆ ಬಸವನಗೌಡ ಪಾಟೀಲ ಯತ್ನಾಳ ಎಲ್ಲರಿಗೂ ಬೈಯುದು ಲಿಂಗಾಯತ ಧರ್ಮಗುರುವಿನ ಬಗ್ಗೆ ಅವಹೇಳನ ಮಾತು ಆಡಿದ್ದಾರೆ ಅವರಿಗೆ ನೀವು ಬುದ್ದಿವಾದ ಹೆಳಬಹುದಿತ್ತು ಇವಾಗೂ ಕಾಲ ಮಿಂಚಿಲ್ಲ ಲಿಂಗಾಯತ ಧರ್ಮದ ಹೋರಾಟ ಪ್ರಾರಂಭ ಮಾಡಿ ನಾವೆಲ್ಲರೂ ನಿಮ್ಮ ಜೋತೆಗೆ ಇರುತ್ತೆವೆ.
ಒಬ್ಬ ರಾಜಕಾರಣಿಯ ಹಿಂದೆಬಿದ್ದು ನಿಮ್ಮ ಸ್ಥಾನ ಕ್ಕೆ ಧಕ್ಕೆತಂದುಕೊಳ್ಳುವ ಕೆಲಸಕ್ಕೆ ಕೖ ಹಾಕಬೇಡಿ. ರಾಜಕೀಯ ಹಾಗು ರಾಜಕಾರಣಿಗಳಿಂದ ಅಂತರವನ್ನು ಕಾಯ್ದುಕೊಳ್ಳಿ, ದುಡುಕಿ ಯಾವಹೇಳಿಕೆಗಳನ್ನು ಕೊಡಲುಹೊಗಬೇಡಿ.