ಜಮಖಂಡಿ
ಬಸವ ಜಯಂತಿಯ ಅಂಗವಾಗಿ ಇಂದಿನಿಂದ ನಗರದ ಓಲೇಮಠದಲ್ಲಿ 15 ದಿನಗಳು
ವಚನ ಜಾತ್ರಾ ಮಹೋತ್ಸವ-2025 ನಡೆಯಲಿದೆ.
ಏಪ್ರಿಲ್ 15ರಿಂದ 30ರವರೆಗೆ ಕಾರ್ಯಕ್ರಮದಲ್ಲಿ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ, ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರುಗಲಿವೆ ಎಂದು ಓಲೇಮಠದ ಉತ್ತರಾಧಿಕಾರಿ ಆನಂದ ದೇವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 15ರಂದು ಓಲೇಮಠದ ಅಕ್ಕನ ಬಳಗದ ತಾಯಂದಿರಿಂದ ಬಸವೇಶ್ವರ ಭಾವಚಿತ್ರ ಪೂಜೆಯೊಂದಿಗೆ ಮರೇಗುದ್ದಿಯ ಮಹಾಂತ ಮಹಾಸ್ವಾಮೀಜಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ 6 ಗಂಟೆಗೆ ಶರಣರ ವಚನ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಚಿಮ್ಮಡದ ಪ್ರಭು ಸ್ವಾಮೀಜಿ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸುವರು, ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಸಮ್ಮುಖದಲ್ಲಿ ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನೀಡುವರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮು ಶಿರೋಳ ಕಾರ್ಯಕ್ರಮ ಉದ್ಘಾಟಿಸುವರು ಹಾಗೂ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಜಿ.ಎಸ್.ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಹಿರಿಯ ನ್ಯಾಯವಾದಿಗಳಾದ ಡಾ.ತಾತಾಸಾಹೇಬ ಬಾಂಗಿ, ಎನ್.ಎಸ್.ದೇವರವರ, ಜಿ.ಕೆ.ಮಠದ, ಉದ್ಯಮಿ ಸಂಗಮೇಶ ನಿರಾಣಿ, ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ. ತುಪ್ಪದ, ಲೆಕ್ಕಪರಿಶೋಧಕ ಗಿರೀಶ ಬಾಂಗಿ, ನಗರಸಭೆ ಉಪಾಧ್ಯಕ್ಷೆ ರೇಖಾ ಕಾಂಬಳೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ 16ರಿಂದ ಏಪ್ರಿಲ್ 27 ರವರೆಗೆ ನಾಡಿನ ವಿವಿಧ ಹೆಸರಾಂತ ಪೂಜ್ಯರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರಗುವವು.
ಏಪ್ರಿಲ್ 28 ರಂದು ಸಾಯಂಕಾಲ 4 ಗಂಟೆಗೆ ಮಕ್ಕಳಿಂದ ತಾಯಂದಿರ ಪಾದಪೂಜೆ ಜರಗುವುದು.
ಏಪ್ರಿಲ್ 29 ರಂದು ಸಂಜೆ 6.30ಕ್ಕೆ ವಚನ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಮರೇಗುದ್ದಿಯ ನಿರುಪಾಧೀಶ್ವರ ಶ್ರೀಗಳು, ಉಗುರಗೋಳದ ಮಹಾಂತ ಸ್ವಾಮೀಜಿ, ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಕೊಣ್ಣೂರ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭು ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಲಿದ್ದಾರೆ ಹಾಗೂ ಮುತ್ತೂರಿನ ಗಿರೀಶ ದೇವರು ಉಪಸ್ಥಿತರಿರುವರು ಎಂದರು.
ಏಪ್ರಿಲ್ 30 ರಂದು ಬೆಳಿಗ್ಗೆ 8 ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಜರಗುವುದು, ಮಧ್ಯಾಹ್ನ 12 ಗಂಟೆಗೆ ದಾಸೋಹ, ಸಾಯಂಕಾಲ 5 ಗಂಟೆಗೆ ಬಸವೇಶ್ವರರ ರಥೋತ್ಸವ ಸಂಜೆ 7 ಗಂಟೆಗೆ ಹುಬ್ಬಳ್ಳಿಯ ಮಹನ್ಯ ಗುರು ಪಾಟೀಲ ತಂಡದಿಂದ ಸಂಗಿತ ಕಾರ್ಯಕ್ರಮ ಜರಗುವುದು ಎಂದು ತಿಳಿಸಿದರು.
ಪ್ರವಚನ ಕಾರ್ಯಕ್ರಮದಲ್ಲಿ ಪ್ರತಿದಿನ ದಾಸೋಹ ಅನ್ನಪ್ರಸಾದ ಜರಗುವುದು, ಏಪ್ರಿಲ್ 16ರಿಂದ 29ರವರೆಗೂ ನಗರದ ಪ್ರಮುಖ ಬೀದಿಗಳಲ್ಲಿ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಸದ್ಭಾವನ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀಶೈಲ ಗೊಂಗನವರ, ಸದಾನಂದ ಬಾಗೇವಾಡಿ, ಮಲ್ಲು ಮುದಕನ್ನವರ, ಮಲ್ಲಪ್ಪ ದೇಸಾಯಿ, ಎಂ.ಕೆ. ಹಿಟ್ಟಿನಮಠ, ಬಸವರಾಜ ಬಳಿಗಾರ, ಶಿವಾನಂದ ಕಣ್ಣೂರ ಮತ್ತಿತರರಿದ್ದರು.