“ಶರಣರ ಶಕ್ತಿ” ಚಿತ್ರದ ಪ್ರದರ್ಶನ ತಡೆ ಹಿಡಿಯಿರಿ: ಜಾಗತಿಕ ಲಿಂಗಾಯತ ಮಹಾಸಭಾ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

“ಶರಣರ ಶಕ್ತಿ” ಚಿತ್ರದ ಪುದರ್ಶನ ತಡೆ ಹಿಡಿಯಲು ಜಾಗತಿಕ ಲಿಂಗಾಯತ ಮಹಾಸಭಾ (JLM) ಆಗ್ರಹಿಸಿದೆ.

JLMನ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ನೇತೃತ್ವದ ತಂಡವೊಂದು ಬೆಂಗಳೂರಿನಲ್ಲಿರುವ ಚಲನ ಚಿತ್ರ ಮಂಡಳಿಗೆ ಶುಕ್ರವಾರ ಭೇಟಿ ನೀಡಿ ಅಧ್ಯಕ್ಷ ಎಂ ಏನ್ ಸುರೇಶ ಆವರಿಗೆ ಮನವಿ ಪತ್ರ ನೀಡಿತು.

ಶ್ರೀಮತಿ ಆರಾಧನಾ ಕುಲಕರ್ಣಿ ನಿರ್ಮಾಪಕರಾಗಿರುವ ಮತ್ತು ಶ್ರೀ ದಿಲೀಪ ಶರ್ಮಾ , ನಿರ್ದೇಶಕರಾಗಿರುವ ಈ ಸಿನಿಮಾದಲ್ಲಿ ಶರಣರ ಬಗ್ಗೆ ತಪ್ಪು ಸಂದೇಶಗಳನ್ನು ಬಿಂಬಿಸಲಾಗಿದೆ ಎಂದು ಹೇಳಿದರು.

ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಶರಣರ ಬಗ್ಗೆ ಅವಹೇಳನಕಾರಿಯಾದ ಮತ್ತು ಸತ್ಯಸಂಗತಿಗೆ ವಿರುದ್ಧವಾದ ಸನ್ನಿವೇಶಗಳಿವೆ.

ಟ್ರೇಲರಿನಲ್ಲಿ ಬಸವಣ್ಣನವರನ್ನು ಖಡ್ಗದಿಂದ ಸಂಹಾರ ಮಾಡುವ ಸನ್ನಿವೇಶವಿದೆ. ಶರಣೆ ಅಕ್ಕನಾಗಮ್ಮನವರ ವೈವಾಹಿಕ ಜೀವನವನ್ನು ತಿರುಚಲಾಗಿದೆ, ಪೂಜ್ಯ ಜಂಗಮರನ್ನು ‘ಪುಂಡಜಂಗಮ’ ರೆಂದು ಜರಿಯಲಾಗಿದೆ

ಇವೆಲ್ಲವೂ ಲಿಂಗಾಯತರ ಭಾವನೆಗಳಿಗೆ ದಕ್ಕೆ ತರುತ್ತವೆ. ಒಂದು ಧರ್ಮವನ್ನು ಅವಹೇಳನ ಮಾಡುವುದು ಕಾನೂನು ಬಾಹಿರ ಮಾತ್ರವಲ್ಲದೇ, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ.

30-35 ಸೆಕೆಂಡುಗಳ ಟ್ರೇಲರಿನಲ್ಲಿನಲ್ಲಿಯೇ ಇಷ್ಟೊಂದು ತಪ್ಪುಗಳಿರಬೇಕಾದರೆ ಚಿತ್ರದುದ್ದಕ್ಕೂ ಇನ್ನೆನು ಗಂಡಾಂತರಕಾರಿಯಾದ ಸನ್ನಿವೇಷಗಳು, ಸಂಭಾಷಣೆಗಳಿರಬಹುದೆಂಬ ಆತಂಕ ಲಿಂಗಾಯತರಲ್ಲಿ ಉಂಟಾಗಿದೆ.

ಕರ್ನಾಟಕ ಸರಕಾರ “ವಿಶ್ವಗುರುಬಸವಣ್ಣನವರನ್ನು “ಸಾಂಸ್ಕೃತಿಕ ನಾಯಕ”ನೆಂದು ಘೋಷಿಸಿ ತನ್ನನ್ನು ತಾನೇ ಗೌರವಿಸಿ ಕೊಂಡಿದೆ. ಅವರ ಆದರ್ಶವನ್ನು ಕೊಂಡಾಡಬೇಕಾದ ದಿನಗಳಲ್ಲಿ ಶರಣರ ಬಗ್ಗೆ ತಪ್ಪು ಸಂದೇಶ ನೀಡುವುದು ಅಕ್ಷಮ್ಯ ಎಂದು ಮಂಡಳಿಗೆ ತಿಳಿಸಿದ್ದಾರೆ.

Share This Article
2 Comments

Leave a Reply

Your email address will not be published. Required fields are marked *