‘ಸ್ವಂತ ಖರ್ಚಿನಲ್ಲಿ ಎರಡು ಲಕ್ಷ ಕೋವಿಡ್ ಲಸಿಕೆ ಹಾಕಿಸಿದ್ದ ಶಾಮನೂರು’

ಬಸವ ಮೀಡಿಯಾ
ಬಸವ ಮೀಡಿಯಾ

ಗoಗಾವತಿ:

ಬೆರಳೆಣಿಕೆಯ ಕೆಲವು ಸ್ವಾಮಿಗಳನ್ನು ಬಿಟ್ಟರೆ ಗೃಹಸ್ಥರಾಗಿದ್ದುಕೊoಡೇ ಸಮಾಜಸೇವೆ ಮಾಡುವವರು ನಿಜ ಜoಗಮರು ಎಂದು  ಬಸವ ಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ಅಭಿಪ್ರಾಯಪಟ್ಟರು.

ವಾರದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಅಖಿಲ ಭಾರತ ವೀರಶೈ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕ್ರಪ್ಪನವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು.

ದಾವಣಗೆರೆಯನ್ನು ವಿದ್ಯಾಕೇಂದ್ರ ಮಾಡಿದ್ದಲ್ಲದೆ, ಕೋವಿಡ್ ಸಮಯದಲ್ಲಿ ಎರಡು ಲಕ್ಷ ಲಸಿಕೆಗಳನ್ನು ಹಾಕಿಸಿ ತಮ್ಮ ಸ್ವoತ ಹಣ ಖರ್ಚು ಮಾಡಿದ್ದರು. ಆರು ಬಾರಿ ಶಾಸಕ, ಸಚಿವರಾಗಿದ್ದಲ್ಲದೆ ಒಂದು ಬಾರಿ ಸoಸದರಾಗಿದ್ದ ಶಾಮನೂರು ಅವರು ಬಡವರ ಪಾಲಿನ ಆಶಾಕಿರಣವಾಗಿದ್ದರು ಎಂದು ಸ್ಮರಿಸಿದರು .

ವೀರೇಶಪ್ಪ ಕುಂಬಾರ, ಚನ್ನಬಸಮ್ಮ ಕಂಪ್ಲಿ, ಬಸವಪ್ರಸಾದ, ಮಲ್ಲಿಕಾರ್ಜುನ ನೀರ್ಲೂಟಿ, ಹರೀಶ ಬಳ್ಳಾರಿ, ವಚನಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಂಧನೂರು ಬಸವ ಕೇಂದ್ರದ ಪದಾಧಿಕಾರಿಗಳನ್ನು ಹಾಗೂ ಬಳ್ಳಾರಿಯ ನೂತನ ದಂಪತಿಗಳಾದ ಹರೀಶಕುಮಾರ ಮತ್ತು ಅಶ್ವಿನಿ ಅವರನ್ನು ರಾಷ್ಟ್ರೀಯ ಬಸವ ದಳದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ವಚನ ಕಾರ್ಯಕ್ರಮ ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *