ಕಂಗಟಿ (ತೆಲಂಗಾಣ)
ಸಂಗಾರೆಡ್ಡಿ ಜಿಲ್ಲೆಯ ಕಂಗಟಿ ಮಂಡಲದ ನಾಗೂರ ಬಿ ಗ್ರಾಮದಲ್ಲಿ ಲಿಂ. ಶರಣೆ ಭಾಗೀರಥಿ ರಾಚಪ್ಪ ಕಾಡೋದೆ ಅವರ ೩೧ನೇ ಸ್ಮರಣೋತ್ಸವ ಹಾಗೂ ಸರ್ವ ಶಿವಶರಣೆಯರ ಸ್ಮರಣೋತ್ಸವ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ನಾರಾಯಣಖೇಡದ ಶಾಸಕರಾದ ಡಾ. ಪಿ. ಸಂಜೀವರೆಡ್ಡಿಯವರು ಮಾತನಾಡಿ ಭಾಲ್ಕಿಯ ಪರಮಪೂಜ್ಯರ ಆಶೀರ್ವಾದದಿಂದ ನಾನು ಶಾಸಕನಾಗಿ ಜನರ ಸೇವೆ ಮಾಡಲು ಆಯ್ಕೆಯಾಗಿದ್ದೇನೆ.
ಪೂಜ್ಯರು ನೀಡಿರುವ ಆದೇಶದ ಮೇರೆಗೆ ೧೨ನೇ ಶತಮಾನದ ಮಹಾನ್ ಶರಣೆ ಅಕ್ಕಮಹಾದೇವಿಯ ಐಕ್ಯಸ್ಥಳವಾದ ಕದಳಿವನದ ಅಭಿವೃದ್ಧಿಗಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಡ ಸನ್ಮಾನ್ಯ ಶ್ರೀ ರೇವಂತ ರೆಡ್ಡಿಯವರ ಜೋತೆ ಸಮಾಲೋಚನೆ ನಡೆಸಿದ್ದೇನೆ. ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗನೆ ಮುಖ್ಯಮಂತ್ರಿಗಳ ಜೋತೆ ಮತ್ತೋಮ್ಮೆ ಸಭೇ ಏರ್ಪಡಿಸಿ ಕದಳಿವನದ ಕುರಿತು ಅಭಿವೃದ್ಧಿಯ ದಿಸೆಯಲ್ಲಿ ಪ್ರಯತ್ನಿಸುತ್ತೆನೆ ಎಂದು ಮಾತನಾಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು.
ಶರಣೆ ಭಾಗೀರಥಿ ತಾಯಿಯವರು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರಂಥಹ ಮಹಾನ್ ಗುರುವಿಗೆ ಜನ್ಮ ನೀಡಿರುವ ಮಹಾತಾಯಿಯಾಗಿದ್ದಾರೆ. ಅವರು ನೀಡಿರುವ ಸಂಸ್ಕಾರದಿಂದ ಕಾಡೋದೆಯವರ ಮನೆತನ ಬೆಳೆಯುತ್ತಿದೆ. ತಾಯಿಯವರ ತ್ಯಾಗದಿಂದ ಇಂದು ಭಾಲ್ಕಿಯ ಹಿರೇಮಠದ ಪೀಠಾಧ್ಯಕ್ಷರಾದ ಪೂಜ್ಯರು ರಾಜ್ಯ-ರಾಷ್ಟಮಟ್ಟದಲ್ಲಿ ತಮ್ಮ ಸೇವಾ ಸಾಧನೆ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಮುಂದಿನ ದಿನಮಾನಗಳಲ್ಲಿ ನಾಗೂರ ಗ್ರಾಮದ ಕೀರ್ತಿ ದೇಶ್ಯಾದ್ಯಂತ ಪಸರಿಸುತ್ತದೆ ಎಂದು ಪೂಜ್ಯರು ನುಡಿದರು.
ಈ ಕಾರ್ಯಕ್ರಮದಲ್ಲಿ ಸೋಮನಾಥ ಮುದ್ದಾ, ವಿಜಯಕುಮಾರ ಪಾಟೀಲ, ಶಿವರುದ್ರಯ್ಯಾ ಸ್ವಾಮಿ, ಸಿದ್ದಪ್ಪ ಮೂಲಗೆ ಇವರು ತಮ್ಮ ಅನುಭಾವ ಹಂಚಿಕೊಂಡರು. ಮೋಹನರೆಡ್ಡಿ, ಶಿವಕುಮಾರ ಘಾಟೆ, ಶಿವಶರಣಪ್ಪ ವಲ್ಲೆಪೂರೆ, ಸಂಜೀವಕುಮಾರ ಜುಮ್ಮಾ, ಅಭೀಷೇಕ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು.
ಸೋಮನಾಥ ಕಾಡೋದೆ ಮತ್ತು ಸಂಗಪ್ಪ ಕಾಡೋದೆ ಅವರು ಪ್ರಸಾದ ದಾಸೋಹ ಮಾಡಿದರು. ಬಸವರಾಜ ಪಾಟೀಲ ಹಾಗೂ ಹಾವಗಿ ಶರಣರು ವಚನ ಸಂಗೀತ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಗೊಗ್ಗಾ ಸ್ವಾಗತಿಸಿದರು. ರಚೀತ ಮತ್ತು ಶ್ರಾವ್ಯ ಕಾಡೋದೆ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿಯರು ವಚನ ಪಠಣ ಹಾಗೂ ಮಹಾಕ್ರಾಂತಿ ನಾಟಕ ಮಾಡಿದರು.
ಅದ್ಭುತವಾದ ಕಾರ್ಯಕ್ರಮ ನಮ್ಮ ಭಾಲ್ಕಿ ಪಟ್ಟದ ದೇವರಿಂದ ಅವರಿಗೆ ನಮ್ಮಿಂದ ದೀರ್ಘ ದಂಡ ಪ್ರಣಾಮಗಳು