5,000 ಜನ ಸಂಭ್ರಮಿಸಿದ ಕಡೂರಿನ ನಿಜಾಚರಣೆ ಕಲ್ಯಾಣ ಮಹೋತ್ಸವ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಕಡೂರು

ಬಸವತತ್ವ ಪ್ರಚಾರಕ ಲಿಂಗೈಕ್ಯ ಸಣ್ಣನಂಜಪ್ಪನವರ ಕುಟುಂಬದ ಮಲ್ಲಿಕಾರ್ಜುನ ಹಾಗೂ ಹೇಮಾ ಅವರ ಪುತ್ರಿ ಚಂದನ ಎಂ. ಅವರು ರಾಜೇಶ್ವರಿ ಹಾಗೂ ಲಿಂಗೈಕ್ಯ ರಾಜಶೇಖರ ಅವರ ಪುತ್ರ ಜಿತೇಂದ್ರ ಆರ್. ಅವರನ್ನು ಲಿಂಗಾಯತ ಧರ್ಮದ ನಿಜಾಚರಣೆಯ ಅನುಗುಣವಾಗಿ ವಿವಾಹವಾದರು.

ಸಣ್ಣನಂಜಪ್ಪನವರು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಬಸವ ತತ್ವವನ್ನು ಪ್ರಚಾರ ಮಾಡಲು ದಣಿವಿಲ್ಲದೆ ದುಡಿದಿದ್ದರು.

ಕಲ್ಯಾಣ ಮಹೋತ್ಸವವು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿಸೆಂಬರ್ 29ರಂದು ಕಡೂರು ತಾಲ್ಲೂಕಿನ ಗದ್ದೆಮನೆಯಲ್ಲಿ ನೆರವೇರಿತು. ವಚನ ಮಾಂಗಲ್ಯ, ಲಿಂಗಧಾರಣೆ, ಲಿಂಗದೀಕ್ಷೆ ಕಾರ್ಯಗಳು ಈ ಸಂದರ್ಭದಲ್ಲಿ ನಡೆದವು.

ಕಲ್ಯಾಣ ಮಹೋತ್ಸವದ ಜೊತೆ ರಾಜಶೇಖರ ಹಾಗೂ ರಾಜೇಶ್ವರಿ ಅವರು ನಿರ್ಮಿಸಿರುವ ನೂತನ ಮನೆಯ ಗುರುಪ್ರವೇಶವೂ ಸಹ ಇಷ್ಟಲಿಂಗ ಪೂಜೆ ಹಾಗೂ ಗುರುಬಸವ ಪೂಜೆಯೊಂದಿಗೆ ನೆರವೇರಿತು.

ಈ ಸಂಭ್ರಮದ ಸವಿನೆನಪಿಗಾಗಿ 101 ವಚನಗಳು ಒಳಗೊಂಡ ‘ವಚನ ಸಿಂಚನ’ ಕಿರುಪುಸ್ತಕವನ್ನು ಆಮಂತ್ರಣ ಪತ್ರಿಕೆಯ ಜೊತೆ ಮುದ್ರಿಸಿ ಹಂಚಲಾಗಿತ್ತು.

ಐದು ಸಾವಿರ ಜನ ಸೇರಿದ್ದ ಕಲ್ಯಾಣ ಮಹೋತ್ಸವವು ಬಸವ ಭಕ್ತರು, ಬಸವ ಅನುಯಾಯಿಗಳ ಅದ್ಧೂರಿ ಸಮಾವೇಶದಂತೆ ನೆರವೇರಿತು. ವಚನ ಪಠಣ, ವಚನ ಗಾಯನ ನಡೆಯಿತು. ಸಾಂಸ್ಕೃತಿಕ ಪರಂಪರೆಯ ನಾದಸ್ವರ ವಾದ್ಯ ಎಲ್ಲರ ಗಮನ ಸೆಳೆಯಿತು.

ಚಿಕ್ಕಮಗಳೂರು ಶಾಸಕ ಹೆಚ್. ಡಿ. ತಮ್ಮಯ್ಯ, ವಿಪ ಸದಸ್ಯ ಸಿ.ಟಿ. ರವಿ, ಶಿವಾನಂದ, ಮಲ್ಲಿಕಾರ್ಜುನ, ಯತೀಶ ಎಸ್, ಅಭಿಷೇಕ ರಾಜಶೇಖರ, ರಾಜೇಶ್ವರಿ, ಮೊಹಂದೇಗೌಡರು, ಸಣ್ಣನಂಜಪ್ಪ, ನೀರಗುಂಡಿಮಠ ಬಸವೇಶ್ವರ ಯುವಕ ಸಂಘದ ಸದಸ್ಯರು, ಬಂಧು-ಮಿತ್ರರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.

ಬಂದವರೆಲ್ಲರು ನೂತನ ದಂಪತಿಗೆ ಶುಭ ಹಾರೈಸಿ ಪ್ರಸಾದ ಸ್ವೀಕರಿಸಿದರು.

Share This Article
Leave a comment

Leave a Reply

Your email address will not be published. Required fields are marked *