ಬಸವಕಲ್ಯಾಣ
ಶನಿವಾರ ಹಮ್ಮಿಕೊಂಡಿದ್ದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನ ಪ್ರಶಸ್ತಿ ನೀಡಲಾಯಿತು.
ಕೊಲ್ಲಾಪುರದ ಬಸವ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ ಅವರಿಗೆ ‘ಬಸವಭಾಸ್ಕರ’ ಪ್ರಶಸ್ತಿ, ಕೆ.ಎಸ್. ರಾಜಣ್ಣ ಅವರಿಗೆ ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಹಾಗೂ ಬಸವ ಟಿ.ವಿ. ಸಂಸ್ಥಾಪಕ ಈ. ಕೃಷ್ಣಪ್ಪ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.
ಎಲ್ಲಾ ಪ್ರಶಸ್ತಿಗಳನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ಪ್ರದಾನ ಮಾಡಿದರು.
ಡಾ.ಎಂ.ಎಂ. ಕಲಬುರಗಿ ರಾಷ್ಟ್ರೀಯ ಪ್ರಶಸ್ತಿ ₹50 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡರೆ, ಇನ್ನುಳಿದ ಮೂರು ಪ್ರಶಸ್ತಿಗಳು ₹1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿವೆ.