ವೈದಿಕರಿಗೆ ಸಂಸ್ಕೃತ ದೇವ ಭಾಷೆ, ಕನ್ನಡ ಕೇವಲ ಜನ ಭಾಷೆ

ವೈದಿಕರಿಗೆ ಸಂಸ್ಕೃತ ದೇವ ಭಾಷೆ, ಕನ್ನಡ ಜನ ಭಾಷೆ

ಮೂಲತಃ ಆರ್ಯರಾದ ವೈದಿಕರು ದ್ರಾವಿಡ ಭಾಷೆಯಾದ ಕನ್ನಡವನ್ನು ಕೀಳಾಗಿ ನೋಡಿದರು. ಅವರಿಗೆ ಸಂಸ್ಕೃತ ದೇವವಾಣಿಯಾದರೆ, ಕನ್ನಡ ಕೇವಲ ಜನವಾಣಿಯಾಯಿತು.

ಶ್ರೀ ವೈಷ್ಣವರು ೧೧ನೆಯ ಶತಮಾನದಷ್ಟು ಹಿಂದೆಯೇ ಈ ನಾಡನ್ನು ಪ್ರವೇಶಿಸಿದರೂ ೧೭ನೇ ಶತಮಾನದವರೆಗೆ ಕನ್ನಡದಿಂದ ದೂರ ಉಳಿದರು.

ಮಾಧ್ವರ ದಾಸಕೂಟದವರು ಕನ್ನಡದಲ್ಲಿ ಧರ್ಮ ಪ್ರಚಾರ ಮಾಡಲು ೧೫ನೇ ಶತಮಾನದಲ್ಲಿ ಹೊರಟರೆ, ವ್ಯಾಸಕೂಟದವರು ಮಡಿವಂತಿಕೆ ಬಿಡದೆ ಸಂಸ್ಕೃತಕ್ಕೆ ಅಂಟಿಕೊಂಡರು.

೧೮ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಪೇಶ್ವೆಗಳ ಆಡಳಿತ ಬರುತ್ತಿದಂತೆ, ಬ್ರಾಹ್ಮಣರು ಕನ್ನಡದಿಂದ ಮರಾಠಿಗೆ ನೆಗೆದರು. ಮುಂದೆ ೧೯ನೇ ಶತಮಾನದಲ್ಲಿ ಬ್ರಿಟಿಷರು ಅಧಿಕಾರಕ್ಕೆ ಬರುತ್ತಿದಂತೆ, ಮರಾಠಿಯಿಂದ ಇಂಗ್ಲೀಷಿಗೆ ಜಿಗಿದರು.

ಇತಿಹಾಸದ ಉದ್ದಕ್ಕೂ ವೈದಿಕರು ಜನಾಂಗ ಸಂಸ್ಕೃತವನ್ನು ಬಿಟ್ಟರೆ ಮಿಕ್ಕ ಭಾಷೆಗಳೊಡನೆ ದುರ್ಬಲ, ಅವಕಾಶವಾದಿ ಸಂಬಂಧ ಇಟ್ಟುಕೊಂಡಿದ್ದು ಇದರಿಂದ ಸ್ಪಷ್ಟವಾಗುತ್ತದೆ.

(‘ಕನ್ನಡಿಗರ ಮಾತೃಭಾಷೆಯ ಇತಿಹಾಸ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧)

Share This Article
Leave a comment

Leave a Reply

Your email address will not be published. Required fields are marked *