ಕಲಬುರ್ಗಿ
ಮಹಾನಗರದ ರಾಘವೇಂದ್ರ ಬಡಾವಣೆಯ ಶರಣ ದಂಪತಿಗಳಾದ ನಾಗೇಂದ್ರಪ್ಪಾ ನಿಂಬರ್ಗಿ ಮತ್ತು ಸುವರ್ಣ ನಿಂಬರ್ಗಿ ಅವರ ನೂತನ ಮನೆಯ ಗುರುಪ್ರವೇಶ, ಪೂಜ್ಯ ಸದ್ಗುರು ಬಸವಪ್ರಭುಸ್ವಾಮೀಜಿ, ಕಲ್ಯಾಣ ಮಹಾಮನೆ ಗುಣತಿರ್ಥವಾಡಿ, ಬಸವಕಲ್ಯಾಣ ಇವರ ಮಾರ್ಗದರ್ಶನದಲ್ಲಿಬಸವ ತತ್ವದಂತೆ ನಡೆಯಿತು.

ಗುರುಪ್ರವೇಶವು ಧರ್ಮಗುರು ಬಸವಣ್ಣನವರ ಮೂರ್ತಿಯನ್ನು ಮತ್ತು ಬಸವಾದಿ ಶರಣರ ವಚನ ಕಟ್ಟುಗಳನ್ನು ತಲೆ ಮೇಲೆ ಹೊತ್ತುಕೊಂಡು ವಚನಗಳನ್ನು ಪಠಿಸುತ್ತ, ನೂತನ ಮನೆಯ ಮುಖ್ಯ ಬಾಗಿಲಿನಿಂದ ಪ್ರವೇಶ ಮಾಡುವ ಮೂಲಕ ” ಗುರು ಪ್ರವೇಶ ” ವಿದ್ಯುಕ್ತವಾಗಿ ಪ್ರಾರಂಭಗೊಳಿಸಲಾಯಿತು.


ಮನೆಯ ಎಲ್ಲಾ ಕೊಠಡಿಗಳಲ್ಲಿ ಸಂಚರಿಸುತ್ತಾ, ಕೇಂದ್ರ ಭಾಗದಲ್ಲಿ ನಿರ್ಮಿಸಿದ ವೇದಿಕೆಯ ಮೇಲೆ ಧರ್ಮಪಿತ ಬಸವ ತಂದೆಯ ಮೂರ್ತಿ ಇಟ್ಟು, ಬಸವಗುರುವಿಗೆ ಪುಷ್ಪಮಾಲೆ ಮತ್ತು ಪುಷ್ಪಗಳನ್ನು ಅರ್ಪಿಸಿ ನೆನಹು ಮಾಡಲಾಯಿತು. ತದನಂತರ ಶರಣ ದಂಪತಿಗಳಾದ ನಾಗೇಂದ್ರಪ್ಪಾ ನಿಂಬರ್ಗಿ ಮತ್ತು ಸುವರ್ಣ, ಮನೆಯ ಮಕ್ಕಳು, ಬಂಧುಗಳು ಸಾಮೂಹಿಕವಾಗಿ ಜಗದೊಡೆಯ ಲಿಂಗದೇವನ ಅರುಹಿನ ಕುರುಹಾದ ಇಷ್ಟಲಿಂಗದ ಪೂಜಾ ಅನುಸಂಧಾನ ಕ್ರಿಯೆಯನ್ನು ಬಸವಪ್ರಭು ಸ್ವಾಮೀಜಿ ಇವರ ಮಾರ್ಗದರ್ಶನದಲ್ಲಿ
ನಡೆಸಲಾಯಿತು.
ತದನಂತರ ಬಸವ ತತ್ವದ ಪ್ರತಿಜ್ಞಾವಿಧಿ ಮತ್ತು ಬಸವ ಧ್ವಜಾರೋಹಣ ನಡೆಸಲಾಯಿತು. ನಂತರ ನಡೆದ ಬಸವ ಅನುಭಾವದಲ್ಲಿ ಬಂಧುಗಳು, ಸ್ನೇಹಿತರು ಭಾಗಿಯಾದರು.


ಸರಳವಾದ, ದುಂದುವೆಚ್ಚರಹಿತ, ಜ್ಞಾನಭರಿತ, ಮೌಢ್ಯರಹಿತ ಅರ್ಥಪೂರ್ಣ ” ಗುರು ಪ್ರವೇಶ” ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿ ಪ್ರಶಂಶೆಗೆ ಒಳಪಟ್ಟ ನೆಮ್ಮದಿ, ಸಂತಸ ಕಾರ್ಯಕ್ರಮಕ್ಕೆ ಬಂದ ಎಲ್ಲ ಶರಣ ಬಂಧುಗಳ ಮುಖದಲ್ಲಿ ರಾರಾಜಿಸುತ್ತಿತ್ತು. ನಂತರ ಎಲ್ಲರೂ ಪ್ರಸಾದ ಮಾಡಿದರು.