(ಬಸವ ಜಯಂತಿಯನ್ನು ರೇಣುಕಾ ಜಯಂತಿಯ ಜೊತೆ ಆಚರಿಸಬೇಕೆಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿರುವ ಸುತ್ತೋಲೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್ ಅವರ ಪ್ರತಿಕ್ರಿಯೆ.)
ಬೆಂಗಳೂರು
ಅಖಿಲ ಭಾರತ ವೀರಶೈವ ಮಹಾಸಭಾದಿಂದ ಏಪ್ರಿಲ್ 2ರಂದು ಹೊರಡಿಸಿದ ಸುತ್ತೋಲೆಯು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರಲ್ಲಿ ಹಾಗೂ ಬಸವಾಭಿಮಾನಿಗಳಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜೊತೆಗಿನ ನಮ್ಮ ಸಹಯೋಗವು ಸಮಾಜದ ಸಾಮಾನ್ಯ ಹಿತಾಸಕ್ತಿಯ ಸಮಸ್ಯೆಗಳನ್ನು ಆಧರಿಸಿದೆ ಎಂದು ಇಲ್ಲಿ ಸ್ಪಷ್ಟಪಡಿಸಲಾಗಿದೆ.
ಜಾಗತಿಕ ಲಿಂಗಾಯತ ಮಹಾಸಭಾ ತನ್ನ ಮೂಲ ಉದ್ದೇಶಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಬಸವ ಜಯಂತಿಯಲ್ಲಿ, ರೇಣುಕ ಜಯಂತಿಯನ್ನು ಆಚರಿಸುವ ಪ್ರಶ್ನೆಯೇ ಇಲ್ಲ.
ಸರ್ಕಾರವು ರೇಣುಕ ಜಯಂತಿಯನ್ನು ಆಚರಿಸಲು ಪ್ರತ್ಯೇಕ ದಿನಾಂಕ ಮತ್ತು ತಿಂಗಳನ್ನು ನಿಗದಿಪಡಿಸಿದೆ, ಅದನ್ನು ಜಾಗತಿಕ ಲಿಂಗಾಯತ ಮಹಾಸಭಾ ಎಂದಿಗೂ ಆಚರಿಸಿಲ್ಲ, ಅಥವಾ ಎಂದಿಗೂ ಆಚರಿಸುವುದಿಲ್ಲ. ಹೀಗಿರುವಾಗ ಜಾಗತಿಕ ಲಿಂಗಾಯತ ಮಹಾಸಭಾ ಬಸವಣ್ಣನವರ ವೀರಶೈವ ಮಹಾಸಭಾದ ರೇಣುಕ ಜಯಂತಿಯಲ್ಲಿ ಭಾಗವಹಿಸುವುದಿಲ್ಲ.
ಶಂಕರ ಬಿದರಿ ಮತ್ತು ಅವರ ಗುಂಪು ರೇಣುಕರನ್ನು ಬಸವಣ್ಣನವರೊಂದಿಗೆ ಬೆರೆಸಿ ರೇಣುಕ ಜಯಂತಿಯನ್ನು ಜನಪ್ರಿಯಗೊಳಿಸಲು ಬಯಸುತ್ತದೆ, ಇದು ತರ್ಕಬದ್ಧವಲ್ಲ ಮತ್ತು ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿದೆ. ಈ ಮೂಲಭೂತ ವಿಷಯದ ಬಗ್ಗೆ ನಾವು ಎಂದಿಗೂ ರಾಜಿಯಾಗುವುದಿಲ್ಲ.
ಆದ್ದರಿಂದ, ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳಲ್ಲಿನ ಜಾಗತಿಕ ಲಿಂಗಾಯತ ಮಹಾಸಭಾದ ಘಟಕಗಳು ಬಸವ ಜಯಂತಿಯನ್ನು ಮಾತ್ರ ಆಚರಿಸಬೇಕು. ವೀರಶೈವ ಮಹಾಸಭಾದ ಯಾವುದೇ ಸ್ಥಳೀಯ ಸದಸ್ಯರು ರೇಣುಕರಿಲ್ಲದೆ, ನಮ್ಮ ಕಾರ್ಯಕ್ರಮದಲ್ಲಿ ಸೇರಲು ಬಯಸಿದರೆ, ಅವರನ್ನು ಭಾಗವಹಿಸಲು ಸ್ವಾಗತಿಸಬೇಕು.
ಶಂಕರಬಿದರಿಯವರು ಏಕೆ ಚಿಕ್ಕ ಮಕ್ಕಳ ಹಾಗೆ ಹಟ ಹಿಡಿದಿದ್ದಾರೆ?
ಗೊ.ರು.ಚ. ಅವರಿದ್ದ ವೇದಿಕೆಯಲ್ಲಿಯೇ ತೀವ್ರ ಪ್ರತಿಭಟನೆ ಎದುರಿಸಿದ್ದರೂ ಮತ್ತೆ ಏಕೆ ಈ ವರಸೆ?
ದಯಮಾಡಿ ನೀವುಗಳು ನಿಮಗೆ ಹೇಗೆ ಬೇಕೋ ಹಾಗೆ ನಿಮ್ಮ ಕಾಲ್ಪನಿಕ ವ್ಯಕ್ತಿಯ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಿ.
ನಮ್ಮ ಜ್ಞಾನಭಂಡಾರಿ ಬಸವಣ್ಣನವರನ್ನ ನಮಗೆ ಬಿಟ್ಟುಬಿಡಿ.
ನಿಮಗೆ ನಿಮ್ಮವರು ದೊಡ್ಡವರಾದರೆ, ನಮಗೆ ನಮ್ಮವರು ದೊಡ್ಡವರು.
ಶರಣು ಶರಣಾರ್ಥಿ
Sir ede jamdaravrige keli ಮೊದಲು ಬಸ್ವಾ ಜಯಂತಿ ಹೇಗೆ ಆಚರಿಸುತ್ತಿದ್ದರು ಅಂಥ , ಆಗ ಗೊತ್ತಾಗುತ್ತೆ ಯಾವ್ದು ಕಾಲ್ಪನಿಕ, ಯಾವ್ದು ಸತ್ಯ ಅಂಥ
I do not know why Mr Shivanand Jamdar is so much against Veerashaiva Lingayat Mahasabha.
Basavanna united every one but this man wants to divide the Community.
It is alright to celebrate Basavaraj jayanti on Akshya Tritiya.
How long we have to tolerate these adamant divisive forces?
We should make efforts to unite the community.By Sri Revanasiddeshwar’s blessings Sharan Sidrameshwar was born.
It is better to accept Sri Renukacharya as our Adi Guru and Sri Basavanna as our Dharma Guru.Veerashaiva Siddhant Mani as our Adi Grantha and Vachanas as our Dharmagrantha.
Let all of us practice our Dharma with out insulting any of our Poojya Gurus.
Let us become a force to reckon.
Stop this in fights
If you want to worship those who spring from stones. I will respect it as your faith.
If you want to impose it on me, I call it bullshit and a desperate , belated attempt to spread superstition.
Why the hell would i agree to let you bring in your crap to corrupt a noble religion founded by Basava guru, which is the hope of mankind.
Get a life
You are absolutely right, they are free to follow the eay which they want, but if thrsr ppl wants to come with us let them fitst accept Basava as founder of “Lingayat dharma”.
ಇದು ಯಾರ ವಿರುದ್ಧ ಅಥವಾ ಪರ ಅಲ್ಲ. ನಾವು ಬಸವಣ್ಣನನ್ನೇ ನಮ್ಮ ಧರ್ಮ ಸಂಸ್ಥಾಪಕ, ನಮ್ಮ ಧರ್ಮ ಗುರು ಅಂತ ಒಪ್ಪಿಕೊಂಡಿದ್ದೇವೆ. ಬಸವಣ್ಣ ಐತಿಹಾಸಿಕ ಪುರುಷ ಮೌಢ್ಯತೆಯನ್ನು ವಿರೋಧಿಸಿದವನು, ಹುಟ್ಟುನಿಂದಲೇ ಶ್ರೇಷ್ಟ ಎನ್ನುವ ಸಿದ್ಧಾಂತ, ಪರಿಕಲ್ಪನೆಯನ್ನು ವಿರೋಧಿಸಿದವನು, ಈ ಎಲ್ಲವನ್ನು ವೀರಶೈವರು ಒಪ್ಪಿಕೊಳ್ಳುವದಾದರೆ ಅವರು ಲಿಂಗಾಯತರೊಂದಿಗೆ ಬರಲು ಬಸವ ಭಕ್ತರ ತಕರಾರಿಲ್ಲ. ಇಲ್ಲವಾದಲ್ಲಿ ಅವರು ತಮ್ಮಿಷ್ಟದಂತೆ ಆಚಾರ, ವಿಚಾರ ಹೊಂದಲು ಸ್ವತಂತ್ರರು, ಆದರೆ ಇಲ್ಲಿ ಬಂದು ಗೊಂದಲ ಸೃಷ್ಟಿಸುವದು ಬೇಡ ಅಷ್ಟೆ.
ಸರ್, ಗ್ರಾಮಗಳಲ್ಲಿ ತಾಲ್ಲೂಕುಗಲ್ಲಿ ವೀರಶೈವರು ಪ್ರಭಾವಶಾಲಿಗಳಾಗಿದ್ದಾರೆ ಅವರು ರೇಣುಕರ ಚಿತ್ರ ಇಟ್ಟೆ ಇಡುತ್ತಾರೆ.
ಇಟ್ಟೆ ಇಡಲು ಅದು ಅವರ ಆಸ್ತಿ ಏನ್ರಿ, ಗೊಂದಲಕ್ಕೆ ಎಡೆ ಮಾಡದಂತೆ, ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆ ವೀರಶೈವರಿಗೆ ನೀಡಿ. ರೇಣುಕಾಚಾರ್ಯರ ದಿನಾಚರಣೆ ಗೊತ್ತುಪಡಿಸಿದ ದಿನದಂದು ಮಾಡಿಕೊಳ್ಳಲಿ.
ವೀರಶೈವರು ಬಸವ ಪಚಾರ ಹೆಚ್ಚದಂತೆ ತಡೆಹಿಡಿಯುವ ಹುನ್ನಾರವಾಗಿ ಶಂಕರ ಬಿದರಿಯವರನ್ನು ಮುಂದೆ ಬಿಟ್ಟು “ರೇಣುಕಾಚಾರ್ಯ ಧಾರವಾಹಿಯನ್ನು
ವೀರಶೈವ ಲಿಂಗಾಯತ ಮಹಾಸಭೆ ಟಿವಿ ಮೂಲಕ
ನಾಗಪುರದ ಆರ್.ಎಸ್.ಎಸ್ ನೆಟ್ವರ್ಕ್
ಸಹಾಯದಿಂದ ತೋರಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅವರ ಪ್ರಭಾವಕ್ಕೆ ಪ್ರತಿಕ್ರಿಯೆ ಹೇಗೆ ಇರಬೇಕು?. ಮುಂದಿನ ನಡೆ, ಕಾನೂನಾತ್ಮಕವಾಗಿಯೋ ?ಘರ್ಷಣೆಯಾದರೆ ಉತ್ತರವನ್ನು ಬಲ್ಲವರು ನೀಡಿ ದಾರಿ ತೋರಿಸುವುದು ಒಳ್ಳೆಯದು.
ಇಲ್ಲಿ ಯಾರಿಗೂ ಬಸವ ಜಯಂತಿ ಅಂದ್ರೆ ಏನು ಅಂಥ ಗೊತ್ತಿಲ್ಲ , ಅದನ್ನು ಯಾಕೆ ಆಚರಿಸುತ್ತಾರೆ ಅಂಥ ಗೊತ್ತಿಲ್ಲ , ಮೊದಲು ಹೇಗೆ ಆಚರಿಸುತ್ತಿದ್ದರು ಅಂಥ ಗೊತ್ತಿಲ್ಲ , ನೀವುಗಳು ಮಾತನ್ನು ಆಡುತ್ತಿರ, ಇದೆ ಜಮಾದಾರ್ ಅವರಿಗೆ ಕೇಳಿ ಮೊದಲು ಯಾವರೀತಿ ಆಚರಿಸುತ್ತಿದ್ದರು ಈಗ ಹೇಗೆ ಮಾರ್ಪಾಡಾಗಿದೆ ಅಂಥ ,
ಬಸವ ದರ್ಮ ವಿಶ್ವ ದರ್ಮ, ಜಾತ್ಯತೀತ ದರ್ಮ, ಕ್ಷುಲ್ಲಕ ಮನೋಭಾವದವರಿಗೆ ಅವಕಾಶ ಕೊಡದೇ ಬಸವ ಜಯಂತಿಯನ್ನು ಆಚರಿಸುವ
ಇದು ಬಿದಿರಿಯವರ ವರಸೆಯೋ ಅಥವಾ ವೀರಶೖವರ ಕುತಂತ್ರವೊ. ಇದನ್ನು ನಡೆಯಲು ಯಾವರೀತಿಯಿಂದಲೂ ಅವಕಾಶವಾಗಬಾರದು.
Basava darhma anuyayigalige onde ondu prashne , nim kutumbada lli antarajati vivaha madisiddira , illa Andre nivu ,, anukoolakkoskar basava anuyayigalu agiddiri. Enantiri basava prabhugale. Nanna basavanna para.🙏🙏🙏
ನಮ್ಮ ‘ಲಿಂಗಾಯತ ಮಹಾ ಸಭಾ’ದ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದು 100 ಕ್ಕೆ 100 ಸರಿ. ಅದೇ ರೀತಿಯಲ್ಲಿ ‘ಬಸವ ಜಯಂತಿಯ’ನ್ನು ಆಚರಿಸಬೇಕು. ಬಿದರಿ ಅವರಿಗೆ ‘ಬಸವಣ್ಣನವರು’ ಬೇಕಿದ್ದರೆ ವೀರಶೈವ ಬಿಟ್ಟು ಬನ್ನಿರಿ. ಇಲ್ಲವಾದರೆ ಸಮಾಜಕ್ಕೆ ಹೇಳಿಕೆ ಕೊಡುವುದು ಉಚಿತವಲ್ಲ ಎಂದು ಸುಮ್ಮನಿರಿ.