ಬೆಳಗಾವಿ
ಬೆಳಗಾವಿ ತಾಲೂಕಿನ ಕಲಾರಕೊಪ್ಪ ಗ್ರಾಮದ ಗವಿಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ ಹಾಗೂ ಗುರುಬಸವ ಬಳಗ, ಹಿರೇಬಾಗೇವಾಡಿ ಇವರ ವತಿಯಿಂದ ಸೋಮವಾರ ಸಂಜೆ 53ನೇ ವಾರದ ವಚನ ಪ್ರಾರ್ಥನೆ ಹಾಗೂ ಲಿಂಗಚಾರ ತತ್ವದ ಕುರಿತು ಅನುಭಾವ ಗೋಷ್ಠಿ ನಡೆಯಿತು.
ಲಿಂಗಾಚಾರ ತತ್ವದ ಕುರಿತು ಬೆಳಗಾವಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣ ಪ್ರವೀಣ ರೊಟ್ಟಿ ಮಾತನಾಡಿದರು. ಆನಂದ ಕೊಂಡಗುರಿ ಅವರು ವಚನ ಪ್ರಾರ್ಥನೆ ಮಾಡುವುದರ ಜೊತೆಗೆ ವಚನ ವಿಶ್ಲೇಷಣೆ ಮಾಡಿದರು.
ಫಕೀರಗೌಡ ಹಾದಿಮನಿ, ನಾಗನಗೌಡ ಹಾದಿಮನಿ, ಸಿ. ಎಂ. ಹುಬ್ಬಳ್ಳಿ, ರಮೇಶ ತಿಗಡಿ, ಚಂದ್ರಗೌಡ ನಾಯ್ಕರ ಒಂದೊಂದು ವಚನಗಳ ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಬಿ. ಜಿ. ವಾಲಿಟಗಿ ಅವರು ಲಿಂಗಾಚಾರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶರಣ ಮಹಾಂತೇಶ ತೋರಣಗಟ್ಟಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗುರು ಬಸವ ಬಳಗದ ಎಲ್ಲಾ ಕಾರ್ಯಕರ್ತರು ಹಾಗೂ ಕಲಾರಕೊಪ್ಪ ಗ್ರಾಮದ ಹಿರಿಯರು, ಮಕ್ಕಳು ಭಾಗವಹಿಸಿದ್ದರು.