ಚಿಕ್ಕಮಗಳೂರು
ಬಸವ ಮೀಡಿಯಾ ಹಾಗೂ ಡಾ. ಎಂ. ಎಂ ಕಲಬುರ್ಗಿ ಪ್ರತಿಷ್ಠಾನ ಅರ್ಪಿಸುತ್ತಿರುವ ಮೊದಲನೇ ಕಲಬುರ್ಗಿ ಚಿಂತನಾ ಶಿಬಿರ ಇಂದು ಸಂಜೆ ನಗರದ ಬಸವ ತತ್ವ ಪೀಠದಲ್ಲಿ ನಡೆಯಲಿದೆ.
ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಬಸವತತ್ವ ಪೀಠ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿದೆ.
ಕಾರ್ಯಕ್ರಮದ ಅಂಗವಾಗಿ ಮೂರು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
- ಕಲ್ಬುರ್ಗಿ ಬದುಕು, ಬರಹ, ಸಂಶೋಧನೆ
- ಡಾ. ಗೀತಾ ವಸಂತ್, ತುಮಕೂರು ವಿಶ್ವವಿದ್ಯಾಲಯ
- ಲಿಂಗಾಯತ ಧರ್ಮಕ್ಕೆ ಕಲ್ಬುರ್ಗಿ ಕೊಡುಗೆ
- ಡಾ. ಟಿ. ಆರ್. ಚಂದ್ರಶೇಖರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ (ನಿವೃತ್ತ)
- ಸ್ಥಳೀಯ ಶರಣ ಪರಂಪರೆ
- ಚಂದ್ರಶೇಖರ್ ನಾರಣಾಪುರ, ಸಹಜ ಬೇಸಾಯ ಕೃಷಿಕ, ಚಿಕ್ಕಮಗಳೂರು
ಡಾ. ಹೆಚ್. ಎಂ. ಸೋಮಶೇಖರಪ್ಪ, ಮಂಗಳೂರು ವಿಶ್ವವಿದ್ಯಾಲಯ (ನಿವೃತ್ತ) ಪ್ರಾದ್ಯಾಪಕ ಪ್ರಸ್ತಾವನೆಯ ನುಡಿಗಳನ್ನು ಹೇಳಲಿದ್ದಾರೆ.
ಚಂದ್ರಶೇಖರ್ ನಾರಣಾಪುರ ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ. (9902078988)
“ಈ ವರ್ಷ ಪೂರ್ತಿ ಕಲಬುರ್ಗಿ ಚಿಂತನಾ ಶಿಬಿರಗಳನ್ನು ವಿವಿಧ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ. ನಮ್ಮ ನಾಡಿನ ಮಹಾನ್ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯವರ ಚಿಂತನೆಯನ್ನು ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು,” ಎಂದು ಸೋಮಶೇಖರಪ್ಪ ಹೇಳಿದರು.


💐
ಈ ಕಾರ್ಯಕ್ರಮದ ವಿಡಿಯೋದ ಯುಟ್ಯುಬ ಕೊಂಡಿ ಹಂಚಿ.