ಕಲಬುರಗಿ
ರಂಗಾಯಣ ಕಲಬುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಜನವರಿ ೧೫ರಿಂದ ೧೭ರ ವರೆಗೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬಸವಣ್ಣನವರ ಕುರಿತು ನಾಟಕೋತ್ಸವ ನಡೆಯುತ್ತಿದೆ.
ಬುಧವಾರ ಸಂಜೆ ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆ ತಂಡದಿಂದ ಚಂದ್ರಶೇಖರ ಕಂಬಾರರು ರಚಿಸಿದ ಶಿವರಾತ್ರಿ ಪ್ರದರ್ಶನವಾಯಿತು.
ಇಂದು ರಂಗ ವೃಕ್ಷ ನಾಟಕ ನೃತ್ತ ಸೇವಾ ಸಂಘ ತಂಡದಿಂದ ಡಾ.ವಿಶ್ವರಾಜ ಪಾಟೀಲ್ ರಚಿತ ಶರಣ ಸಿಂಚನ ಹಾಗೂ ನಾಳೆ ಧಾತ್ರಿ ರಂಗ ಸಂಸ್ಥೆ ತಂಡದಿಂದ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ರಚಿಸಿದ ಮೋಳಿಗೆ ಮಾರಯ್ಯ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಜ.೧೭ರ ಸಂಜೆ ೬ಕ್ಕೆ ಸಮಾರೋಪ ನಡೆಯಲಿದ್ದು, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್, ರಂಗ ಸಂಘಟಕ ಕೆ.ಲಿಂಗಪ್ಪ, ಸುಜಾತಾ ಜಂಗಮಶೆಟ್ಟಿ ಹಾಗೂ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಪಾಲ್ಗೊಳ್ಳಲಿದ್ದಾರೆ.
