ಧಾರವಾಡ:
ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
‘ಅವರ ಹತ್ಯೆ ಮೌಲ್ಯಗಳ ಸ್ಥಿತ್ಯಂತರದ ಸಂಕೇತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲಾಗುತ್ತಿದೆ’ ಎಂದರು.
ನಗರದ ಸೃಜನಾ ರಂಗಮಂದಿರದಲ್ಲಿ ఎం.ఎం. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಶುಕ್ರವಾರ
ಏರ್ಪಡಿಸಿದ್ದ ಎಂ.ಎಂ.ಕಲಬುರ್ಗಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
“ಕನ್ನಡದ ಪರಂಪರ ಬಗ್ಗೆ ಕನ್ನಡಿಗರಿಗೆ ಜಾಗೃತಿ ಮೂಡದಿದ್ದರೆ ಭಾಷೆ ಉಳಿಯುವುದು ಕಷ್ಟ. ಎಂ.ಎಂ. ಕಲಬುರ್ಗಿ ಅವರ ಮೌಲ್ಯಗಳನ್ನು ಇಟ್ಟುಕೊಂಡು ಕನ್ನಡ ಕಟ್ಟುವುದು ನಮ್ಮ ಮುಂದಿನ ಸವಾಲು,” ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ ಮಾತನಾಡಿ, ಕಲಬುರ್ಗಿ ಚಿಂತನಗಳ
ಉಪನ್ಯಾಸ, ಕಾರ್ಯಾಗಾರ ಆಯೋಜಿಸಲಾಗುವುದು ಹಾಗೂ ಪುಸ್ತಕಗಳನ್ನು ಪ್ರಕಟಿಸಲಾಗುವುದು, ಆನ್‌ಲೈನ್ ಚರ್ಚೆ ಸಂಘಟಿಸಲಾಗುವುದು, ಎಂದರು.
ಸಮಾರಂಭದಲ್ಲಿ ಉಮಾದೇವಿ ಕಲಬುರ್ಗಿ, ವಿಜಯ ಕಲಬುರ್ಗಿ, ಶಶಿಧರ ತೋಡಕರ್, ಹನುಮಾಕ್ಷಿ ಗೋಗಿ, ಡಾ.ಎಚ್.ಎಸ್. ಮೇಲಿನಮನಿ, ಡಾ. ಬಾಲಣ್ಣ ಸೀಗಿಹಳ್ಳಿ, ಡಾ. ಸಿದ್ದನಗೌಡ ಪಾಟೀಲ, ಪ್ರೊ. ಚಂದ್ರಶೇಖರ ವಸ್ತ್ರದ, ಕುಮಾರ ಬೆಕ್ಕೇರಿ ವೇದಿಕೆಯಲ್ಲಿದ್ದರು.
ನಂತರ ರಾಯಚೂರು ಸಮುದಾಯದಿಂದ ‘ರಕ್ತವಿಲಾಪ’ ನಾಟಕ ಪ್ರದರ್ಶನಗೊಂಡಿತು.