ಸಿಂಧನೂರು
ತಾಲೂಕಿನ ಗುಡದೂರಿನ “ಬಾದರ್ಲಿ ಬಸನಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ “ಸಾಂಸ್ಕೃತಿಕ ನಾಯಕ ಬಸವಣ್ಣ” ಕಾರ್ಯಕ್ರಮ ನಡೆಯಿತು.
“ಸಾಂಸ್ಕೃತಿಕ ನಾಯಕ ಒಂದು ಐತಿಹಾಸಿಕ ಘೋಷಣೆ. ಆದರೆ ಘೋಷಣೆಯಾದರೆ ಮಾತ್ರ ಸಾಲದು, ಬಸವಣ್ಣನವರ ತತ್ವಗಳು ಯುವ ಜನಾಂಗಕ್ಕೆ ತಲುಪಬೇಕು ಎನ್ನುವ ದೃಷ್ಟಿಕೋನದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯವನ್ನು ಸಿಂಧನೂರಿನ ಬಸವಪರ ಸಂಘಟನೆಗಳು ಹಮ್ಮಿಕೊಂಡಿವೆ. 2024 ರ ಆಗಸ್ಟ್ ತಿಂಗಳಿನಿಂದ ಸುಮಾರು 25ಕ್ಕೂ ಹೆಚ್ಚು ಶಾಲಾ-ಕಾಲೇಜುಗಳನ್ನು ಆಯ್ದುಕೊಂಡು ಪ್ರತಿದಿನವೂ ‘ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ’ ಎನ್ನುವ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪ್ರಾಸ್ತಾವಿಕ ಮಾತುಗಳಲ್ಲಿ ಬಸವಲಿಂಗಪ್ಪ ಬಾದರ್ಲಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಮಾತನಾಡುತ್ತ ಸಕಲ ಜೀವಾತ್ಮರ ಲೇಸು ಬಯಸಿದವರು ಬಸವಣ್ಣ ಎಂದು ಅರಿತ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಹೇಳಿದರು.
ಒಂದು ದೇಶಕ್ಕೆ ಒಂದು ನಾಡಿಗೆ ಸಂಸ್ಕೃತಿ ಎನ್ನುವುದು ಇರುತ್ತದೆ. ಆ ನಾಡಿನ ಜನರ ನಡವಳಿಕೆಗಳು, ನಂಬಿಕೆಗಳು, ಮೌಲ್ಯಗಳು, ಆಚರಣೆಗಳು, ಕಲೆ, ಸಂಗೀತ, ಸಾಹಿತ್ಯವನ್ನು ಒಳಗೊಂಡಿರುತ್ತದೆ. ಆರೋಗ್ಯವಂತ, ಸಮಸಮಾಜ ನಿರ್ಮಾಣಕ್ಕೆ ಅಗತ್ಯವಾದ ಮೌಲಿಕ ಗುಣಗಳು ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿವೆ, ಎಂದು ರುದ್ರಪ್ಪ ಮಾತನಾಡಿದರು.

ಕಾಲೇಜಿನ ಆಡಳಿತಾಧಿಕಾರಗಳಾದ ಪಂಪಾಪತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಸನಗೌಡ ಬಸಾಪುರ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾಲಯದ ಶಿಕ್ಷಕವರ್ಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕೊನೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಎಲ್ಲಾ ಕಡೆ ಈ ರೀತಿ ಅಗಭೇಕು