ಮಂಡ್ಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ
ಮಂಡ್ಯ
ಬಸವ ಅನುಯಾಯಿಗಳನ್ನು ‘ತಾಲಿಬಾನ್’ ಎಂದು ಕರೆದು ಅವಮಾನಿಸಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕ್ರಮಕೈಗೊಳ್ಳುವಂತೆ ಮಂಡ್ಯ ಜಿಲ್ಲೆ, ಎನ್. ಹಾಲಸಹಳ್ಳಿಯ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರೇಶ್ವರ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ಇತ್ತೀಚಿಗೆ ನಡೆದ ಸುವರ್ಣ ನ್ಯೂಸ್ ಚರ್ಚೆಯಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವೈದಿಕ, ಮನುವಾದಿಗಳ ಕೈಗೊಂಬೆ ಆಗಿ, ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತ ಮಠದ ಪೀಠಾಧಿಕಾರಿ ಎಂಬುದನ್ನು ಮರೆತು, ಲಕ್ಷಾಂತರ ಬಸವ ಭಕ್ತರನ್ನು ಅವಹೇಳನ ಮಾಡಿದ್ದಾರೆ, ಎಂದು ಓಂಕಾರೇಶ್ವರ ಸ್ವಾಮೀಜಿ ಹೇಳಿದರು.
ಅವರು ಎಲ್ಲ ಬಸವಧರ್ಮ ಭಕ್ತರಲ್ಲಿ ಕ್ಷಮೆ ಕೇಳಬೇಕು, ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಿದ್ದರಾಗಿದ್ದೇವೆಂದು ಹೇಳಿದ್ದಾರೆ.
ನಮ್ಮ ದೇಶದ ಯಾವುದೇ ದಾರ್ಶನಿಕರು ಹಾಗೂ ಹೋರಾಟಗಾರರಿಗೆ ಅವಮಾನ ಆಗದಂತೆ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಸ್ವಾಮೀಜಿ
ಆಗ್ರಹಿಸಿದ್ದಾರೆ.
ಒಂದು ಮಠದ ಸ್ವಾಮೀಜಿಯಾಗಿ ಸನಾತನಿಗಳ ಆಜ್ಞಾಪಾಲಕನಾಗಿರುವ ಆ ವ್ಯಕ್ತಿ ಹೇಳಿದ ಮಾತ್ರಕ್ಕೆ ಬಸವ ಅನುಯಾಯಿಗಳು ಭಯೋತ್ಪಾದಕರಾಗುವುದಿಲ್ಲ.
ಜಾತಿ ಶ್ರೇಷ್ಟತೆಯ ವ್ಯಸನದಿಂದ ಕೂಡಿರುವ ಆತ ಮಠಾಧೀಶನೇಗಾದನು ಎನ್ನುವುದೇ ಸೋಜಿಗದ ವಿಷಯ.
ಆತನನ್ನು ಕ್ಷಮಿಸಿಬಿಡುವುದೆ ಬಸವ ಅನುಯಾಯಿಗಳ ಉತ್ತಮ ನಡೆಯಾಗುತ್ತದೆ.
ಒಬ್ಬ ತಾಯಿ ತನ್ನ ಗಂಡನನ್ನು ಬಿಟ್ಟು ಹೋದಾಗ ಮಕ್ಕಳು ಪ್ರಶ್ನಿಸಿದ್ದರಂತೆ ನಮ್ಮಪ್ಪನ ಬಿಟ್ಟು ಆತನ ಹಿಂದೆ ಯಾಕೆ ಹೋಗಿರುವೆ ನಿನ್ನ ಗಂಡ ಆತನಲ್ಲ ನಮ್ಮಪ್ಪ ಎಂದು. ಆಗ ಆ ತಾಯಿ ಹೇಳಿದಳಂತೆ ನನಗೆ ನನ್ನ ಗಂಡ ಯಾರು ಅಂತ ಹೇಳುವ ಅಧಿಕಾರ ನಿಮಗೆ ಇಲ್ಲ. ನೀವು ಯಾರು ಅದರ ನಿರ್ಣಯ ಮಾಡಲಿಕ್ಕೆ ಎಂದು ದರ್ಪದಿಂದ ಹೇಳಿದಳಂತೆ. ಅಂತಹ ಒಂದು ವಿಪರೀತ ಬುದ್ಧಿಯ ಮಾತುಗಳನ್ನೇ ಈ ಕಣ್ಣೀರಿ ಮಠದ ಸ್ವಾಮಿಗಳು ಆಡುತ್ತಿದ್ದಾರೆ.ಸ್ವಲ್ಪವಾದರೂ ಅವರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ಲವೇ . ಬುದ್ದಿಯಾದರು ಇರಲೇಬೇಕಲ್ಲವೇ
ಇಂತಹ ವಿವಾದಾತ್ಮಕ ವಿಶಯ ಚರ್ಚೆಗೆ ಅವಕಾಶ ಒದಗಿಸಿ ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವ ಸುವರ್ಣ ಸುದ್ದಿಯ ಮುಖ್ಯಸ್ಥರ ಮೇಲು ಪ್ರಕರಣ ದಾಖಲಾಗಲಿ
ಒಳ್ಳೆಯ ಬೆಳವಣಿಗೆ ಎಲ್ಲರು ಒಟ್ಟಿಗೆ ಸೇರುತ್ತಿರುವುದು ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಈಡೇರುವುದಕ್ಕೆ ಶಕ್ತಿ ತುಂಬುತ್ತದೆ, ಜೈ ಗುರು ಬಸವ.
ಇಂತಹ ವ್ಯಕ್ತಿಗಳಿಂದ ಸಮಾಜ ಎನ್ ತಾನೆ ಬಯಸಬಹುದು ಬಸವಾಭಿಮಾನಿಯಾಗಲು ಬಯವಿದ್ದರೆ ಕುಂಕುಮವನ್ನು ಈಗಾಗಲೆ ಇಟ್ಟುಕೊಂಡಾಗಿದೆ ಬೆಳೆ. ಸೀರೆ ಧರಿಸಿ ಸುಮ್ಮನಿದ್ದು ಬಿಡಲಿ. ಸುಖಾ ಸುಮ್ಮನೆ ಬಸವ ಭಕ್ತರನೂ ಕೆಣಕುವದು ಬೇಡಾ