ಕನ್ನೇರಿ ಮಠದ ಸ್ವಾಮಿ ಒಬ್ಬ ಉಗ್ರವಾದಿ ಸ್ವಾಮಿ: ರಾಷ್ಟ್ರೀಯ ಬಸವ ದಳ

ಧಾರ್ಮಿಕ ಭಾವನೆಗಳನ್ನ ಪ್ರಚೋದಿಸುವಂಥ ಹೇಳಿಕೆಗಳು ಶಿಕ್ಷಾರ್ಹ ಅಪರಾಧ.

ಬೆಂಗಳೂರು

ಇತ್ತೀಚಿಗೆ ಸುವರ್ಣ ವಾಹಿನಿಯ ಸಂವಾದಲ್ಲಿ ಮಾತನಾಡುವಾಗ, ಕಾಡಸಿದ್ದೇಶ್ವರ ಸ್ವಾಮಿ ಗುರು ಬಸವ ಭಕ್ತರನ್ನ ಬಸವ ತಾಲಿಬಾನಿಗಳು ಎಂಬ ಪ್ರಚಾದನಕಾರಿ ಹೇಳಿಕೆಯನ್ನ ಕೊಟ್ಟಿದ್ದಾರೆ. ಇದು ಕೋಟ್ಯಂತರ ಬಸವ ಭಕ್ತರ ಭಾವನೆಗಳಿಗೆ ತೀವ್ರ ನೋವು ತಂದಿದೆ.

ಧಾರ್ಮಿಕ ಭಾವನೆಗಳನ್ನ ಪ್ರಚೋದಿಸುವಂಥ ಹಾಗೂ ಸಮಾಜದ ಶಾಂತಿಯನ್ನು ಹಾಳು ಮಾಡುವಂಥ ಹೇಳಿಕೆಗಳು ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ. ಈ ಕೂಡಲೇ ಕಾಡಸಿದ್ದೇಶ್ವರ ಸ್ವಾಮಿ ಎಲ್ಲಾ ಬಸವ ಭಕ್ತರಿಗೆ ಕ್ಷಮೆಯನ್ನು ಕೋರಬೇಕೆಂದು ಆಗ್ರಹಿಸುತ್ತೇವೆ.

೧೨ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಗುರು ಬಸವಣ್ಣನವರು ಸಮಾಜದ ಎಲ್ಲಾ ಜಾತಿ ವರ್ಗದವರನ್ನ ಒಂದು ಮಾಡಿ, ಸಮಾನತೆಯ ಸಂಕೇತವಾಗಿ ಬ್ರಾಹ್ಮಣ ಮಧುವರಸರ ಮಗಳನ್ನು ಹರಳಯ್ಯನವರ ಮಗನೊಂದಿಗೆ ಮದುವೆ ಮಾಡಿಸಿದರು. ಆಗ ಸಂಪ್ರದಾಯವಾದಿಗಳು ಉಗ್ರವಾದಿಗಳಂತೆ ನಮ್ಮ ಶರಣಾರನ್ನ ಬಹಳ ಹಿಂಸೆಯಿಂದ ಕೊಲೆಗೈದರು. ಹಾಗಾಗಿ ಯಾರು ತಾಲಿಬಾನಿಗಳು ಎಂಬ ಆತ್ಮಾವಲೋಕನವನ್ನ ಸ್ವಾಮಿಗಳು ಮಾಡಿಕೊಳ್ಳಬೇಕು.

ನಮ್ಮ ಶರಣರು ಸಾತ್ವಿಕರು ಹಾಗು ಸೌಮ್ಯವಾದಿಗಳು. ಇನ್ನು ಮುಂದೆ ಧರ್ಮಪಿತ ಅಪ್ಪ ಬಸವಣ್ಣನವರ ಮತ್ತು ಅವರ ಭಕ್ತರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ.

Share This Article
3 Comments
  • ಸ್ವಾಮೀಜಿಗಳು ಸಮಾಜದ ವೈರುದ್ಯ ಸಮಾಚಾರಗಳಿಗೆ ಪರಿಹಾರ ಹಿಡಿದು ಸಮನ್ವಯ ಸಾಧಿಸಬೇಕು ಬೆಂಕಿ ಹಚ್ಚುವ ಕಾರ್ಯ ಮಾಡಬಾರದು

  • ಕಾವಿಧಾರಿ ವೇಷಕ್ಕೆ ಮಸಿ ಬಳಿಯುವ ತಾಲಿಬಾನಿ
    ಈ ಸ್ವಾಮೀಜಿ ಬಸವ ನಿಷ್ಟರ ಬಗ್ಗೆ ಮಾತನಾಡುವ
    ಯಾವ ನೈತಿಕ ಹಕ್ಕಿಲ್ಲ . ನಿಮಗೆ ವೇದಗಳು ,ಆಗಮಗಳು
    ಪ್ರಿಯವಾದರೆ ವೈದಿಕ ಮಠದ ಆಳಾಗು . ಶರಣ ಪರಂಪರೆಯ ಕಾಡಸಿದ್ದೇಶ್ವರ ಮಠದ ಅನುಯಾಯಿ
    ಆಗಿ ಇರಲಿಕ್ಕೆ ಯಾವದೇ ನೈತಿಕ ಹಕ್ಕಿಲ್ಲ.

  • ಅವನ ಮಠಕ್ಕೆ ಮುತ್ತಿಗೆ ಹಾಕಿ ಆ ದುರುಳನಿಗೆ ಲಿಂಗಾಯತರ ಮತ್ತು ಬಸವಣ್ಣ ಬಗ್ಗೆ ಮಾತನಾಡದಂತೆ ಅವನಿಗೆ ಎಚ್ಚರಿಕೆ ಕೋಡಬೇಕು

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಸಮಿತಿ, ರಾಷ್ಟ್ರೀಯ ಬಸವ ದಳ