ಬೀದರ
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಬಸವ ಭಕ್ತರನ್ನು ತಾಲಿಬಾನಿಗಳಿಗೆ ಹೋಲಿಸಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಚರ್ಚೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಅತಿರೇಕದ ಹೇಳಿಕೆ ಕೊಟ್ಟು ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಸವ ಭಕ್ತರಿಗೆ ‘ಬಸವ ತಾಲಿಬಾನಿ’ ಎಂದು ಉಗ್ರವಾದಿಗಳಿಗೆ ಹೋಲಿಸಲು ಕಾರಣವೇನು, ಅವರು ಎಂದಾದರೂ ಕ್ರೌರ್ಯ ಮೆರೆದಿದ್ದಾರೆಯೇ, ಅಮಾನವೀಯ, ಅನಾಗರಿಕ ವರ್ತನೆ ತೋರಿದ್ದಾರೆಯೇ, ಅವರಿಂದ ಯಾರಿಗಾದರೂ ತೊಂದರೆ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಂಥ ಉದಾಹರಣೆಯೇನಾದರೂ ಇದ್ದರೆ ಸಮಾಜದ ಮುಂದೆ ಇಡಲಿ ಎಂದು ಸ್ವಾಮೀಜಿ ಅವರಿಗೆ ಸವಾಲು ಹಾಕಿದ್ದಾರೆ.
ಕನ್ಹೇರಿ ಮಠ ಬಸವ ಪರಂಪರೆಯ ಮಠ. ಆ ಮಠದ ಸ್ವಾಮೀಜಿ ಬಾಯಲ್ಲಿ ಈ ರೀತಿಯ ಮಾತು ಬರಬಾರದಿತ್ತು. ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎಂದಿದ್ದರು. ಭಕ್ತರೇ ಶ್ರೇಷ್ಠ ಎಂದೂ ಹೇಳಿದ್ದರು. ಗುರುವಿನ ಸ್ಥಾನದಲ್ಲಿದ್ದವರು ಭಕ್ತರನ್ನು ಅವಮಾನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
‘ಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು ಕರ್ತನಟ್ಟಿದನಯ್ಯ ಬಸವಣ್ಣನ’ ಎಂದು ಅಲ್ಲಮಪ್ರಭುದೇವರು ಹೇಳಿದ್ದಾರೆ. ಬಸವಣ್ಣನವರು ಅಂದಿನ ಸಮಾಜದಲ್ಲಿ ಬೇರೂರಿದ್ದ ಜಾತಿಯತೆ, ಅಸಮಾನತೆ, ಕಂದಾಚಾರ, ಮೂಢನಂಬಿಕೆ, ಲಿಂಗಭೇದ, ವರ್ಣಭೇದ, ವರ್ಗಭೇದ ಮೊದಲಾದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿದ್ದರು. ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದರು. ಜಗತ್ತಿಗೆ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ನೀಡಿದ್ದರು. ಮಾನವ ಹಕ್ಕುಗಳು, ಕಾಯಕ-ದಾಸೋಹ ತತ್ವಗಳನ್ನು ಸಾರಿದ್ದರು. ಸಮಾನತೆಯ ಸಮಾಜ ಕಟ್ಟಿದ್ದರು ಎಂದು ತಿಳಿಸಿದ್ದಾರೆ.
ಬಸವ ಭಕ್ತರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿದ್ದಾರೆ. ಅವರ ಸಂದೇಶಗಳನ್ನೇ ಬಿತ್ತುತ್ತಿದ್ದಾರೆ. ಅಂಥವರನ್ನು ‘ಬಸವ ತಾಲಿಬಾನಿ’ಗಳೆಂದು ಕರೆದಿರುವುದು ಆಘಾತಕಾರಿ. ಸ್ವಾಮೀಜಿ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಸ್ವಾಮೀಜಿ ಅವರ ಹೇಳಿಕೆ ನೋಡಿದರೆ ‘ಒಲೆಹತ್ತಿ ಉರಿದಡೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು ಏರಿ ನೀರುಂಬಡೆ, ಬೇಲಿ ಕೆಯ್ಯ ಮೆಲುವಡೆ ನಾರಿ ತನ್ನ ಮನೆಯಲ್ಲಿ ಕಳವಡೆ, ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವ’ ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ ಎಂದು ತಿಳಿಸಿದ್ದಾರೆ.
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಸವ ಭಕ್ತರಲ್ಲಿ ಕ್ಷಮೆಯಾಚಿಸಬೇಕೆಂದು ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.
ಸ್ವಾಮೀಜಿಯವರು ತಮ್ಮ ಹೇಳಿಕೆ ಹಿಂಪಡೆಯಬೇಕು ಹಾಗೂ ಬಸವಭಕ್ತರ ಕ್ಷಮೆಯಾಚಿಸಬೇಕು. # ಮಲ್ಲಿಕಾರ್ಜುನ ಅಲ್ಲಾಪೂರ ಬೀದರ.
ಸ್ವಾಮಿಗಳು ಇಥಹ ನುಡಿಗಳನ್ನು ನುಡಿಯಬಾರದು, ತಿಳಿದೂ ಅವರು ಕೂಡಲೆ ನಾಡಜನರೆದುರು ಕ್ಷಮೆ ಯಾಚಿಸಬೇಕು.
ಸ್ವಾಮೀಜಿ ಆದವರು ಇಂತಹ ಮಾತುಗಳನ್ನು ಆಡಬಾರದು ಇದು ಅವರಿಗೆ ಶೋಭೆ ತರುವಂತದ್ದಲ್ಲ….
ನಿಮ್ಮ ಬೇಡಿಕೆ ಸಮಯೋಚಿತ ಮತ್ತು ಸಮಂಜಸವಾಗಿದೆ ಸರ್.
ಬಸವ ಭಕ್ತರ ನೋವೇ ಗುರು ಲಿಂಗ ಜಂಗಮರ ನೋವಾಗಬೇಕು.
ಲಿಂಗಾಯತ ಸ್ವಾಮಿಗಳನ್ನು ಸನಾತನಕ್ಕೆ ಮತಾಂತರ ಮಾಡಿದ್ದಾರೆ ಅನ್ನೋದಿಕ್ಕೆ ಕನ್ನೇರಿ ಮಠದ ಸ್ವಾಮಿಯೆ ಸಾಕ್ಷಿ.
ಸ್ವಾಮೀಜಿಯವರ ಮಾತು ನಮಗೆ ನೋವು ತಂದಿದೆ
ಕೂಡಲೇ ಹೇಳಿಕೆ ಹಿಂಪಡೆದು ಬಸವ ಭಕ್ತರಲ್ಲಿ ಕ್ಷಮೆ ಯಾಚಿಸಬೇಕು
OKಕಂಡ ಭಕ್ತರಿಗೆ ಕೈ ಮುಗಿವಾತನೇ ಭಕ್ತ ಮೃದು ವಚನವೇ ಸಕಲ ಜಪಂಗಳಯ್ಯ ಮೃದು ವಚನವೇ ಸಕಲ ತಪಂಗಳಯ್ಯ ಸದುವಿನಯವೇ ಸದಾಶಿವನ ಒಲುಮೆಯಯ್ಯಾ ಕೂಡಲ ಸಂಗಮದೇವ, ಬಸವ ಭಕ್ತರ ಯಾರನ್ನೂ ನೋಯಿಸುವುದಿಲ್ಲ, ಹಿಂಸಿಸುವುದಿಲ್ಲ, ತಪ್ಪನ್ನು, ಅನ್ಯಾಯವನ್ಬು ಕಂಡಿಸುತ್ತಾರೆ, ಸತ್ಯ ನುಡಿಯುವವರಿಗೆ ಕನ್ಹೇರಿ ಮಠದ ಅ್ವಮಿಜಿ ತಾಲಿಬಾನಿಗಳೆಂದು ಅವಮಾನಿಸಿರುವುದು . ಅಮಾನಿವೀಯ ಹೇಳಿಕೆ,
We respect the works and social concerns of said Swamiji but at the same time His expression and such decietful comments on Sri Basavanna followers neither expected nor accepted. HE should be keep away from such controversial statements.
ಸ್ವಾಮಿಜಿ ಅವರ ಹೆಳಿಕೆ ಹಿಂಪಡೆಯಬೇಕು
ಸ್ವಾಮಿಜಿ ಅವರ ಹೆಳಿಕೆ ಹಿಂಪಡೆಯಬೇಕು
ಯಾವ ಆಧಾರದ ಮೇಲೆ ಈ ರೀತಿ ಮಾತಾಡಿದ್ದಾರೆ
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣನವರು ಮತ್ತು ಅವರ ಅನುಯಾಯಿಗಳು ಬಸವ ಭಕ್ತರು…..
ಶರಣರು ಮುಂಬರುವ ಕಾಲಘಟ್ಟದ ಬಗ್ಗೆ ಹೇಳುವಾಗ ಲಂಡ ಬಂಡರು ಸ್ವಾಮಿಗಳಾಗುವರು ಮಠಗಳಲ್ಲಿ ತೊಟ್ಟೀಲು ಕಟ್ಯಾರೆಂಬ ನುಡಿಗಳು ಸತ್ಯವಾಗುತ್ತಿವೆ.
ಈ ಸ್ವಾಮಿಗೆ ಕಾನೂನಿನ ಪ್ರಕಾರ ಬುದ್ಧಿ ಕಲಿಸಬೇಕು . ಬಸವ ಭಕ್ತರು ದಯವೇ ಧರ್ಮದ ಮೂಲ ಎಂಬ ತತ್ವದ ಅಡಿಯಲ್ಲಿ ಬದುಕಿದವರು . ಬಸವ ಭಕ್ತರಿಗೆ ತಾಲಿಬಾನ್ ಎಂದು ಕರೆದ ಸ್ವಾಮಿ ಅಜ್ಞಾನಿ ಆಗಿರುತ್ತಾನೆ ಹೊರತು ಸುಜ್ಞಾನಿಯಂತೂ ಅಲ್ಲ . ಕಂತನ ವೇಷ ಹಾಕಿ ವಿಷ ಕಾರುವ ಇವರಿಗೆ ಲಿಂಗಾಯತ ಬಸವ ಲಿಂಗಾಯತ ಪರಂಪರೆಯ ಮಠದ ಪೀಠದ ಮೇಲೆ ಕೂಡುವ ಹಕ್ಕಿಲ್ಲ.. ಕೂಡಲೆ ಲಿಂಗಾಯತ ಮಠವನ್ನು ತ್ಯಜಿಸಬೇಕು.
ಸ್ವಾಮಿಗಳೇ ನಿಮ್ಮ ಮಾತನ್ನು ಲಿಂಗಯ್ಯ ಮೆಚ್ಚುತ್ತಾನೆ ಯೇ? ನೀವು ಆಡಿದ ಮಾತು ಮುತ್ತಲ್ಲ ಸಣ್ಣ ಮಗು ಕೂಡ ನಿಮಗೆ ಛೀ….ಎನ್ನುತ್ತದೆ.. ನಿಮಗೆ ದಿಕ್ಕಾರವಿರಲಿ.